ನಮ್ಮ ಜೀವನ ಪದ್ಧತಿಯಲ್ಲಿ ಸುಧಾರಣೆ ಮಾಡಿಕೊಂಡರೆ ಉತ್ತಮ ಆರೋಗ್ಯ – ಡಾ.ಕೃಷ್ಣಮೋಹನ್ ಬಿ ಆರ್.
ಬೆಟ್ಟಂಪಾಡಿ: ಪ್ರಿಯದರ್ಶಿನಿ ವಿದ್ಯಾಸಂಸ್ಥೆ ವಿದ್ಯಾಗಿರಿ ಬೆಟ್ಟಂಪಾಡಿ ಇದರ ಆಶ್ರಯದಲ್ಲಿ ನಿಡ್ಪಳ್ಳಿ ಗ್ರಾಮ ವಿಕಾಸ ಯೋಜನೆಯ ಪರಿಕಲ್ಪನೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ ಕಾಟುಕುಕ್ಕೆ ಇದರ ಸಹಯೋಗದೊಂದಿಗೆ ಆ.11 ರಂದು ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಉಚಿತ ಆಯುರ್ವೇದ ಮೆಡಿಕಲ್ ಕ್ಯಾಂಪ್ ನಡೆಯಿತು.
ಮುಖ್ಯ ಅತಿಥಿ ಪೆರ್ಲ ಚಿನ್ಮಯ ಕ್ಲಿನಿಕ್ ನ ಡಾ. ಕೃಷ್ಣ ಮೋಹನ್ ಬಿ. ಆರ್. ಮಾತನಾಡಿ, ಮಳೆಗಾಲದ ಈ ಸಮಯದಲ್ಲಿ ಮಲೇರಿಯಾ ಡೆಂಗ್ಯೂ ಜ್ವರಗಳು ಬರುತ್ತದೆ ಅದಕ್ಕಾಗಿ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡು ನಮ್ಮ ಜೀವನ ಪದ್ಧತಿಯಲ್ಲಿ ಸುಧಾರಣೆ ಮಾಡಿಕೊಂಡರೆ ಉತ್ತಮ. ಇದರಿಂದ ಜನರ ಆರೋಗ್ಯವು ವೃದ್ಧಿಯಾಗುತ್ತದೆ’ ಎಂದರು.
ಆಯುರ್ವೇದ ತಜ್ಞ ಡಾ. ಸತ್ಯನಾರಾಯಣ ಬಿ. ಪ್ರಶಾಂತಿ ಕ್ಲಿನಿಕ್ ಬಾಯಾರುಪದವು, ಡಾ. ಕೃಷ್ಣಮೋಹನ ಬಿ ಆರ್ ಚಿನ್ಮಯ ಕ್ಲಿನಿಕ್ ಪೆರ್ಲ, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ರಂಗನಾಥ ರೈ ಗುತ್ತು, ಶ್ರೀ ಸತ್ಯ ಸಾಯಿ ಸೇವಾ ಸಮಿತಿಯ ಸಂಚಾಲಕ ಯೋಗೀಶ್ ಖಂಡೇರಿ, ಸದಸ್ಯ ಪ್ರಸಾದ್ ಹಾಗೂ ಶಾಲಾ ಮುಖ್ಯಗುರು ರಾಜೇಶ್ ನೆಲ್ಲಿತಡ್ಕ ಉಪಸ್ಥಿತರಿದ್ದರು.
ಸತ್ಯಸಾಯಿ ಸೇವಾ ಸಮಿತಿ ಸದಸ್ಯರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಟ್ಟಂಪಾಡಿ ವಲಯ ಸದಸ್ಯರು, ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ಶಿಕ್ಷಕ ವೃಂದ, ಪೋಷಕರು, ನಿಡ್ಪಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಶ್ರೀ ಗೋಪಾಲಕೃಷ್ಣ ಫಾರ್ಮಸಿ ಕುಂಬಳೆ, ಡಾ. ರವಿ ನಾರಾಯಣ , ಶ್ರೀ ಸದ್ಗುರು , ಸಿ ಕೆ ಎಂ ಸಹಕರಿಸಿದರು. 78 ಫಲಾನುಭವಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಮುಖ್ಯ ಗುರು ರಾಜೇಶ್ ನೆಲ್ಲಿತಡ್ಕ ಸ್ವಾಗತಿಸಿ, ಶಿಕ್ಷಕಿ ಮೋಹಿನಿ ಕಾರ್ಯಕ್ರಮ ನಿರೂಪಿಸಿದರು.