ಪುತ್ತೂರು: ಸೆ.5ರಂದು ಆಚರಿಸಲ್ಪಡುವ ಶಿಕ್ಷಕರ ದಿನಾಚರಣೆಯ ಅಂಗವಾಗಿ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಸದಸ್ಯರು ಹಿರಿಯ ಶಿಕ್ಷಕಿಯಾದ ಎಲಿಜಾ ಡಿಸೋಜಾರವರ ಕೃಷ್ಣ ನಗರದ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಲಾಯಿತು.
77 ವರ್ಷದ ಎಲಿಜ್ ಡಿ’ಸೋಜಾ ರವರು 38 ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿ ಜೀವನವನ್ನು ಮಗ ರೋಶನ್ ಮಿನೇಜಸ್ ಮತ್ತು ನಿಶಾ ಮಿನೇಜಸ್ ಮತ್ತು ಮೊಮ್ಮಕ್ಕಳಾದ ರೀಶಲ್ ಮತ್ತು ರಿಯಾನ್ ರವರೊಂದಿಗೆ ಸುಖಿ ಜೀವನ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಉಪಾಧ್ಯಕ್ಷ ಆಂಟನಿ ಒಲಿವೆರಾರವರು ಸ್ವಾಗತಿಸಿ, ಶಿಕ್ಷಕರ ದಿನಾಚರಣೆಗೆ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಗೈಡಿಂಗ್ ಲಯನ್ ಲ್ಯಾನ್ಸಿ ಮಸ್ಕರೇನಸ್ ರವರು ಮಾತನಾಡಿ, ಸಮಾಜದಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯವಾಗಿದೆ. ಈ ಸಂದರ್ಭದಲ್ಲಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿ ನಂತರ ಶಿಕ್ಷಕಿ ಎಲಿಜ್ ಡಿ’ಸೋಜಾರವರಿಗೆ ಶಾಲು, ಹಾರ, ಪೇಟ,ಫಲವನ್ನು ಕೊಟ್ಟು ಸನ್ಮಾನಿ ಸಿ, ಶುಭ ಹಾರೈಸಿದರು. ಸನ್ಮಾನ ಸ್ವೀಕರಿಸಿದ ಎಲಿಜಾ ಡಿ’ಸೋಜಾರವರು ಶಿಕ್ಷಕಿ ವೃತ್ತಿಯಲ್ಲಿನ ಅನುಭವವನ್ನು ಹಂಚಿಕೊಂಡರು ಮತ್ತು ಪ್ರೀತಿ ಇಟ್ಟು ಗೌರವಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕ್ಲಬ್ ಕೋಶಾಧಿಕಾರಿ ವಿಕ್ಟರ್ ಶರೂನ್ ಡಿ’ಸೋಜಾ ವಂದಿಸಿದರು. ಕಾರ್ಯದರ್ಶಿ ಲೀನಾ ಮಚಾದೊ ಕಾರ್ಯಕ್ರಮ ನಿರೂಪಿಸಿದರು. ಲ್ಯಾನ್ಸಿ ಮಸ್ಕರೇನಸ್ ಬನ್ನೂರುರವರು ಶಿಕ್ಷಕಿ ಎಲಿಜಾ ಡಿ’ಸೋಜರವರ ಕಿರು ಪರಿಚಯ ನೀಡಿದರು.
ಕ್ಲಬ್ಬಿನ ಜೊತೆ ಕಾರ್ಯದರ್ಶಿ ನಿಶಾ ಮಿನೇಜಸ್, ನೋಯೆಲ್ ಸೆರಾವೋ ಮತ್ತು ಲಿಡ್ವಿನ್ ಸೆರಾವೋ ದಂಪತಿ, ಐರಿನ್ ಡಿ’ಸೋಜಾ, ಅನಿತ ಜ್ಯೋತಿ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು.