ಪುತ್ತೂರು:ವೆಲ್ಡರ್ಸ್ಗಳ ಆಯ್ಕೆಯಾಗಿರುವ ವೆಲ್ಡಿಂಗ್ ವಿದ್ಯುದ್ವಾರ(ಎಲೆಕ್ಟ್ರೋಡ್)ಗಳ ತಯಾರಕಾಗಿರುವ ಪ್ರಸಿದ್ಧ ಮಾರ್ಟಿಸ್ ಆಂಡ್ ಕಂಪೆನಿಯ ಪುತ್ತೂರು ಘಟಕದ ಲೋಕಾರ್ಪಣೆ ಹಾಗೂ ನೂತನ ಆರ್ಕೋ ಪ್ರಾಡಕ್ಟ್ ಲಾಂಚ್ ಕಾರ್ಯಕ್ರಮವು ಅ.4 ರಂದು ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಉದ್ಘಾಟನೆಗೊಂಡಿತು.
ಮಾರ್ಟಿಸ್ ಆಂಡ್ ಕಂಪೆನಿಯ ಪುತ್ತೂರು ಘಟಕದ ಮಾಲಕ ಲಿಸ್ಟನ್ ಮಾರ್ಟಿಸ್ರವರ ಅಜ್ಜಿ ಪಿಯಾದ್ ಪಾಯಿಸ್ರವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಸಂಸ್ಥೆಯನ್ನು ಲೋಕಾರ್ಪಣೆಗೊಳಿಸಿದರು. ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ಜೋನ್ ಬ್ಯಾಪ್ಟಿಸ್ಟ್ ಮೊರಾಸ್ರವರು ನೂತನ ಸಂಸ್ಥೆಗೆ ಪವಿತ್ರ ಜಲ ಸಿಂಪಡಿಸಿ ಆಶೀರ್ವಚಿಸಿದರು. ಇದೇ ಸಂದರ್ಭದಲ್ಲಿ ಪುತ್ತೂರು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ರವರು ನೂತನ ಆರ್ಕೋ ಪ್ರಾಡಕ್ಟ್ ಲಾಂಚ್ ನೆರವೇರಿಸಿದರು.
ಯುವಕ ಲಿಸ್ಟನ್ ತಂದೆಯೊಂದಿಗೆ ಹುಟ್ಟೂರಲ್ಲಿಯೇ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಸಾಧನೆ-ವಂ|ಜೆ.ಬಿ ಮೊರಾಸ್:
ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪ್ರಧಾನ ಧರ್ಮಗುರು ವಂ|ಜೋನ್ ಬ್ಯಾಪ್ಟಿಸ್ಟ್ ಮೊರಾಸ್ರವರು ದೀಪ ಬೆಳಗಿಸಿ ಸಂಸ್ಥೆಗೆ ಚಾಲನೆ ನೀಡಿ ಮಾತನಾಡಿ, ನೂತನ ಸಂಸ್ಥೆಯ ಆರಂಭವು ಕನಸಿನೊಂದಿಗೆ ಆರಂಭವಾಗುತ್ತದೆ ಮತ್ತು ಆ ಸಂಸ್ಥೆಯು ಸರ್ವರ ಸಹಕಾರದೊಂದಿಗೆ ಹೆಗ್ಗಳಿಕೆಯನ್ನು ಕಾಣುವುದು ಮುಖ್ಯವಾಗುತ್ತದೆ. ಇಂದಿನ ಯುವಸಮೂಹ ತನ್ನ ವಿದ್ಯಾರ್ಜನೆಯಾದೊಡನೆ ತನ್ನ ನೆಲ ಬಿಟ್ಟು ವಿದೇಶಕ್ಕೆ ಹಾರಿ ಅಲ್ಲಿ ಕೆಲಸ ಮಾಡಿ ಅಲ್ಲಿನ ದೇಶವನ್ನು ಅಭಿವೃದ್ಧಿಗೊಳಿಸಿ ಬಳಿಕ ತನ್ನ ದೇಶಕ್ಕೆ ಹಿಂತಿರುಗುವುದು ಸಾಮಾನ್ಯ. ಆದರೆ ಲಿಸ್ಟನ್ ಎಂಬ ಯುವಕ ತನ್ನ ತಂದೆಯೊಂದಿಗೆ ತನ್ನ ಹುಟ್ಟೂರಲ್ಲಿಯೇ ಕೈಗಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದು ಸಾಧನೆಯಾಗಿದೆ. ನೂತನ ಸಂಸ್ಥೆಯು ಎಲ್ಲರ ಆಶೀರ್ವಾದದೊಂದಿಗೆ ಮುನ್ನೆಡೆಯಲಿ ಎಂಬುದು ನಮ್ಮ ಹಾರೈಕೆಯಾಗಿದೆ ಎಂದರು.
ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಲು ಅವಕಾಶವಿದ್ದು ಯುವಜನತೆ ಮುಂದೆ ಬರಬೇಕಾಗಿದೆ-ಶಿವಶಂಕರ್ ಭಟ್
ಪುತ್ತೂರು ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಶಿವಶಂಕರ್ ಭಟ್ ಮಾತನಾಡಿ, ಸಂಸ್ಥೆಯ ಮಾಲಕ ಲಿಸ್ಟನ್ರವರ ತಂದೆ ಲಿಯೋ ಮಾರ್ಟಿಸ್ರವರು ಓರ್ವ ಶ್ರಮಜೀವಿ. 1986ನೇ ಇಸವಿಯಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ 32 ನಿವೇಶನಗಳನ್ನು ನೀಡಿದೆ. ಲಿಯೋ ಮಾರ್ಟಿಸ್ರವರ ವೆಲ್ಡಿಂಗ್ ಉತ್ಪನ್ನಗಳು ಇಂದಿಗೂ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಅವರೊಂದಿಗೆ ಅವರ ಪುತ್ರ ಕೈಗಾರಿಕಾ ಕ್ಷೇತ್ರದಲ್ಲಿ ಕೈಜೋಡಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಪುತ್ತೂರಿನಲ್ಲಿ ಉದ್ಯಮ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಕಷ್ಟು ಅವಕಾಶವಿದ್ದು ಯುವಜನತೆ ಮುಂದೆ ಬರಬೇಕಾಗಿದೆ ಎಂದರು.
ಲಿಸ್ಟನ್ರವರು ವೆಲ್ಡಿಂಗ್ನ ನೂತನ ಉತ್ಪನ್ನವನ್ನು ಜನತೆಗೆ ಪರಿಚಯಿಸಿರುವುದು ಅಭಿನಂದನೀಯ-ಕರ್ನಲ್ ಜಿ.ಡಿ ಭಟ್:
ನಿವೃತ್ತ ಸೈನಿಕ ಕರ್ನಲ್ ಜಿ.ಡಿ ಭಟ್ ಮಾತನಾಡಿ, ಮಿಲಿಟ್ರಿಯಲ್ಲಿ ನಾನು ಸುಮಾರು 26 ವರ್ಷ ಸೇವೆಗೈಯ್ದು ಹುಟ್ಟೂರಿಗೆ ಆಗಮಿಸಿದ ಬಳಿಕ ನನ್ನ ಮತ್ತು ಲಿಯೋ ಮಾರ್ಟಿಸ್ರವರ ಒಡನಾಟ ಇಂದಿಗೂ ಇದೆ. ಲಿಯೋ ಮಾರ್ಟಿಸ್ರವರೋರ್ವ ನಿಯತ್ತು ಇರುವ ವ್ಯಕ್ತಿ. ಇದೀಗ ಅವರ ಅನುಭವದೊಂದಿಗೆ ಅವರ ಪುತ್ರ ಲಿಸ್ಟನ್ರವರು ವೆಲ್ಡಿಂಗ್ನ ನೂತನ ಉತ್ಪನ್ನವನ್ನು ಜನತೆಗೆ ಪರಿಚಯಿಸಿರುವುದು ಅಭಿನಂದನೀಯ ಎಂದು ಹೇಳಿ ಶುಭ ಹಾರೈಸಿದರು.
ಸಿಡ್ಕೋ ಅಧ್ಯಕ್ಷ ಟಿ.ವಿ ರವೀಂದ್ರನ್, ಪುತ್ತೂರು ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಜಾನ್ಸನ್ ಡಿ’ಸೋಜ, ಸಣ್ಣ ಕೈಗಾರಿಕಾ ಸಂಘದ ಉಪಾಧ್ಯಕ್ಷ ಎಸ್ಆರ್ಕೆ ಲ್ಯಾಡರ್ಸ್ನ ಕೇಶವ, ಕಾರ್ಯದರ್ಶಿ ಮೋಹನ್ ಕುಮಾರ್ರವರು ಆಗಮಿಸಿ ಶುಭ ಹಾರೈಸಿದರು. ನೂತನ ಸಂಸ್ಥೆಯ ಮಾಲಕ ಲಿಸ್ಟನ್ ಮಾರ್ಟಿಸ್ರವರು ಸ್ವಾಗತಿಸಿ, ಮಾಲಕ ಲಿಸ್ಟನ್ ಮಾರ್ಟಿಸ್ರವರ ತಂದೆ ಲಿಯೋ ಮಾರ್ಟಿಸ್ರವರು ವಂದಿಸಿದರು. ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ನ ಮಾಜಿ ಕಾರ್ಯದರ್ಶಿ ಮೌರಿಸ್ ಕುಟಿನ್ಹಾ ರಾಗಿದಕುಮೇರು ಕಾರ್ಯಕ್ರಮ ನಿರೂಪಿಸಿದರು. ನೂತನ ಸಂಸ್ಥೆಯ ಮಾಲಕ ಲಿಸ್ಟನ್ ಮಾರ್ಟಿಸ್ರವರ ತಾಯಿ ಜ್ಯುಲಿಯಾನ ಮಾರ್ಟಿಸ್, ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಜೋನ್ ಮಸ್ಕರೇನ್ಹಸ್, ಮರೀಲು ಚರ್ಚ್ ಬಾಂಧವರು, ಹಿತೈಷಿಗಳು, ಲಿಯೋ ಮಾರ್ಟಿಸ್ರವರ ಕುಟುಂಬಿಕರು ಉಪಸ್ಥಿತರಿದ್ದರು.
ಉದ್ಯಮ ಯಶಸ್ವಿಯಾಗಲು ಸಹೃದಯಿ ಗ್ರಾಹಕರ ಸಹಕಾರವಿರಲಿ..
ವೆಲ್ಡಿಂಗ್ ಕ್ಷೇತ್ರದಲ್ಲಿ ತನ್ನ ತಂದೆ ಸುಮಾರು 35 ವರ್ಷಗಳ ಅಪಾರ ಅನುಭವವಿದೆ. ನಮ್ಮ ಸಂಸ್ಥೆಯ ಧ್ಯೇಯವೇ ಉತ್ತಮ ಗುಣಮಟ್ಟ ಹಾಗೂ ಗ್ರಾಹಕರೊಂದಿಗಿನ ಒಳ್ಳೆಯ ನಂಬಿಕೆಯಾಗಿದೆ. ವೆಲ್ಡಿಂಗ್ಗೆ ಪ್ರಮುಖವಾಗಿ ಬೇಕಾಗಿರೋದು ಆರ್ಕ್. ಈ ಆರ್ಕ್ ಸ್ಟೇಬಲ್ ಆಗಿ ನಿಲ್ಲದಿದ್ದರೆ ಬಹಳ ಬೇಗ ಕ್ರ್ಯಾಕ್ ಆಗಿ ತೊಂದರೆ ನೀಡುತ್ತದೆ. ನಮ್ಮಲ್ಲಿನ ನೂತನ ಉತ್ಪನ್ನವೆನಿಸಿದ ಆರ್ಕೋ ಇದರಲ್ಲಿ ಹೊರಹೊಮ್ಮುವ ಕೀಟ(ಕಿಡಿ) ಕಡಿಮೆಯಾಗಿದೆ. ಈ ಉತ್ಪನ್ನವು ಯಾವುದೇ ಆಂಗಲ್ಗೆ ಬೇಕಾದರೂ ಬಳಸಿಕೊಳ್ಳಬಹುದು. ಈ ಸಂದರ್ಭದಲ್ಲಿ ನಮ್ಮ ಕೈಗಾರಿಕಾ ಉದ್ಯಮ ಯಶಸ್ವಿಯಾಗಲು ಸಹೃದಯಿ ಗ್ರಾಹಕರ ಸಹಕಾರ ಆಶಿಸುತ್ತೇನೆ.
-ಲಿಸ್ಟನ್ ಮಾರ್ಟಿಸ್, ಮಾಲಕರು, ಮಾರ್ಟಿಸ್ ಆಂಡ್ ಕಂಪೆನಿ, ಪುತ್ತೂರು ಘಟಕ
ಏನಿದು ಆರ್ಕೋ ಪ್ರಾಡಕ್ಟ್..
ಎಲೆಕ್ಟ್ರೋಡ್(ಇ6013) ಅದರ ನಯವಾದ ಆರ್ಕ್, ಬೆಳಕಿನ ನುಗ್ಗುವಿಕೆ ಮತ್ತು ಸುಲಭವಾದ ಸ್ಲ್ಯಾಗ್ ತೆಗೆಯುವಿಕೆಗೆ ಹೆಸರುವಾಸಿಯಾದ ಸಾಮಾನ್ಯ ಉದ್ಧೇಶದ ವೆಲ್ಡಿಂಗ್ ರಾಡ್ ಜೊತೆಗೆ ಸೌಮ್ಯವಾದ ಉಕ್ಕಿನಂತಹ ತೆಳುವಾದ, ಶುದ್ಧವಾದ ವಸ್ತುಗಳ ಮೇಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಶೀಟ್ ಮೆಟಲ್ ವೆಲ್ಡಿಂಗ್, ಸಾಮಾನ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ಬಳಸಲಾಗುತ್ತದೆ.