ಅ.3ರಿಂದ ಕುಂಜೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿಯ ವೈಭವ

0

ಅ.12 ಸಾಮೂಹಿಕ ಚಂಡಿಕಾ ಯಾಗ,ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳ ವೈವಿದ್ಯ

ಪುತ್ತೂರು:ಆರ್ಯಾಪು ಗ್ರಾಮದ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಅ.3 ರಂದು ಪ್ರಾರಂಭಗೊಂಡು ಅ.12ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಡಗರ, ಸಂಭ್ರಮದಿಂದ ನಡೆಯಲಿದೆ.


ಅ.3ರಂದು ಬೆಳಿಗ್ಗೆ ನಿತ್ಯಪೂಜೆಯ ಬಳಿಕ ನವರಾತ್ರಿ ಉತ್ಸವದ ದೀಪ ಪ್ರಜ್ವಲನೆ, ಗಣಪತಿ ಹವನದೊಂದಿಗೆ ನವರಾತ್ರಿ ಉತ್ಸವಗಳಿಗೆ ಚಾಲನೆ ದೊರೆಯಲಿದೆ. ನಂತರ ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಕುಂಜೂರಿನ ಹಿರಿಯ ಅರ್ಚಕ ಹೆಚ್.ಕೇಶವ ಭಟ್ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.


ಪ್ರತಿದಿನ ನವರಾತ್ರಿಯಲ್ಲಿ…!
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ ನಿತ್ಯಪೂಜೆ, ಗಣಪತಿ ಹವನ, ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಪ್ತಶತಿ ಪಾರಾಯಣ, ಮಧ್ಯಾಹ್ನ ಕುಂಕುಮಾರ್ಚನೆ, ನವರಾತ್ರಿ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ, ಸಂಜೆ ನಿತ್ಯಪೂಜೆ, ದುರ್ಗಾಪೂಜೆ, ಸಾಮೂಹಿಕ ರಂಗಪೂಜೆ, ಮಹಾಮಂಗಳಾರತಿ, ದೈವಗಳಿಗೆ ತಂಬಿಲ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಪ್ರತಿದಿನ ನಡೆಯುವ ವಿಶೇಷ ರಂಗಪೂಜೆಯಲ್ಲಿ ಭಕ್ತಾದಿಗಳು ಸೇವೆ ಸಲ್ಲಿಸಬಹುದು.


ಅ.12 ಸಾಮೂಹಿಕ ಚಂಡಿಕಾ ಯಾಗ:
ನವರಾತ್ರಿಯಲ್ಲಿ ವಿಶೇಷವಾಗಿ ಅ.12ರಂದು ಚಂಡಿಕಾ ಯಾಗ ನಡೆಯಲಿದ್ದು ಬೆಳಿಗ್ಗೆ ಚಂಡಿಕಾ ಯಾಗ ಪ್ರಾರಂಭ, ಅಕ್ಷರಭ್ಯಾಸ, ಭಜನೆ, ಆಯುಧಾ ಪೂಜೆ ಮಧ್ಯಾಹ್ನ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ನವರಾತ್ರಿ ಉತ್ಸವವು ಸಂಪನ್ನಗೊಳ್ಳಲಿದೆ.


ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ:
ನವರಾತ್ರಿ ಉತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಪ್ರತಿದಿನ ಸಂಜೆ 6 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಅ.3ರಂದು ಪೊಳಲಿ ಬೊಕ್ಕಸ ಶಿವರಂಜಿನಿ ಕಲಾ ಕೇಂದ್ರದ ಕಲಾವಿದರಿಂದ ‘ಗಾನಾಮೃತ’ ವಾದ್ಯ, ಗಾನ, ಸಂಕೀರ್ತನೆ, ಅ.4ರಂದು ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರ ಶಿಷ್ಯೆಯರಿಂದ ‘ನೃತ್ಯಾರ್ಚನಂ’ ಭರತನಾಟ್ಯ, ಅ.5ರಂದು ಯಕ್ಷಶ್ರೀ ಹವ್ಯಾಸಿ ಬಳಗ ಪುತ್ತೂರು ಇವರಿಂದ ‘ಗಿರಿಜಾ ಕಲ್ಯಾಣ’ ಎಂಬ ಯಕ್ಷಗಾನ ತಾಳಮದ್ದಳೆ, ಅ.6ರಂದು ಗಮಕವಾಚನ ನಡೆಯಲಿದ್ದು ಮಂಜುಳಾ ಸುಬ್ರಹ್ಮಣ್ಯ ಭಟ್ ವಾಚನ ಹಾಗೂ ಮಹಾದೇವ ಭಟ್ ಭಂಡಿಹೊಳೆ ವ್ಯಾಖ್ಯಾನ ನೀಡಲಿದ್ದಾರೆ. ರಾತ್ರಿ ವಸುಧಾರಾ ಕಲಾಕೇಂದ್ರ ಮಂಚಿ ಬೋಳಂತೂರು ಇವರಿಂದ ‘ನೂಪುರನಾದ’ ನಡೆಯಲಿದೆ.

ಅ.7ರಂದು ಬೊಳುವಾರು ಆಂಜನೇಯ ಮಹಿಳಾ ಯಕ್ಷಗಾನ ಕಲಾ ಸಂಘದವರಿಂದ ‘ಗರುಡ ಗರ್ವ ಭಂಗ’ ಯಕ್ಷಗಾನ ತಾಳಮದ್ದಳೆ, ಅ.8ರಂದು ಶ್ರೀಶಾರದಾ ಕಲಾ ಕೇಂದ್ರ ಕುಂಬ್ರ ಶಾಖೆಯವರಿಂದ ‘ನೃತ್ಯ ಸಮೂಹ’, ರಾತ್ರಿ ಲಾಸ್ಯ ನಾಟ್ಯನಿಕೇತನ ವೀರಮಾರುತಿನಗರ ನರಿಕೊಂಬು ಇವರಿಂದ ‘ನಾಟ್ಯಾಂಜಲಿ’ ನಡೆಯಲಿದೆ.
ಅ.9ರಂದು ಯಕ್ಷಕೂಟ ಪುತ್ತೂರು ಇವರಿಂದ ‘ಸತ್ವ ಶೈಥಿಲ್ಯ’ ಯಕ್ಷಗಾನ ತಾಳಮದ್ದಳೆ, ಅ.10ರಂದು ಸಂಜೆ ಗಾನ ಸರಸ್ವತಿ ಸಂಗೀತ ಕಲಾ ಶಾಲೆ ನೆಹರುನಗರ ಇವರಿಂದ ‘ಕರ್ನಾಟಕ ಶಾಸ್ತ್ರೀಯ ಸಂಗೀತ’, ರಾತ್ರಿ ನೃತ್ಯೋಪಾಸನಾ ಕಲಾ ಸಂಘದವರಿಂದ ‘ನೃತ್ಯೋಹಂ’ ಅ.11ರಂದು ಶಿವಾಂಜಲಿ ಕಲಾ ಕೇಂದ್ರ ಪೆರ್ಲ, ಸಾಜ ಪರಿಯಾಲ್ತಡ್ಕ ಶಾಖೆಯ ವಿದ್ಯಾರ್ಥಿಗಳಿಂದ ‘ನೃತ್ಯ ಪಲ್ಲವ’ ಭರತನಾಟ್ಯ ಹಾಗೂ ಜಾನಪದ ನೃತ್ಯಗಳು, ಅ.12ರಂದು ಬೆಳಿಗ್ಗೆ ಮನಸ್ವಿನಿ ವಿಜಯಕುಮಾರ್ ಮೈಸೂರು ಇವರಿಂದ ‘ವಯೋಲಿನ್ ವಾದನ’, ನಂತರ ಮೈಸೂರು ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತೆ ಡಾ.ದುರ್ಗಾಪರಮೇಶ್ವರಿ ಎಚ್.ಕೆ ಹಾಡುಗಾರಿಕೆಯಲ್ಲಿ ‘ಸಂಗೀತ’, ಸಂಜೆ ಮದರಾಸು ಸಂಸ್ಕೃತ ಮಹಾವಿದ್ಯಾಲಯದ ಉಪನ್ಯಾಸಕ ಡಾ|ಸತ್ಯನಾರಾಯಣ ಭಟ್ ಇವರಿಂದ ‘ಭಗವದ್ಭಕ್ತಿ’ ಧಾರ್ಮಿಕ ಪ್ರವಚನ, ರಾತ್ರಿ ಕೃಷ್ಣಕಿಶೋರ್ ಮತ್ತು ಅಶೋಕ್ ರಂ ಬಳಗ ಬದಿಯಡ್ಕ ಇವರಿಂದ ‘ಭಕ್ತಿ ಗಾನಸುಧಾ’ ಎಂದು ದೇವಸ್ಥಾನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here