ಗೋಳಿತಟ್ಟು: 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗೋಳಿತಟ್ಟು ಶಾಲೆಯಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಗೋಪಾಲ ಗೌಡರು ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಶುಭ ಹಾರೈಸಿದರು.
ಗೋಳಿತಟ್ಟು ಶಾಲೆಯು 2025-26ನೇ ಶೈಕ್ಷಣಿಕ ವರ್ಷದಲ್ಲಿ ಶತಮಾನೋತ್ಸವವನ್ನು ಆಚರಿಸಲಿದ್ದು, ಆ ಪ್ರಯುಕ್ತ ನಿಧಿ ಸಂಗ್ರಹಿಸುವ ಸದುದ್ಧೇಶದಿಂದ “ಕುಂಭ ನಿಧಿ” ಯನ್ನು ಶ್ರೀ ನೇಮಣ್ಣ ಪೂಜಾರಿ ಪಾಲೆರಿ ಇವರ ಅಮೃತ ಹಸ್ತದಿಂದ ಉದ್ಘಾಟಿಸಲಾಯಿತು. ಪ್ರತಿ ಮನೆಗಳಿಗೂ ಕುಂಭವನ್ನು ವಿತರಿಸಲಾಯಿತು. ಗ್ರಾ. ಪ.ಉಪಾಧ್ಯಕ್ಷ ಬಾಬು ಪೂಜಾರಿ ಕಿನ್ಯಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಮುಖ್ಯ ಶಿಕ್ಷಕಿ ಶ್ರೀಮತಿ ಜಯಂತಿ ಬಿ ಎಂ ಸರ್ವರನ್ನೂ ಸ್ವಾಗತಿಸಿದರು. ಗೋಪಾಲ ಗೌಡ ಕೆ, ವೆಂಕಪ್ಪ ಗೌಡ ಡೆಬ್ಬೇಲಿ, ಮಾಧವ ಸರಳಾಯ ತಿರ್ಲೆ, ಡಾ.ರಾಮಕೃಷ್ಣ ಭಟ್ ಆಂಜರ, ಸುಂದರ ಶೆಟ್ಟಿ ಪುರ, ನೋಣಯ್ಯ ಗೌಡ ಡೆಬ್ಬೇಲಿ, ಸೇಸಪ್ಪ ಗೌಡ ಬಳಕ್ಕ, ಕೊರಗಪ್ಪ ಸಾಲಿಯಾನ್ ಶಿವಾರು, ಕೇಶವ ಪೂಜಾರಿ ಪಾಲೇರಿ, ಶೇಖರ ಗೌಡ ಅನಿಲಭಾಗ್, ಪುರುಷೋತ್ತಮ ಗೌಡ ಕುದ್ಕೊಳಿ, ವಿಶ್ವನಾಥ ಗೌಡ ಪೆರಣ ಅಬ್ದುಲ್ ಹಾರೀಫ್, ಅಬ್ದುಲ್ ನಾಸಿರ್ ಸಮರಗುಂಡಿ, ಕುಶಾಲಪ್ಪ ಗೌಡ ಅನಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್ ಡಿ ಎಂ ಸಿ ಸದಸ್ಯರು, ಗ್ರಾಮ ಪಂಚಾಯಿತಿ ಸದಸ್ಯರು, ಆಟೋ ಚಾಲಕರು ಮತ್ತು ಮಾಲಕರು, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸದಸ್ಯರು, ಒಡಿಯೂರು ಕ್ಷೇತ್ರದ ಘಟ ಸಮಿತಿ ಸದಸ್ಯರು, ಗೋಳಿತಟ್ಟು ಪರಿಸರದ ಎಲ್ಲಾ ವಿದ್ಯಾಭಿಮಾನಿಗಳು,ಪೋಷಕರು, ಶಿಕ್ಷಕ ವೃಂದದವರು, ಶಾಲಾ ಅಡುಗೆ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು ಸಹಕರಿಸಿದರು.