ಗ್ರೀನ್ ಸ್ಟಾರ್ ಗಟ್ಟಮನೆ: ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ರಿಯಾಝ್, ಪ್ರಕಾರ್ಯದರ್ಶಿ ಸಮದ್

ಪುತ್ತೂರು: ಗ್ರೀನ್ ಸ್ಟಾರ್ ಗಟ್ಟಮನೆ ಇದರ ವಾರ್ಷಿಕ ಮಹಾಸಭೆ ಅಧ್ಯಕ್ಷ ಆಸಿಫ್ ಜಿ.ಎಸ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರ. ಕಾರ್ಯದರ್ಶಿ ರಶೀದ್ ಬೆದ್ರಗುರಿ ವಾರ್ಷಿಕ ವರದಿ ಮಂಡಿಸಿದರು. ಅನ್ಸಾರ್ ಯಮಾನಿ ಗಟ್ಟಮನೆ ದುವಾ ನಿರ್ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ 2024-25ನೇ ಸಾಲಿನ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ಗೌರವಾಧ್ಯಕ್ಷರಾಗಿ ಬಶೀರ್ ಡಿ.ಎ, ಅಧ್ಯಕ್ಷರಾಗಿ ರಿಯಾಝ್ ಗಟ್ಟಮನೆ, ಉಪಾಧ್ಯಕ್ಷರಾಗಿ ಸಿರಾಜ್ ಇದ್ಪಾಡಿ, ಪ್ರ.ಕಾರ್ಯದರ್ಶಿಯಾಗಿ ಸಮದ್ ಬೆದ್ರಗುರಿ, ಜೊತೆ ಕಾರ್ಯದರ್ಶಿಯಾಗಿ ಮುಹಾದ್ ಗಟ್ಟಮನೆ ಹಾಗೂ ಕೋಶಾಧಿಕಾರಿಯಾಗಿ ರಶೀದ್ ಸನ್ಯಾಸಿಗುಡ್ಡೆರವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಅಧ್ಯಕ್ಷರಾದ ಆಸಿಫ್ ಕಾರ್ಯದರ್ಶಿ ರಶೀದ್ ಬೆದ್ರಗುರಿ ಹಾಗೂ ಸದಸ್ಯರಾದ ಅನ್ಸಾರ್ ಯಮಾನಿ, ಮುಸ್ತಫಾ ಗಟ್ಟಮನೆ, ಇರ್ಷಾದ್ ಗಟ್ಟಮನೆ, ಹೈದರ್ ಗಟ್ಟಮನೆ, ಶರಫುದ್ದೀನ್, ಸಿದ್ದೀಕ್ ಕುವೆಂಜ, ಸಮದ್ ಕುಂಬ್ರ, ರಿಯಾಝ್ ಇದ್ಪಾಡಿ, ಮುಹಮ್ಮದ್ ಅಶ್ರಫ್ ತಂಙಲ್, ಅಹ್ಮದ್ ಕಬೀರ್, ಆಶಿರ್ ಗಟ್ಟಮನೆ, ಝಕರಿಯಾ ಇದ್ಪಾಡಿ, ಯೂನುಸ್ ಗಟ್ಟಮನೆ, ನೌಫಲ್ ಟಿ.ಕೆ, ಮುಝಮ್ಮಿಲ್ ಸಿ.ಎಂ, ಮುಹಮ್ಮದ್ ರಾಫಿ, ಅಬೂಬಕ್ಕರ್ ಸಿಮಾಕ್, ಶರೀಫ್ ಎಸ್.ಎ.ಕೆ, ಆಸಿಫ್ ಇದ್ಪಾಡಿ, ಹಾಗೂ ಬಿಶ್ರ್ ಉಪಸ್ಥಿತರಿದ್ದರು. ನೂತನ ಕಾರ್ಯದರ್ಶಿ ಸಮದ್ ಬೆದ್ರಗುರಿ ವಂದಿಸಿದರು.

LEAVE A REPLY

Please enter your comment!
Please enter your name here