ರಾಷ್ಟ್ರ ಮಟ್ಟದ ಈಜು ಸ್ಪರ್ಧೆಗೆ ಸುದಾನ ವಸತಿಯುತ ಶಾಲೆಯ ಅನಿಖಾ ಯು ಆಯ್ಕೆ

0

puttur: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆದ ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ 17 ರ ವಯೋಮಾನದ ಪ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಸುದಾನ ವಸತಿಯುತ ಶಾಲೆಯ ಅನಿಖಾ ಯು (10ನೇ) ಇವರು 200ಮೀ ಬಟರ್ ಫ್ಲೈನಲ್ಲಿ ಬೆಳ್ಳಿ ಪದಕ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಹಾಗೂ 50 ಮೀ ಬ್ರೆಸ್ಟ್ ಸ್ಟ್ರೋಕ್ ನಲ್ಲಿ ಕಂಚಿನಪದಕ, 4*100 ಮೀ ಮೆಡ್ಲೆ ರಿಲೇಯಲ್ಲಿ ಕಂಚು, ಹಾಗೂ 4*100 ಮೀ ಫ್ರೀ ಸ್ಟೈಲ್ ನಲ್ಲಿ ಬೆಳ್ಳಿ ಪದಕ ಪಡೆದಿರುತ್ತಾರೆ. ಇವರು ಕಾರ್ಜಾಲು ’ಕನಸು’ ನಿಲಯದ ಸೀಮಾ ಎಸ್.ರಾವ್ ಇವರ ಸುಪುತ್ರಿ.


17 ರ ವಯೋಮಾನದ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ ನಿಕೋಲಸ್ ರೊನಿನ್ ಮಥಾಯಸ್ (10ನೇ) ಇವರು 4*100 ಮೀ ಫ್ರೀ ಸ್ಟೈಲ್ ರಿಲೇಯಲ್ಲಿ ಕಂಚಿನ ಪದಕ ಪಡೆದಿರುತ್ತಾರೆ. ಇವರು ರಂಜಿತ್ ಮಥಾಯಸ್ ಹಾಗೂ ಸೌಮ್ಯ ದಂಪತಿಗಳ ಸುಪುತ್ರ.


ಇವರಿಗೆ ಪುತ್ತೂರು ಬಾಲವನ ಈಜುಕೊಳದ ತರಬೇತುದಾರರಾದ ದೀಕ್ಷಿತ್, ತ್ರಿಶೂಲ್, ವಿಶಾಲ್, ಸೀತರಾಮ್ ಹಾಗೂ ಪ್ರಫುಲ ತರಬೇತಿಯನ್ನು ನೀಡಿರುತ್ತಾರೆ.
ವಿಜೇತರನ್ನು ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಹಾಗೂ ದೈಹಿಕ ಶಿಕ್ಷಣ ಶಿಕ್ಷಕರು ಅಭಿನಂದಿಸಿ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here