ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ ‘ ಅನುರಣನ ‘ ಸ್ಪರ್ಧಾ ಮೇಳ

0

ಪುತ್ತೂರು: ಅಖಿಲ ಭಾರತೀಯ ವಿದ್ಯಾಭಾರತಿ ಕರ್ನಾಟಕ ಹಾಗೂ ನರಿಮೊಗರಿನ ಸಾಂದೀಪನಿ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ಅ.14 ರಂದು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಮೇಳ ನಡೆಯಿತು.

ಸಾಂದೀಪನಿ ಶಾಲಾ ಮುಖ್ಯ ಶಿಕ್ಷಕಿ ಜಯಮಾಲ ವಿ ಎನ್ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಸ್ವಾಭಿಮಾನದ, ರಾಷ್ಟ್ರಭಿಮಾನದ ಮತ್ತು ಸಮಾಜಮುಖಿ ವ್ಯಕ್ತಿತ್ವ ಬೆಳೆಸಿಕೊಳ್ಳುವಲ್ಲಿ ಇಂತಹ ಸ್ಪರ್ಧೆಗಳು ಸಹಕಾರಿಯಾಗಿದೆ ಎಂದರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಹಾಗೂ ವಿದ್ಯಾಭಾರತಿ ಪ್ರಾಂತೀಯ ಪ್ರಶಿಕ್ಷಣ ಸಹ ಪ್ರಮುಖರಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕವಾಗಿ ಮಾತನಾಡಿ ಕರ್ಮವನ್ನು ಚೆನ್ನಾಗಿ ಮಾಡು ಫಲದ ಅಪೇಕ್ಷೆ ಬೇಡ ಅದು ನಮ್ಮ ಪ್ರಕ್ರಿಯೆಯನ್ನು ಅವಲಂಭಿಸಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಂದೀಪನಿ ಶಾಲಾ ಸದಸ್ಯ ಎಸ್. ಜಿ.ಕೃಷ್ಣ ಮಾತನಾಡಿ ಸೋಲೆ ಗೆಲುವಿನ ಮೂಲ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಲವಲವಿಕೆ ಉಂಟಾಗುದರ ಜೊತೆಗೆ ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ ಎಂದರು.

ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಿ ಮಾತನಾಡಿದ ಶಾಲಾ ಸಂಚಾಲಕ ಹಾಗೂ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಭಾಸ್ಕರ್ ಆಚಾರ್ ಹಿಂದಾರ್ ರವರು ಮಾತನಾಡುತ್ತಾ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುದರಿಂದ ವಿದ್ಯಾರ್ಥಿಗಳಿಗೆ ಮುಂದೆ ಬರುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯ ಬರುತ್ತದೆ. ವಿದ್ಯಾರ್ಥಿಗಳ ಸಾಧನೆಗೆ ಭಗವಂತ ಒಳ್ಳೆಯದು ಮಾಡಲಿ ಎಂದರು.

ಶಾಲಾ ಕಾರ್ಯದರ್ಶಿಗಳಾದ ಕೃಷ್ಣ ಪ್ರಸಾದ್ ಕೆದಿಲಾಯ, ಸದಸ್ಯರಾದ ಶ್ರೀ ಪ್ರಸನ್ನ ಭಟ್, ಗಣೇಶ್ ವಾಗ್ಲೆ, ಪ್ರಾಂತ್ಯ ಕ್ರಿಯಾಶೋಧ ಪ್ರಮುಖ ರಘುರಾಜ್ ಉಬರಡ್ಕ ಹಾಗೂ ವಿದ್ಯಾವರ್ಧಕ ಸಂಘಕ್ಕೆ ಸೇರಿದ ಶಾಲೆಯಿಂದ ಬಂದಂತಹ ಮುಖ್ಯಶಿಕ್ಷಕರು, ಶಿಕ್ಷಕರು, ತೀರ್ಪುಗಾರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶ್ರೀರಾಮ ಶಾಲೆ ಉಪ್ಪಿನಂಗಡಿ ಮುಖ್ಯ ಶಿಕ್ಷಕ ಹಾಗೂ ವಿದ್ಯಾಭಾರತಿ ಜಿಲ್ಲಾ ಗಣಿತ ವಿಜ್ಞಾನ ಪ್ರಮುಖರಾದ ರಘುರಾಮ ಭಟ್ ವಂದಿಸಿದರು. ವಿಜ್ಞಾನ ಹಾಗೂ ಗಣಿತ ವಿಭಾಗದಲ್ಲಿ ವಸ್ತು ಪ್ರದರ್ಶನ, ರಸಪ್ರಶ್ನೆ, ಪತ್ರವಾಚನ , ಪ್ರಯೋಗ, ಲೇಖನ ವಾಚನ ಮುಂತಾದ ವಿವಿಧ ಸ್ಪರ್ಧೆಗಳು ನಡೆಯಿತು. ಸಂಸ್ಕೃತಿ ಮಹೋತ್ಸವದಲ್ಲಿ ಕಥಾಕಥನ, ಅಶುಭಾಷಣ, ಮೂರ್ತಿಕಲಾ, ಜಾನಪದ ನೃತ್ಯ ಸ್ಪರ್ಧೆಗಳು ನಡೆಯಿತು.

ವಿಜೇತರಾದ ವಿದ್ಯಾರ್ಥಿಗಳಿಗೆ ಸಾಂದೀಪನಿ ಶಾಲಾ ಸಂಚಾಲಕ ಭಾಸ್ಕರ್ ಆಚಾರ್ ಹಿಂದಾರ್ ,ಕ್ಷೇತ್ರೀಯ ನೈತಿಕ ಆದ್ಯಾತ್ಮಿಕ ಶಿಕ್ಷಣ ಪ್ರಮುಖ ವೆಂಕಟರಮಣ ಮಂಕುಡೆ,ವಿದ್ಯಾಭಾರತಿ ದಕ್ಷಿಣ ಕನ್ನಡ ಕಾರ್ಯದರ್ಶಿ ರಮೇಶ್ ಬಿ ಕೆ ಬಹುಮಾನ ವಿತರಿಸಿದರು.

ವಿದ್ಯಾಭಾರತಿ ಜೊತೆ ಸಂಯೋಜನೆಗೊಂಡ ವಿವಿಧ ಶಾಲೆಯ 27 ಸಂಸ್ಥೆಗಳಿಂದ ಒಟ್ಟು 870 ವಿದ್ಯಾರ್ಥಿಗಳು, 155 ಶಿಕ್ಷಕರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here