ಪುತ್ತೂರು: ಕಡಬ ಸೈಂಟ್ ಜೋಕಿಮ್ಸ್ ಚರ್ಚ್ ನಲ್ಲಿ ಮಾತೆ ಮೇರಿಯ ಜನನೋತ್ಸವ ಭಕ್ತಿ, ಸಡಗರದಿಂದ ಆಚರಿಸಲಾಯಿತು. ಬಲಿಪೂಜೆಯನ್ನು ಫಾದರ್ ಪ್ರಕಾಶ್ ಪಾಲ್ ರವರು ಅರ್ಪಿಸಿದರು. ಬಳಿಕ ಮಾತನಾಡಿದ ಅವರು ಕನ್ಯಾ ಮರಿಯಳು ತಮ್ಮ ಜನನದಿಂದ ನಮ್ಮೆಲ್ಲರ ಮನಸ್ಸಿಗೆ ಸಂತೋಷವನ್ನು ಮತ್ತು ಸಂತೃಪ್ತಿಯನ್ನು ದಯಪಾಲಿಸಿದ್ದಾರೆ.
“ಮರಿಯಾ ಜಯಂತಿ, ಕುಟುಂಬದ ಹಬ್ಬ, ನವ ಬೆಳೆಯ ಹಬ್ಬ ಮತ್ತು ವಿಶೇಷವಾಗಿ ಹೆಣ್ಣು ಮಕ್ಕಳ ಹಬ್ಬ. ಆದ್ದರಿಂದ ನಾವು ನಮ್ಮ ಕುಟುಂಬದ, ಮತ್ತು ನೆರೆ- ಹೊರೆಯ ಪ್ರತಿಯೋರ್ವ ಹೆಣ್ಣು ಮಕ್ಕಳಿಗಾಗಿ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ಬಲಿ ಪೂಜಾರ್ಪಣೆಯಲ್ಲಿ, ಮಾತೆಯ ನೋವೇನಾ ಕಾರ್ಯದಲ್ಲಿ ಧರ್ಮ ಕೇಂದ್ರದ ಧರ್ಮಗುರು ಮೆಲ್ವಿನ್ ಫೆರ್ನಾಂಡಿಸ್, ಧಾರ್ಮಿಕ ಸಹೋದರಿಯರು, ಪಾಲನಾ ಪರಿಷತ್ತಿನ ಮತ್ತು ಆರ್ಥಿಕ ಸಮಿತಿಯ ಸದಸ್ಯರು ಮತ್ತು ಎಲ್ಲಾ ಧರ್ಮ ಕೇಂದ್ರದ ಭಕ್ತಾದಿಗಳು ಭಾಗವಹಿಸಿದ್ದರು.