ಪುತ್ತೂರು:ಜವುಳಿ ಉದ್ಯಮದಲ್ಲಿ ಹೊಸತನವನ್ನು ಪರಿಚಯಿಸಿರುವ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಈ ವರ್ಷದ ಮಾನ್ಸೂನ್ ಮೇಳವು ಇನ್ನಷ್ಟು ಹಲವು ವಿಶೇಷ ಕೊಡುಗೆಗಳೊಂದಿಗೆ ಆ.5ರಿಂದ ಪ್ರಾರಂಭಗೊಳ್ಳಲಿದೆ.
ಕಳೆದ 29 ವರ್ಷಗಳಿಂದ ಪುತ್ತೂರಿನ ಜನತೆಗೆ ಜವುಳಿ ಉದ್ಯಮದಲ್ಲಿ ಮನೆ ಮಾತಮಾತಾಗಿರುವ ರಾಧಾ’ಸ್ ಈ ಭಾರಿ ಹಲವು ಹೊಸತನಗಳೊಂದಿಗೆ ಗ್ರಾಹಕರನ್ನು ಆಕರ್ಷಿಸಲಿದೆ. ಪ್ರತಿ ವರ್ಷ ಮಾನ್ಸೂನ್ ಮೇಳದ ಮೂಲಕ ತನ್ನ ವೈಶಿಷ್ಠ್ಯಪೂರ್ಣ ಸೇವೆಯ ಮೂಲಕ ಮಳಿಗೆಯಲ್ಲಿ ಪ್ರತಿ ದಿನವೂ ಹೊಸ ಹೊಸ ಬಟ್ಟೆಗಳ ಸಂಗ್ರಹ, ವಿನೂತನ ಶೈಲಿಯ, ಕಣ್ಮನ ಸೆಳೆಯುವ ನವನವೀನ ಮಾದರಿಯ ಉಡುಪುಗಳು, ಅತೀ ಕಡಿಮೆ ಬೆಲೆಗೆ ದೊರೆಯಲಿದ್ದು, ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳನ್ನು ಖರೀದಿಸುವ ವಿಪುಲ ಅವಕಾಶವನ್ನು ರಾಧಾಸ್ ಮಳಿಗೆಯು ಕಲ್ಪಿಸಿದೆ. ಮೂರು ಅಂತಸ್ತಿನ ಮಳಿಗೆಯಲ್ಲಿ ಮಕ್ಕಳ, ಮಹಿಳೆಯರ ಹಾಗೂ ಪುರುಷರ ಉಡುಪುಗಳ ಪ್ರತ್ಯೇಕ ವಿಭಾಗಗಳಲ್ಲಿ ಗ್ರಾಹಕರಿಗೆ ತಮ್ಮ ಮನದಿಚ್ಚೆಯ ಉಡುಪುಗಳ ಖರೀದಿಸಲು ಅವಕಾಶ ಕಲ್ಪಿಸಿದೆ.
ಪ್ರತಿ ದಿನ ಹೊಸ ಸಂಗ್ರಹ:
ಫ್ಯಾಕ್ಟರಿಯಿಂದ ನೇರವಾಗಿ ಖರೀದಿಸಿದ ಉಡುಪುಗಳನ್ನು ಮಳಿಗೆಯಲ್ಲಿ ಗ್ರಾಹಕರಿಗೆ ಮಿತ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರತಿ ದಿನ ಹೊಸ ಹೊಸ ಸಂಗ್ರಹಗಳು ಮಳಿಗೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ವಿನೂತನ ಶೈಲಿಯ, ಹೊಸ ಹೊಸ ವಿನ್ಯಾಸದ ಉಡುಪುಗಳು ಕಡಿಮೆ ಬೆಲೆಯಲ್ಲಿ ಲಭ್ಯವಿದ್ದು ಗ್ರಾಹಕರ ಕಣ್ಮನ ಸೆಳೆಯುತ್ತಿದೆ. ಸಾರಿ, ಚೂಡಿದಾರ್ ಪೀಸ್ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್ಗಳು, ನೈಟಿ, ಜಂಟ್ಸ್ ಪ್ಯಾಂಟ್-ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್ಫಿಟ್ಗಳು ಸೇರಿದಂತೆ ಎಲ್ಲಾ ಬಗೆಯ ಉಡುಪುಗಳ ಬೃಹತ್ ಸಂಗ್ರಹವಿದೆ.
ಉತ್ತಮ ಗುಣಮಟ್ಟ, ಅತೀ ಕಡಿಮೆ ದರ:
ನೇರವಾಗಿ ಪ್ಯಾಕ್ಟರಿಯಿಂದ ಖರೀದಿಸಿದ ಉಡುಪುಗಳನ್ನು ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಸಾರಿ, ಚೂಡಿದಾರ್ ಪೀಸ್ಗಳು, ಕುರ್ತಿಸ್, ರೆಡಿಮೇಡ್ ಚೂಡಿದಾರ್ಗಳು, ನೈಟಿ, ಜಂಟ್ಸ್ ಶರ್ಟ್ ಹಾಗೂ ಮಕ್ಕಳ ವೆಸ್ಟರ್ನ್ ಔಟ್ಫಿಟ್ಗಳು ಸೇರಿದಂತೆ ಎಲ್ಲಾ ಬಗೆಯ ಉಡುಪಗಳ ಬೃಹತ್ ಸಂಗ್ರಹವಿದೆ. ಹಿರಿಯ ಅನುಭವೀ ಸಿಬಂದಿಗಳಿಂದ ಗ್ರಾಹಕರ ಅಭೀಷ್ಟೆಗಳಿಗೆ ಅನುಗುಣವಾಗಿ ಮಳಿಗೆಯಲ್ಲಿ ಸಿಬ್ಬಂದಿಗಳು ನೀಡುತ್ತಿರುವ ಸೇವೆಯಿಂದಾಗಿ ಹೆಸರಾಂತ ಮಳಿಗೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೊಡುಗೆಗಳು ಸೀಮಿತ ದಿನಗಳ ತನಕ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮ್ಹಾಲಕರು ತಿಳಿಸಿದ್ದಾರೆ.