ಮಂಗಳೂರು-ಬೆಂಗಳೂರು ನಡುವೆ ರೈಲು ಸಂಚಾರ ಪುನರಾರಂಭ

0

ಕಾಣಿಯೂರು: ಮಂಗಳೂರು -ಬೆಂಗಳೂರು ರೈಲು ಮಾರ್ಗದ ಎಡಕುಮೇರಿ-ಕಡಗರವಳ್ಳಿ ನಡುವಿನ ದೋಣಿಗಲ್ ಎಂಬಲ್ಲಿ ರೈಲು ಮಾರ್ಗದಲ್ಲಿ ಸಂಭವಿಸಿದ್ದ ಭೂಕುಸಿದ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುರುವಾರದಿಂದ ರೈಲು ಸಂಚಾರ ಪುನರಾರಂಭಗೊಂಡಿದೆ.


ಜು.26ರಂದು ರಾತ್ರಿ ರೈಲು ಮಾರ್ಗದ ದೋಣಿಗಲ್ ಎಂಬಲ್ಲಿ ಭೂ ಕುಸಿತ ಸಂಭವಿಸಿದ ಹಿನೆಲೆಯಲ್ಲಿ ತಕ್ಷಣದಿಂದಲೇ ಮಂಗಳೂರು-ಬೆಂಗಳೂರು ನಡುವಿನ ಎಲ್ಲಾ ರೈಲುಗಳ ಸಂಚಾರ ಸ್ಥಗಿತಗೊಳಿಸಿ ರೈಲು ಮಾರ್ಗದ ದುರಸ್ತಿ ಕಾರ್ಯ ಆರಂಭಿಸಲಾಗಿತ್ತು. ಸುರಿಯುತ್ತಿರುವ ಭಾರೀ ಮಳೆ, ಹವಾಮಾನ ವೈಪರೀತ್ಯದ ನಡುವೆಯೂ ಸವಾಲಿನಿಂದ ರೈಲು ಮಾರ್ಗದ ದುರಸ್ತಿಯನ್ನು ಮುಂದುವರಿಸಲಾಗಿತ್ತು. ಆ.4ರಂದು ರೈಲು ಮಾರ್ಗದ ದುರಸ್ತಿ ಕಾರ್ಯ ನಡೆಸಿ ಪರಿಶೀಲಿಸಿ ಗೂಡ್ಸ್ ರೈಲಿನ ಪ್ರಾಯೋಗಿಕ ಓಡಾಟ ನಡೆಸಲಾಗಿತ್ತು. ಆ.6ರಂದು ಲೋಡೆಡ್ ಗೂಡ್ಸ್ ರೈಲು ಓಡಾಟ ನಡೆಸಲಾಗಿತ್ತು. ಮುನ್ನೆಚ್ಚರಿಕಾ ಕ್ರಮಕ್ಕೆ ಗಂಟೆಗೆ 15 ಕಿ.ಮೀ. ವೇಗದ ನಿರ್ಬಂಧ ವಿಧಿಸಲಾಗಿತ್ತು.


ರೈಲು ಮಾರ್ಗದ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಬಳಿಕ ಗುರುವಾರ ಮೊದಲ ಪ್ರಯಾಣಿಕ ರೈಲು ಸಂಖ್ಯೆ 16575 ಯಶವಂತಪುರ-ಮಂಗಳೂರು ಜೂ.ಗೋಮಟೇಶ್ವರ ಎಕ್ಸ್ಪ್ರೆಸ್ ಅನ್ನು ಮಧ್ಯಾಹ್ನ ದುರಸ್ತಿ ನಡೆಸಲಾದ ಸ್ಥಳದ ರೈಲು ಮಾರ್ಗದ ಮೂಲಕ ಸಂಚರಿಸಲು ಅವಕಾಶ ನೀಡಲಾಗಿತ್ತು. ಮುಂದೆ ಈ ಮಾರ್ಗದಲ್ಲಿ ನಿಗದಿತ ಸಮಯದಂತೆ ರೈಲುಗಳು ಸಂಚರಿಸಲಿದೆ. ರೈಲ್ವೇ ಇಲಾಖೆಯ ಮೈಸೂರು ವಿಭಾಗದ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಮತ್ತು ಎಜಿಎಂ ಕೆ.ಎಸ್.ಜೈನ್ ಅವರು ದುರಸ್ತಿ ಕಾರ್ಯದಲ್ಲಿನ ತಂಡವನ್ನು ಶ್ಲಾಸಿದ್ದಾರೆ.

LEAVE A REPLY

Please enter your comment!
Please enter your name here