ಬಿಳಿಯೂರಿನ ಸಾಮ್ರಾಟ್ ಯುವಕ ಮಂಡಲದ ವತಿಯಿಂದ ಸಾಧಕರಿಗೆ ಸನ್ಮಾನ

0

ಪುತ್ತೂರು: ಸಾಮ್ರಾಟ್ ಯುವಕ ಮಂಡಲ (ರಿ.) ಬಿಳಿಯೂರು ಇದರ ವತಿಯಿಂದ ಆ.25ರ ರವಿವಾರ ಬಿಳಿಯೂರಿನಲ್ಲಿ ಶ್ರೀ ಕೃಷ್ಣಜನ್ಮಾಷ್ಠಮಿಯ ಪ್ರಯುಕ್ತ ಆಯೋಜಿಸಿದ್ದ ‘ಕ್ರೀಡಾ ಸಂಭ್ರಮ 2024’ರಲ್ಲಿ ಇಬ್ಬರು ಅಪ್ರತಿಮ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಭಾರತ ಭೂ ಸೇನೆಯಲ್ಲಿ ಸತತ ಮೂವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ ಹನಿ ಲೆಫ್ಟಿನಂಟ್ ಪದವಿ ಪಡೆಯುವುದರ ಮೂಲಕ ಇತ್ತೀಚಿಗೆ ನಿವೃತ್ತಿ ಹೊಂದಿರುವ ಹಿರೇಬಂಡಾಡಿನ ಸುಬೇದಾರ್ /ಹನಿ ಲೆಫ್ಟಿನೆಂಟ್ ಗುಣಕರ ಕೆರ್ನಡ್ಕ ಮತ್ತು ರೇಶ್ಮಾ ದಂಪತಿ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆಯ ಮೂಲಕ ನೂರಾರು ಕವಿತೆ, ಚುಟುಕು ಹಾಗೂ ಹನಿಗವನ ರಚನೆ ಮೂಲಕ ಹಲವಾರು ಪ್ರಶಸ್ತಿಗಳ ಜೊತೆ ‘ಕಲಾರತ್ನ ಬಿರುದು’ ತನ್ನದಾಗಿಸಿಗೊಂಡಿರುವ ಯುವ ಸಾಹಿತಿ ಸತೀಶ್ ಬಿಳಿಯೂರು ಇವರನ್ನು ಸಮ್ರಾಟ್ ಯುವಕ ಮಂಡಲದ ಸರ್ವ ಸದಸ್ಯರು, ಅತಿಥಿಗಳು ಹಾಗೂ ಊರಿನ ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಪ್ರೀತಿ ಪೂರ್ವಕವಾಗಿ ಸನ್ಮಾನಿಸಲಾಯಿತು .

ಈ ಸಂಧರ್ಭದಲ್ಲಿ ಉಪ್ಪಿನಂಗಡಿಯ ಅದ್ವಿಕ್ ದಂತ ಕ್ಲಿನಿಕ್ ನ ಡಾ. ಆಶಿತ್, ಪೆರ್ನೆ ಪಂಚಾಯತ್ ಸದಸ್ಯರುಗಳಾದ ತನಿಯಪ್ಪ ಪೂಜಾರಿ, ನವೀನ್ ಕುಮಾರ್ ಪದಬರಿ, ಶ್ರೀಮತಿ ರೇವತಿ, ಕೇಶವ ಪೂಜಾರಿ ಸುಣ್ಣಾನ ಮತ್ತು ಗಣ್ಯರಾದ ಸತೀಶ್ ಶೆಟ್ಟಿ ಒಂಜರೆ ಪಲ್ಕೆ, ಹೊನ್ನಪ್ಪ ಪೂಜಾರಿ ರಕ್ಷಾ ನಿಲಯ ಬಿಳಿಯೂರು ಮತ್ತು ಸಾಮ್ರಾಟ್ ಯುವಕ ಮಂಡಲದ ಸ್ಥಾಪನಾಧ್ಯಕ್ಷ ಕಿರಣ್ ಕುಮಾರ್ ಬೆದ್ರ, ವ್ಯವಸ್ಥಾಪನಾಧ್ಯಕ್ಷ ಉದಯ ಪೂಜಾರಿ ಮಠoತಬೆಟ್ಟು, ಗಣೇಶ್ ರೈ ಮಂಜಿತೊಟ್ಟು ಹಾಗೂ ಎಲ್ಲಾ ಪದಾಧಿಕಾರಿಗಳ ಜತೆ ಸರ್ವ ಸದಸ್ಯರು ಹಾಜರಿದ್ದರು.

LEAVE A REPLY

Please enter your comment!
Please enter your name here