ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ

0

ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರಾಮಕೃಷ್ಣ ಪ್ರೌಢಶಾಲೆ ಕೊಂಬೆಟ್ಟು ಪುತ್ತೂರು ಶಾಲೆಯ ವಿದ್ಯಾರ್ಥಿಗಳಿಗೆ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಸಂಜೆ ಸೆ.13ರಂದು ನಡೆಯಿತು.

ಉದ್ಘಾಟನೆಯನ್ನು ಹೇಮನಾಥ ಶೆಟ್ಟಿ ಕಾವು ಸಂಚಾಲಕರು ರಾಮಕೃಷ್ಣ ಪ್ರೌಢಶಾಲೆ ಪುತ್ತೂರು ಇವರು ದೀಪ ಬೆಳಗಿಸಿ ಶುಭ ಹಾರೈಸಿದರು.
ಸಂಪನ್ಮೂಲ ವ್ಯಕ್ತಿಯಾದ ಲಿಟ್ಲ್ ಫ್ಲವರ್ ಶಾಲೆಯ ದೈಹಿಕ ಶಿಕ್ಷಕರಾದ ಬಾಲಕೃಷ್ಣ ಪೋರ್ದಲ್ ರವರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸ್ವಾಸ್ಥ್ಯ ಸಂಕಲ್ಪ ಮಾಡುವ ಉದ್ದೇಶ ಮದ್ಯಪಾನ ಮತ್ತು ಧೂಮಪಾನಕ್ಕೆ ಮಕ್ಕಳು ಯಾವ ರೀತಿ ಒಳಗಾಗುತ್ತಾರೆ ಮತ್ತು ಅದರಿಂದ ಯಾವ ರೀತಿಯಾಗಿ ಬಲಿಯಾಗುತ್ತಾರೆ ಎಂದು ಉದಾಹರಣೆಯೊಂದಿಗೆ ವಿವರವಾಗಿ ಮಾಹಿತಿ ನೀಡಿದರು.


ಜನಜಾಗೃತಿ ವೇದಿಕೆ ಪುತ್ತೂರು ವಲಯದ ಅಧ್ಯಕ್ಷರಾದ ಸತೀಶ್ ನಾಯ್ಕ್ ರವರು ಸಭಾಧ್ಯಕ್ಷತೆವಹಿಸಿ ಶುಭ ಹಾರೈಸಿದರು. ಬೊಳುವಾರು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಕಾವ್ಯರವರು ಶಾಲಾ ಶಿಕ್ಷಕರಾದ ಗಾಯತ್ರಿ, ಸಂಧ್ಯಾ, ಮಾನಸ, ತುಳಸಿ, ಸೌಮ್ಯ, ಶ್ವೇತ, ಹರ್ಷಿಣಿ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಯವರಾದ ಶಶಿಧರ್ ಎಂ ಮಾತನಾಡುತ್ತಾ ರಾಮಕೃಷ್ಣ ಶಾಲೆ ತುಂಬಾ ಹೆಸರುವಾಸಿಯಾದ ಶಾಲೆ. ಇಲ್ಲಿ ಕಲಿಯುತ್ತಿರುವ ಮಕ್ಕಳು ಸಮಾಜದಲ್ಲಿ ಉತ್ತಮ ಮಾದರಿ ಪ್ರಜೆಗಳಾಗಿ ಇರಬೇಕು. ದುಶ್ಚಟಗಳಿಂದ ದೂರ ಇರುವಂತೆ ಪ್ರಮಾಣ ವಚನ ವಾಚಿಸಿದರು.
ಶಾಲೆಯ ಮುಖ್ಯ ಶಿಕ್ಷಕರಾದ ಜಯಲಕ್ಷ್ಮಿ ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ತಾಲೂಕು ಜನಜಾಗೃತಿ ಅಧ್ಯಕ್ಷರಾದ ಲೋಕೇಶ್ ಹೆಗ್ಡೆ ಯವರು ಪ್ರಾಸ್ತಾವಿಕ ಮಾತನಾಡಿ ಎಲ್ಲರನ್ನೂ ಸ್ವಾಗತಿಸಿದರು ಶಾಲೆಯ ಶಿಕ್ಷಕರಾದ ಗೀತಾ ರವರು ವಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೇಲ್ವಿಚಾರಕರಾದಎಂ ಉಷಾ ಲತಾ ರೈ ರವರು ನಿರೂಪಿಸಿದರು.

LEAVE A REPLY

Please enter your comment!
Please enter your name here