ಪುತ್ತೂರು: ಕದ್ರಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ವಾರ್ಷಿಕ ನವರಾತ್ರಿ ಉತ್ಸವದ ಪ್ರಯುಕ್ತ ಕದ್ರಿ ದೇವಸ್ಥಾನದ ಆವರಣದಲ್ಲಿ ಸಾಯಿ ಕಲಾ ಯಕ್ಷ ಬಳಗ ಬಾಲವನ ಪುತ್ತೂರು ತಂಡದವರಿಂದ ಯಕ್ಷಗಾನ ಭಸ್ಮಾಸುರ ಮೋಹಿನಿ ಅ.5ರಂದು ನಡೆಯಿತು.
ಮುಮ್ಮೇಳದಲ್ಲಿ ಈಶ್ವರನಾಗಿ ಚರಣ್ ಗೌಡ ಕಾಣಿಯೂರು, ಪಾರ್ವತಿಯಾಗಿ ರೇಣುಕಾ ಗೌಡ ಕುಲ್ಕುಂದ, ಭಸ್ಮಾಸುರನಾಗಿ ಪ್ರೇಮಾ ಕಿಶೋರ್, ಮೋಹಿನಿಯಾಗಿ ಆಜ್ಞಾಸೋಹಂ, ನಂದಿಯಾಗಿ ಪ್ರಸಕ್ತಾ ರೈ, ಬೃಂಗಿಯಾಗಿ ಜ್ಯೋತಿ ಅಶೋಕ್ ಕೆದಿಲ, ವೀರಭದ್ರನಾಗಿ ಸಂದೇಶ್ ದೀಪ್ ರೈ ಕಲ್ಲಂಗಳ, ವಿಷ್ಣುವಾಗಿ ಪುಷ್ಪಾ ಪ್ರಭಾಕರ, ಹಿಮ್ಮೇಳದಲ್ಲಿ ಭಾಗವತರಾಗಿ ಹೇಮಾ ಸ್ವಾತಿ ಕುರಿಯಾಜೆ, ಚೆಂಡೆಯಲ್ಲಿ ಬಾಲಸುಬ್ರಹ್ಮಣ್ಯ ಭಟ್ ಗುತ್ತಿಗಾರು, ಮದ್ದಳೆಯಲ್ಲಿ ಹರಿಪ್ರಸಾದ್ ಇಚ್ಲಂಪಾಡಿ, ಚಕ್ರತಾಳದಲ್ಲಿ ಗಗನ್ ಪಂಜ ಭಾಗವಹಿಸಿದ್ದರು.