ಸಿನಿಮಾ ಪ್ರೇಕ್ಷಕರ ಮನಗೆದ್ದ ಲಾಫಿಂಗ್ ಬುದ್ಧ- ಪುತ್ತೂರು ಭಾರತ್ ಸಿನಿಮಾಸ್ ನಲ್ಲಿ ಮೂರು ಪ್ರದರ್ಶನ

0

ಪುತ್ತೂರು: ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ನಿರ್ಮಾಣದ ಲಾಫಿಂಗ್ ಬುದ್ಧ ಕನ್ನಡ ಚಲನಚಿತ್ರದಲ್ಲಿ ಪುತ್ತೂರಿನ ವಿಜಯಹರಿ ರೈ ಬಳ್ಳಮಜಲುರವರು ಪೋಲೀಸ್ ಇನ್ಸ್ ಪೆಕ್ಟರ್ ರಾಗಿ ಅಮೋಘ ಅಭಿನಯ ಮಾಡಿರುವ ಲಾಫಿಂಗ್ ಬುದ್ಧ ಕನ್ನಡ ಸಿನಿಮಾ ಯಶಸ್ವಿ ಪ್ರದರ್ಶನಗೊಳ್ಳುತ್ತಿದೆ.

ಪುತ್ತೂರಿನ ಭಾರತ್ ಸಿನಿಮಾಸ್ ನಲ್ಲಿ ಮಧ್ಯಾಹ್ನ 1.45, ಸಂಜೆ 4.30 ಹಾಗೂ ರಾತ್ರಿ 7.30 ಕ್ಕೆ ಪ್ರದರ್ಶನ ಇದೆ. ತುಳು ರಂಗಭೂಮಿಯ ಹೆಸರಾಂತ ನಟ ವಿಜಯಹರಿ ರೈರವರು ಮೊದಲಬಾರಿಗೆ ಲಾಫಿಂಗ್ ಬುದ್ಧ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡುತ್ತಿರುತ್ತಾರೆ. ಲಾಫಿಂಗ್ ಬುದ್ಧ ಚಲನ ಚಿತ್ರದಲ್ಲಿ ಪ್ರಮೋದ್ ಶೆಟ್ಟಿ, ತೇಜುಬೆಳವಾಡಿ, ದಿಗಂತ್ , ಸುಂದರರಾಜ್ ತಾರಾಗಣದಲ್ಲಿ ಮೂಡಿಬಂದಿದ್ದು, ಇಂಪಾದ ಸಂಗೀತ ಹಾಗೂ ಹಾಸ್ಯಮಯ ಕಥಾನಕದೊಂದಿಗೆ ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರವಾಗಿದೆ.

LEAVE A REPLY

Please enter your comment!
Please enter your name here