ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಗೌಡ ಕೋಡಿಬೈಲು ನೇಮಕ

0

ಪುತ್ತೂರು: ಗ್ರಾಮಾಂತರ ಮಂಡಲದ ಇನ್ನೋರ್ವ ಪ್ರಧಾನ ಕಾರ್ಯದರ್ಶಿ ಉಮೇಶ್ ಗೌಡ ಕೋಡಿಬೈಲು ಅವರು ವೀರಮಂಗಲ ಕೋಡಿಬೈಲು ಪುಟ್ಟಣ್ಣ ಗೌಡ ಮತ್ತು ಲಕ್ಷ್ಮೀ ಅವರ ಪುತ್ರ. 2001ರಿಂದ 2013ರ ತನಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಡಲ ಜವಾಬ್ದಾರಿ ನಿರ್ವಹಿಸಿದ್ದು, ಹಿಂದು ಜಾಗರಣ ವೇದಿಕೆಯಲ್ಲಿ ಒಂದು ಅವಧಿಯಲ್ಲಿ ಸಹ ಸಂಚಾಲಕರಾಗಿದ್ದರು.ಪಕ್ಷದಲ್ಲಿ ಶಾಂತಿಗೋಡು ಗ್ರಾಮ ಸಮಿತಿಯಲ್ಲಿ ಶಕ್ತಿ ಕೇಂದ್ರದ ಕಾಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಇದೀಗ ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡಿದ್ದಾರೆ.ಈ ಹಿಂದೆ ಇವರು ಪುತ್ತಿಲ ಪರಿವಾರದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು.ಇವರು ಪತ್ನಿ ಪವಿತ್ರಾ, ಪುತ್ರರಾದ ಅಭಿನವ್ ಮತ್ತು ರಿಷಿಕ್ ಅವರೊಂದಿಗೆ ಸುಖೀ ಸಂಸಾರ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here