ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ.ಬಿ.ಸಿ ಟ್ರಸ್ಟ್ ಪುತ್ತೂರು ವತಿಯಿಂದ ಕೆಯ್ಯೂರು ಒಕ್ಕೂಟದ ಆಟಿಡೊಂಜಿ ದಿನ ಕಾರ್ಯಕ್ರಮ 

0

ಕೆಯ್ಯೂರು: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪುತ್ತೂರು ಇದರ ವತಿಯಿಂದ ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಾರ್ಯಕ್ಷೇತ್ರ ಕೆಯ್ಯೂರು ಒಕ್ಕೂಟದ  ಆಟಿಡೊಂಜಿ ದಿನ  ಕಾರ್ಯಕ್ರಮವು ಕೆಪಿಎಸ್ ಪ್ರಾಥಮಿಕ ವಿಭಾಗ ಕೆಯ್ಯೂರು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ. ಕ್ಷೇ.ಧ. ಗ್ರಾ. ಯೋಜನೆ ಜನಜಾಗೃತಿ ಸದಸ್ಯ ಎ.ಕೆ ಜಯರಾಮ ರೈ ಕೆಯ್ಯೂರು  ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ನಮ್ಮಿಂದ ಮುಂದಿನ ಜನಾಂಗಕ್ಕೆ ಆಟಿ ತಿಂಗಳಿನಲ್ಲಿ, ಇಂತಹ ಕಾರ್ಯಕ್ರಮಗಳ ಮೂಲಕ  ನೆನಪಿಸುವುದರಿಂದ  ಮನವರಿಕೆಯಾಗುತ್ತದೆ. ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ಯೋಜನೆಯ ಮೂಲಕ ನಡೆಯಲಿ ಎಂದರು.

ಕೆಯ್ಯೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ಕೆ. ಎಸ್  ಕಣಿಯಾರು ಅಧ್ಯಕ್ಷತೆ ವಹಿಸಿ,  ಆಟಿ ಎಂದರೆ ಗಮ್ಮತ್ತಿನ ದಿನ ಅಲ್ಲ, ಅದು ಕಷ್ಟದ ದಿನಗಳನ್ನು ನೆನಪಿಸುವ ದಿನ, ಇಂತಹ ಆಚರಣೆಯಿಂದ ಕಷ್ಟದ ದಿನಗಳನ್ನು ನೆನಪಿಟ್ಟುಕೊಳ್ಳಬೇಕು ಎಂದರು.

ಮುಖ್ಯ  ಅತಿಥಿ ಪುತ್ತೂರು ತಾಲೂಕು ಯೋಜನಾಧಿಕಾರಿ ಶಶಿಧರ್ ಎಂ, ಮಾತನಾಡಿ ಇಲ್ಲಿ ಸೇರಿರುವ ಎಲ್ಲರಿಗೂ ಶಕ್ತಿ ಎಂದರೆ ಅದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರಣ. ಪೂಜ್ಯರು ನಲವತ್ತು ವರ್ಷಗಳ ಹಿಂದೆ ಕಂಡ ಕನಸು ನನಸಾಗುತ್ತಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ಅನೇಕ ಕಡು ಬಡವರು, ಒಂದೇ ರೀತಿಯಲ್ಲಿ ಬದುಕುವ ವ್ಯವಸ್ಥೆಯಾಗಿದೆ. ಕೃಷಿ ಭೂಮಿ ಅಭಿವೃದ್ಧಿಯಾಗುತ್ತಿದೆ ಎಂದರು.

ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಕೆ, ಶ್ರೀ. ಕ್ಷೇ. ಧ. ಗ್ರಾ. ಯೋಜನೆ ಕೇಂದ್ರ ಒಕ್ಕೂಟ ಅಧ್ಯಕ್ಷ ಉದಯಕುಮಾರ್, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯ ಗುರು ಬಾಬು ಎಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಕ್ಕಳಿಗೆ , ಮಹಿಳೆಯರಿಗೆ, ಪುರುಷರಿಗೆ ಆಟೋಟ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು.

ಒಕ್ಕೂಟದ ಸಾಧನಾ ವರದಿಯನ್ನು ಕೆಯ್ಯೂರು ಒಕ್ಕೂಟದ ಸೇವಾ ಪ್ರತಿನಿಧಿ ವಾರಿಜಾ.ವೈ ಮಂಡಿಸಿದರು.ಪಾಲ್ತಾಡಿ  ವಿಭಾಗದ ಸೇವಾ ಪ್ರತಿನಿಧಿ ಜಯಕುಮಾರಿ ಸ್ವಾಗತಿಸಿ, ಕೆಯ್ಯೂರು ಒಕ್ಕೂಟದ ಕಾರ್ಯದರ್ಶಿ ವನಿತಾ ಎಂ ವಂದಿಸಿ, ಕಾರ್ಯಕ್ರಮ ನಿರೂಪಣೆಯನ್ನು ಶುಭವತೀ ಪಿ.ಸಿ ನಿರ್ವಹಿಸಿದರು.

LEAVE A REPLY

Please enter your comment!
Please enter your name here