ಪುತ್ತೂರು: ಶ್ರೀ ದುರ್ಗಾದೇವಿ ಮಂದಿರ ಶ್ರೀಮಹಾವಿಷ್ಣು ಮೂರ್ತಿ ದೇವಸ್ಥಾನ ಕಮಿಲಡ್ಕ ಉದಯಗಿರಿ, ಉಬರಡ್ಕ ಮಿತ್ತೂರು ಗ್ರಾಮ ಸುಳ್ಯ ಇಲ್ಲಿನ ಶ್ರೀ ದುರ್ಗಾದೇವಿ ಮಂದಿರದಲ್ಲಿ ಮಹಾನವರಾತ್ರಿ ಉತ್ಸವ ಅ.11ರಂದು ನಡೆಯಲಿದೆ.
ಅ.10ರಂದು ಬೆಳಿಗ್ಗೆ 7.30ಕ್ಕೆ ಹೊಸ ಅಕ್ಕಿ ನವನ್ನ(ಕದಿರು ಕಟ್ಟುವುದು) ನಡೆಯಲಿದೆ. ಅ.11ರಂದು ಬೆಳಿಗ್ಗೆ 7ರಿಂದ ಸ್ಥಳೀಯರಿಂದ ಭಜನೆ, 9ರಿಂದ ಶ್ರೀ ದುರ್ಗಾದೇವಿ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೈವದ ದರ್ಶನ, 10ರಿಂದ ಮಾರಿಕಳ ಪ್ರವೇಶ ನಂತರ ತುಲಾಭಾರ ಸೇವೆ, ಪ್ರೇತ ಉಚ್ಚಾಟನೆ, ಹರಕೆ ಒಪ್ಪಿಸುವುದು, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಮಂಗಳ ಸ್ನಾನ, ಆಯುಧ ಪೂಜೆ ನಡೆಯಲಿದೆ ಎಂದು ಶ್ರೀ ದೇವಿಯ ಪಾತ್ರಿ ರವಿಪ್ರಸಾದ್ ಕಮಿಲಡ್ಕ, ಶ್ರೀ ವಿಷ್ಣುಮೂರ್ತಿ ದೈವದ ಪಾತ್ರಿ ರಾಮ ಮಣಿಯಾಣಿ ಅಲೆಟ್ಟಿ, ಶ್ರೀಗುಳಿಗ ದೈವದ ಪೂಜಾರಿ ಶಶಿಧರ ಕಮಿಲಡ್ಕ, ವಿಶ್ವನಾಥ ಪೂಜಾರಿ ಕಮಿಲಡ್ಕ, ಲೋಕೇಶ್ ಕೋಟ್ಯಾನ್ ಕಮಿಲಡ್ಕ ಹಾಗೂ ಕುಟುಂಬಸ್ಥರು ಮತ್ತು ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾರದಲ್ಲಿ 3 ದಿನ ಪ್ರಶ್ನೆ ಚಿಂತನೆ:
ಶ್ರೀ ದುರ್ಗಾದೇವಿ ಮಂದಿರದಲ್ಲಿ ಪ್ರತೀ ಮಂಗಳವಾರ, ಶುಕ್ರವಾರ, ಆದಿತ್ಯವಾರ ಪ್ರಶ್ನೆ ನಡೆಯುತ್ತದೆ. ಗುರುವಾರ ಗೃಹ ರಕ್ಷೆ, ದೇಹ ರಕ್ಷೆ ಮಾಡಿಕೊಡಲಾಗುವುದು. ಸಂಕ್ರಮಣ ಕಳೆದು ಬರುವ ಪ್ರಥಮ ಶುಕ್ರವಾರ ಸಂಕ್ರಾಂತಿ ಪೂಜೆ ಮತ್ತು ವಿಶೇಷ ಪ್ರಾರ್ಥನೆ ನಡೆಯುತ್ತದೆ. ತುಲಾಭಾರ ಸೇವೆ ಮಾಡಿಸುವುವವರು ಮುಂಚಿತವಾಗಿ ರಶೀದಿ ಪಡೆದುಕೊಳ್ಳಬೇಕು. ಮಾಹಿತಿಗಾಗಿ ಮೊ: 9164057085, 8150943175 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.