ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆ

0

ಮುಖ್ಯ ಅತಿಥಿಗಳಾಗಿ  ತಹಶೀಲ್ದಾರ್ ಪುರಂದರ ಹೆಗ್ಡೆ ಮತ್ತು ಜಿಲ್ಲಾ ರೋಟರಿ ನಾಮ ನಿರ್ದೇಶಿತ ಗವರ್ನರ್ ಸತೀಶ್ ಬೊಲಾರ್

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ವಿದ್ಯಾರ್ಥಿ ಒಕ್ಕೂಟದ ಉದ್ಘಾಟನೆಯನ್ನು ಸತೀಶ್ ಬೊಲಾರ್  ದೀಪ ಬೆಳಗಿಸಿ ಉದ್ಘಾಟಿಸಿದರು. ಪುತ್ತೂರಿನ ತಹಶೀಲ್ದಾರ್ ಪುರಂದರ ಹೆಗ್ಡೆ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.  ಕಾಲೇಜಿನ ವ್ಯವಸ್ಥಾಪಕ ನಿರ್ದೇಶಕಿ ಕಲಾವತಿ ಜಯಂತ್ ನಡುಬೈಲ್ ಮತ್ತು ಆಡಳಿತಾಧಿಕಾರಿ ಅರ್ಪಿತ್  ಟಿ ಎ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸತೀಶ್ ಬೊಲಾರ್ ಜೀವನದಲ್ಲಿ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಎಲ್ಲಾ  ವಿದ್ಯಾರ್ಥಿಗಳಿಗೂ ಒಂದಲ್ಲ ಒಂದು ರೀತಿಯ  ಕೌಶಲ್ಯ ಇದ್ದೇ ಇರುತ್ತದೆ  ಅದನ್ನು ನಾವು ಸಮಯೋಚಿತವಾಗಿ ಪ್ರಸ್ತುತ ಪಡಿಸಬೇಕು. ನಾಯಕತ್ವ ಗುಣ ಮೈಗೂಡಿಸಿ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಗುರುತಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. 
ಮುಖ್ಯ ಅತಿಥಿಯಾಗಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ, ಮೌಲ್ಯಾಧಾರಿತ ಶಿಕ್ಷಣ  ಹಾಗೂ ಉತ್ತಮ ಉದ್ಯೋಗ ಸಿಗಬೇಕು  ಎಂದು ಕಷ್ಟ ಪಟ್ಟು ವಿದ್ಯಾ ಸಂಸ್ಥೆಗಳಿಗೆ ಕಳುಹಿಸುತ್ತಾರೆ. ಅವರ ನಿರೀಕ್ಷೆಗೆ ಪೂರಕವಾಗಿ ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ಮಾಡಬೇಕು ಎಂದು ಹಿತ ನುಡಿದರು. 

ಪ್ರಾಂಶುಪಾಲರಾದ ಸಂಪತ್ ಕೆ ಪಕ್ಕಳ ವಿದ್ಯಾರ್ಥಿ ಒಕ್ಕೂಟಕ್ಕೆ  ಪ್ರಮಾಣವಚನ ಬೋಧಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್  ಟಿ ಎ ನೂತನ ಪದಾಧಿಕಾರಿಗಳಿಗೆ ಮಿನಿಟ್ಸ್, ಲೆಕ್ಕಪತ್ರ  ಮತ್ತು  ಫೈಲ್ ಗಳನ್ನು ಹಸ್ತಾಂತರಿಸಿದರು. ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ  ವಿದ್ಯಾರ್ಥಿ ಒಕ್ಕೂಟವು  ಕಾಲೇಜಿನ ಒಂದು ಅವಿಭಾಜ್ಯ ಅಂಗ. ವಿದ್ಯಾರ್ಥಿಗಳ ಕಲೆ, ಸಾಹಿತ್ಯ ಮತ್ತು ಕ್ರೀಡಾ  ಅಭಿರುಚಿ  ಗಳಿಗೆ ವೇದಿಕೆಯಾಗಿ,  ವಿದ್ಯಾರ್ಥಿಗಳ ಪ್ರತಿನಿಧಿಗಳಾಗಿ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದರು. 

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ಸ್ಥಾನಕ್ಕೆ ಅಂತಿಮ ಪದವಿ ವಾಣಿಜ್ಯ ವಿಭಾಗದ  ಜೀವನ್, ಉಪಾಧ್ಯಕ್ಷೆಯಾಗಿ ನವಮಿ ಅಂತಿಮ ಪದವಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು  ಕಾರ್ಯದರ್ಶಿಯಾಗಿ ಪೂಜಿತ ಕೆ.  ಎಂ ಅಂತಿಮ ಪದವಿ ಆಂತರಿಕ ವಿನ್ಯಾಸ ವಿಭಾಗದಿಂದ ಚುನಾಯಿತರಾಗಿದ್ದರು.

ವಿದ್ಯಾರ್ಥಿ ಒಕ್ಕೂಟದ  ಜೊತೆ ಕಾರ್ಯದರ್ಶಿಯಾಗಿ ವಿಜೇತ ದ್ವಿತೀಯ ಡಿಪ್ಲೋಮಾ ಫ್ಯಾಷನ್  ಡಿಸೈನ್ ವಿಭಾಗ, ಖಜಾಂಚಿಯಾಗಿ ನರೇಂದ್ರ ಕೆ ಅಂತಿಮ ಪದವಿ ಫ್ಯಾಷನ್ ಡಿಸೈನ್ ವಿಭಾಗ ಮತ್ತು  ಕುಮಾರಿ ಟೀನಾ ದ್ವಿತೀಯ ಪದವಿ ವಾಣಿಜ್ಯ ವಿಭಾಗ, ಕ್ರೀಡಾ ಕಾರ್ಯದರ್ಶಿಯಾಗಿ ವಿಸ್ಮಿತ ಅಂತಿಮ ವಾಣಿಜ್ಯವಿಭಾಗ ಹಾಗೂ ಜೊತೆಕಾರ್ಯದರ್ಶಿ ಗಳಾಗಿ ಸೃಜನ್.ಕೆ  ದ್ವಿತೀಯ  ಬಿ. ಸಿ. ಎ ಮತ್ತು  ಡಿoಪಲ್  ಕೆ. ಆರ್  ದ್ವಿತೀಯ ಆಂತರಿಕ ವಿನ್ಯಾಸ ವಿಭಾಗ ಮತ್ತು ಡಿಪ್ಲೋಮಾ ವಿಭಾಗ, ಸಾಂಸ್ಕೃತಿಕ  ಕಾರ್ಯದರ್ಶಿಯಾಗಿ ಮಧುರ  ಆರ್. ವಿ ಅಂತಿಮ ಪದವಿ ಫ್ಯಾಷನ್ ಡಿಸೈನ್ ವಿಭಾಗ ಹಾಗೂ ಜೊತೆ ಕಾರ್ಯದರ್ಶಿಗಳಾಗಿ ಕೀರ್ತನ್.ಕೃಷ್ಣ  ಪಿ ಡಿ. ದ್ವಿತೀಯ ಬಿ ಸಿ. ಎ ಮತ್ತು  ಧನ್ಯ ಶ್ರೀ ದ್ವಿತೀಯ ಪದವಿ  ಫ್ಯಾಷನ್  ಡಿಸೈನ್  ವಿಭಾಗ ಮತ್ತು  ಡಿಪ್ಲೋಮಾ, ಮಾಧ್ಯಮ ಕಾರ್ಯದರ್ಶಿಯಾಗಿ  ಭಾರ್ಗವಿ .ಎಂ ಅಂತಿಮ ಪದವಿ ಫ್ಯಾಷನ್  ಡಿಸೈನ್  ವಿಭಾಗ ಹಾಗೂ  ಜೊತೆ  ಕಾರ್ಯದರ್ಶಿಗಳಾಗಿ ಉಜ್ವಲ.ಯು.ನಾಯ್ಕ್ ದ್ವಿತೀಯ ಪದವಿ ವಾಣಿಜ್ಯ ವಿಭಾಗ ಮತ್ತು  ಅಂಕಿತ  ದ್ವಿತೀಯ ಪದವಿ  ವಾಣಿಜ್ಯ ವಿಭಾಗದಿಂದ ಆಯ್ಕೆಗೊಂಡಿದೆದ್ದಾರೆ. ವಿರೋಧ ಪಕ್ಷದ ನಾಯಕನಾಗಿ ಕೀರ್ತನ್  ಆಯ್ಕೆಯಾಗಿದ್ದಾರೆ.
ಕಾಲೇಜಿನ ಉಪ ಪ್ರಾಂಶುಪಾಲರು  ಮತ್ತು ಆಂತರಿಕ ವಿನ್ಯಾಸ ವಿಭಾಗದ ಮುಖ್ಯಸ್ಥ ರಕ್ಷನ್ ಟಿ ಆರ್ ಸ್ವಾಗತಿಸಿ, ಕಾಲೇಜ್  ಒಕ್ಕೂಟದ ಕಾರ್ಯದರ್ಶಿ ಪೂಜಿತ ಕೆ.  ಎಂ ಅಂತಿಮ ಪದವಿ ಆಂತರಿಕ ವಿನ್ಯಾಸ ವಿಭಾಗ ವಂದಿಸಿ, ಬಿ ಎಚ್.ಎಸ್ ವಿಭಾಗದ ಉಪನ್ಯಾಸಕಿ ಶ್ರುತ  ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here