ಉಪ್ಪಿನಂಗಡಿ :ವಿದ್ಯಾಭಾರತಿ ಕರ್ನಾಟಕ ಇವರ ವತಿಯಿಂದ ಸೆಪ್ಟೆಂಬರ್ 14 ಮತ್ತು 15ರಂದು ವಿಜ್ಞಾನ ವಿಹಾರ ಆಂಗ್ಲ ಮಾಧ್ಯಮ ಶಾಲೆ ವಿಜಯವಾಡ ಇಲ್ಲಿ ನಡೆದ ಪ್ರಾಂತ ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ 14ರ ವಯೋಮಾನದ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಇಲ್ಲಿನ ಇಂದ್ರಪ್ರಸ್ಥ ವಿದ್ಯಾಲಯದ ತಂಡ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
8ನೇ ತರಗತಿಯ ವಿದ್ಯಾರ್ಥಿಗಳಾದ ಆಯತ್ತುಲ್ಲಾ ಸಲೀಂ, 6ನೇ ತರಗತಿಯ ವಿದ್ಯಾರ್ಥಿಗಳಾದ ವಂಶಿ, ಸಹನ್ ಕೆ.ಎಸ್, ಅನ್ಶುಲ್ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ಶಿಶಿರ್ ಜೆ ಸಾಲಿಯಾನ್, ಕೆ. ಅತುಲ್ ನಾಯಕ್, ವಚನ್ ಕನ್ಯಾನ, ನಿಶಾದ್ ಸುಲೈಮಾನ್ ಕೆ, ಮೊಹಮ್ಮದ್ ಇರಾಝ್, ಮೊಹಮ್ಮದ್ ಸೈಫುಲ್ಲಾ ಹಾಗೂ ಬಾಲಕಿಯರ ವಿಭಾಗದಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಾದ ಎಂ.ಎಸ್ ಅನುಶ್ರೀ, ಎಂ.ಧನ್ವಿ ಶೆಟ್ಟಿ, ಸ್ತುತಿ ಶೆಟ್ಟಿ, 7ನೇ ತರಗತಿಯ ವಿದ್ಯಾರ್ಥಿಗಳಾದ ತೃಷಾ ಕೆ, ಹಂಸಿನಿ .ಜಿ , ಶ್ರೀಯ ಎಸ್ ಶೆಟ್ಟಿ, ಶ್ರಾವಣ್ಯ ಎಸ್, 6ನೇ ತರಗತಿಯ ವಿದ್ಯಾರ್ಥಿಗಳಾದ ಸಾನ್ವಿ ಸಿ.ಎಚ್, ಅನುಷ್ಕ ಜೆ , 17 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ 10ನೇ ತರಗತಿಯ ಪ್ರಾಪ್ತಿ ಪಿ ಶೆಟ್ಟಿ, 9ನೇ ತರಗತಿಯ ಅನ್ವಿ ಆರ್ ಆಚಾರ್ಯ, ತನ್ವಿ ಕನ್ಯಾನ, ಸವ್ಯ ಎಂ ವಿದ್ಯಾರ್ಥಿಗಳ ತಂಡವು ವಿಜೇತರಾಗಿ ರಾಷ್ಟ್ರೀಯ ಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ.
ಇವರಿಗೆ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಗೋಪಿನಾಥ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿಯರಾದ ವಿದ್ಯಾ ,ಶ್ರೀರಂಜಿನಿ ತರಬೇತಿ ನೀಡಿರುತ್ತಾರೆ ಎಂದು ಸಂಸ್ಥೆಯ ಮುಖ್ಯಶಿಕ್ಷಕಿ ವೀಣಾ ಆರ್ ಪ್ರಸಾದ್ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.