ನಿವೃತ್ತ ಶಿಕ್ಷಕ ಎನ್. ರಘುನಾಥ ರೈರವರ ಶ್ರದ್ಧಾಂಜಲಿ ಸಭೆ

0

ಪುತ್ತೂರು: ನಿವೃತ್ತ ಶಿಕ್ಷಕ ಎನ್. ರಘುನಾಥ ರೈರವರ ಶ್ರದ್ಧಾಂಜಲಿ ಸಭೆ ಹಾಗೂ ವೈಕುಂಠ ಸಮಾರಾಧನೆ ಕೊಂಬೆಟ್ಟು ಸುಂದರರಾಮ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ನಡೆಯಿತು.
ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ| ವರದರಾಜ ಚಂದ್ರಗಿರಿ ಮಾತನಾಡಿ ರಘುನಾಥ ರೈರವರು ಚಿಕ್ಕಂದಿನಲ್ಲಿ ಬಡತನದಲ್ಲಿ ಬೆಳೆದವರು. ಶಾಲಾ ಅಧ್ಯಾಪಕನಾಗಿ 33 ವರ್ಷ ಕರ್ತವ್ಯ ನಿರ್ವಹಿಸಿ ಅನೇಕ ಶಿಷ್ಯರನ್ನು ತಯಾರಿಸಿ ಅವರ ಬಾಳಗೆ ಬೆಳಕಾದವರು. ಶಿಕ್ಷಕನಾಗಿ ಅಲ್ಲದೆ ಕಲೆ ಸಾಹಿತ್ಯದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡವರು. ಜೀವನದುದ್ದಕ್ಕೂ ಯಶಸ್ವಿಯಾಗಿ ಬದುಕಿ ಉದಾತ್ತ ಮೌಲ್ಯವನ್ನು ಬಿಟ್ಟು ಹೋಗಿದ್ದಾರೆ ಎಂದರು. ರಘುನಾಥ ರೈ ಮತ್ತು ಸದಾಶಿವ ಭಟ್ ಪಳ್ಳುರವರು ಉತ್ತಮ ಸ್ನೇಹಿತರಾಗಿದ್ದರು. ಜಾತಿಯನ್ನು ಮೀರಿದ ಸ್ನೇಹತ್ವ ಅವರಲ್ಲಿತ್ತು. ಬೆಟ್ಟಂಪಾಡಿ ಕಾಲೇಜಿನ ಸಮಿತಿಯಲ್ಲಿ ಸದಸ್ಯರಾಗಿದ್ದ ರಘುನಾಥ ರಐರವರು ನನಗೆ ಹಲವು ಸಲಹೆ ಸೂಚನೆ ನೀಡಿದ್ದನ್ನು ನೆನಪಿಸಿದ ಅವರು ರಘುನಾಥ ರೈರವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಹೇಳಿ ನುಡಿನಮನ ಸಲ್ಲಿಸಿದರು.


ಪುತ್ತೂರು ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಮಾತನಾಡಿ ನನಗೂ ರಘುನಾಥ ರೈರವರು ಸಂಬಂಧಿಕರು. ನಮಗೆ ಬದ್ಧತೆಯ ಸಂಬಂಧ ಇದೆ. ಜೀವನದಲ್ಲಿ ಮೌಲ್ಯ ಸಜ್ಜನಿಕೆ ಕಾಪಾಡಿಕೊಂಡವರು. ಶಿಸ್ತಿನ ಶಿಕ್ಷಕರಾಗಿ ಅನೇಕ ಶಿಷ್ಯರಿಗೆ ದಾರಿದೀಪವಾಗಿದ್ದರು ಎಂದರು. ಹಳ್ಳಿಯಲ್ಲೇ ಬದುಕಿ ಹಳ್ಳಿಯ ಶಾಲೆಯ ಶಿಕ್ಷಕರಾಗಿ ಹಳ್ಳಿಮೇಷ್ಟ್ರುವಾಗಿದ್ದರಲ್ಲದೆ ರೈತ ಮನಸ್ಸಿನ ಶಿಕ್ಷಕರಾಗಿದ್ದರು. ಅವರ ಪತ್ನಿ ಹಾಗೂ ಪುತ್ರಿ ಕೂಡ ಶಿಕ್ಷಕರಾಗಿದ್ದು ಶಿಕ್ಷಕ ಪರಂಪರೆಯನ್ನು ಹೊಂದಿದ ಕುಟುಂಬವಾಗಿತ್ತು ಎಂದು ಹೇಳಿ ನುಡಿನಮನ ಸಲ್ಲಿಸಿದರು.

ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಒಂದು ನಿಮಿಷದ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚಣೆ ಸಲ್ಲಿಸಲಾಯಿತು. ಮೃತರ ಪತ್ನಿ ವಾರಿಜಾ ಕೆ., ಪುತ್ರ ಡಾ.ಸುಭಾಷ್ ರೈ ಕೆ.ಎನ್., ಸೊಸೆ ಡಾ.ದೇವಿಕಾ ರೈ, ಪುತ್ರಿ ಸ್ಮಿತಾ ಕೆ.ಎನ್., ಅಳಿಯ ಸುರೇಶ್ ರೈ ಪಡ್ಡಂಬೈಲು, ಮೊಮ್ಮಕ್ಕಳಾದ ಶ್ರೇಯಸ್ ರೈ ಕೆ.ಪಿ., ಪ್ರೇಯಸ್ ರೈ ಕೆ.ಪಿ., ಟಿಶಾ ರೈ, ದೈವಿಕ್ ರೈ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಸತ್ಯನಾರಾಯಣ ರೈ ನುಳಿಯಾಲು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಬಳಿಕ ವೈಕುಂಠ ಸಮಾರಾಧನೆ ನಡೆಯಿತು.

LEAVE A REPLY

Please enter your comment!
Please enter your name here