ನಾತೇ ಶರೀಫ್ ದರ್ಬೆಯಿಂದ ಕಿಲ್ಲೆ ಮೈದಾನದ ತನಕ ದಫ್ ತಂಡಗಳೊಂದಿಗೆ ಆಕರ್ಷಣಿಯ ಕಾಲ್ನಡಿಗೆ ಜಾಥಾ
ಪುತ್ತೂರು: ದ.ಕ. ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಪುತ್ತೂರು, ಈದ್ ಮಿಲಾದ್ ಸಮಿತಿ ಪುತ್ತೂರು ತಾಲೂಕು ಇದರ ಜಂಟಿ ಆಶ್ರಯದಲ್ಲಿ 32ನೇ ವರ್ಷದ ಬೃಹತ್ ಮಿಲಾದ್ ಸಮಾವೇಶ ಮತ್ತು ನಾತೇ ಶರೀಫ್ ಕಾರ್ಯಕ್ರಮ ಸೆ.16ರಂದು ಪುತ್ತೂರಿನಲ್ಲಿ ನಡೆಯಲಿದೆ ಎಂದು ದ..ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಸಂಚಾಲಕ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಸಂಜೆ ಗಂಟೆ 4ಕ್ಕೆ ದರ್ಬೆ ಬೈಪಾಸ್ ಜಂಕ್ಷನ್‌ನಿಂದ ಕಿಲ್ಲೆ ಮೈದಾನದ ತನಕ ಪ್ರಖ್ಯಾತ ದಫ್ ತಂಡಗಳೊಂದಿಗೆ ಆಕರ್ಷಣೀಯ ಕಾಲ್ನಡಿಗೆ ಜಾಥಾ ನಡೆಯಲಿದ್ದು, ಕಿಲ್ಲೆ ಮೈದಾನದಲ್ಲಿ ಮಿಲಾದ್ ಸಮಾವೇಶ ನಡೆಯಲಿದೆ. ಸಂಜೆ ನಡೆಯುವ ಕಾಲ್ನಡಿಗೆ ಜಾಥಾವನ್ನು ಸಂಯುಕ್ತ ಜಮಾಅತ್‌ನ ಪ್ರಧಾನ ಕಾರ್ಯದರ್ಸಿ ಎಲ್.ಟಿ. ಅಬ್ದುಲ್ ರಝಾಕ್ ಹಾಜಿ ಉದ್ಘಾಟಿಸಲಿದ್ದಾರೆ. ಮಾಡಾವು ಸಂತೋಷ್ ಗ್ರೂಪ್ಸ್‌ನ ಹುಸೈನಾರ್ ಹಾಜಿ ಧ್ವಜ ಸ್ವೀಕಾರ ಮಾಡಲಿದ್ದಾರೆ. ಕಿಲ್ಲೆ ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಪುತ್ತೂರು ಕೇಂದ್ರ ಜುಮ್ಮಾ ಮಸೀದಿಯ ಮುದರ್ರಿಸ್ ಅಸ್ಸಯ್ಯದ್ ಅಹ್ಮದ್ ಪೂಕೋಯ ತಂಙಳ್ ಅವರು ದುವಾಶೀರ್ವಚನ ನೀಡಲಿದ್ದಾರೆ. ಪಿಡಬ್ಲ್ಯುಡಿ ಗುತ್ತಿಗೆದಾರ ಪಿ.ಎ ಉಸ್ಮಾನ್ ಹಾಜಿ ಚೆನ್ನಾರು ಸಂಪ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನೀರಕಟ್ಟೆ ಅಮ್ಮಾರ್ ಮುಈನಿ ಅವರು ಸಮಾವೇಶ ಉದ್ಘಾಟಿಸಲಿದ್ದಾರೆ. ಶರೀಫ್ ಅಶ್ರಫಿ ಕಾಞಂಗಾಡ್ ಅವರು ಪ್ರಭಾಷಣ ಮಾಡಲಿದ್ದಾರೆ. ಇದೇ ಸಂದರ್ಭ ಜನಪ್ರಿಯ ಪೌಂಢೇಶನ್ ಮತ್ತು ಕಂಬಳಬೆಟ್ಟು ಮುಹಿಯುದ್ದೀನ್ ಮತ್ತು ಇಬ್ರಾಹಿಂ ಜುಮಾ ಮಸೀದಿಯ ಅಧ್ಯಕ್ಷರಾಗಿರುವ ಡಾ|ಅಬ್ದುಲ್ ಬಶೀರ್ ವಿ.ಕೆ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ ಮುಈನುದ್ದೀನ್ ಖಾದಿರಿ ಬೆಂಗಳೂರು ಮತ್ತು ಸಂಗಡಿಗರಿಂದ ಇವರಿಂದ ನಾತೇಶ ಶರೀಫ್ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನ ನಡೆಯಲಿದೆ. ಒಟ್ಟು ಕಾರ್ಯಕ್ರಮದಲ್ಲಿ ಪುತ್ತೂರು ಕಡಬ ತಾಲೂಕಿನ ಸುಮಾರು 5 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ದ.ಕ.ಜಿಲ್ಲಾ ಮುಸ್ಲಿಂ ಯುವಜನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನೌಶಾದ್ ಹಾಜಿ ಬೊಳ್ವಾರು, ಈದ್ ಮಿಲಾದ್ ಸಮಿತಿ ಪುತ್ತೂರು ಇದರ ಕೋಶಾಧಿಕಾರಿ ಇಕ್ಬಾಲ್ ಬಪ್ಪಳಿಗೆ ಉಪಸ್ಥಿತರಿದ್ದರು.