‘ಕುಕ್ಕೆಶ್ರೀ ಸರ್ಕಲ್’ ತಂಡದ ಪ್ರಶಂಸನೀಯ ಕಾರ್ಯ – ನವರಾತ್ರಿ ವೇಷ ಧರಿಸಿ ಸಂಗ್ರಹಗೊಂಡ ಮೊತ್ತ ರೋಗಿಯ ಚಿಕಿತ್ಸೆಗೆ ನೆರವು

0

ವೇಷ ಧರಿಸಿ ನಡೆಸಿದ ತಿರುಗಾಟದಲ್ಲಿ ಆದ ಸಂಪೂರ್ಣ ಕಲೆಕ್ಷನ್ ಮೊತ್ತವನ್ನು ಬಹಿರಂಗಪಡಿಸಿದ ಯುವಕರು

ಕಡಬ/ಸುಬ್ರಹ್ಮಣ್ಯ: ನವರಾತ್ರಿಯ ಸಂದರ್ಭದಲ್ಲಿ ವೇಷ ಧರಿಸಿ ತಿರುಗಾಟ ಮಾಡಿ ಅದರಲ್ಲಿ ಸಂಗ್ರಹಗೊಂಡ ಮೊತ್ತವನ್ನು ಯುವಕನೊಬ್ಬನ ಚಿಕಿತ್ಸೆ ಮತ್ತು ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಹಸ್ತಾಂತರಿಸುವ ಮೂಲಕ ಕುಕ್ಕೆಶ್ರೀ ಸರ್ಕಲ್ ಗೆಳೆಯರ ತಂಡ ಮಾದರಿ ಕಾರ್ಯ ನಡೆಸಿದ್ದು, ಯುವಕರ ಈ ನಡೆ ಇದೀಗ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

ಕುಕ್ಕೆಶ್ರೀ ಸರ್ಕಲ್ ಎಂಬ ಹೆಸರಿನಲ್ಲಿ ತಂಡವೊಂದನ್ನು ರಚಿಸಿಕೊಂಡ ಸಮಾನಮನಸ್ಕ ಗೆಳೆಯರು ನವರಾತ್ರಿ ಸಂದರ್ಭದಲ್ಲಿ ಸಿಂಹದ ವೇಷ ಧರಿಸಿ ಸುಬ್ರಹ್ಮಣ್ಯ ಪೇಟೆಯಾದ್ಯಂತ ಸಂಚರಿಸಿ ದಾನಿಗಳು ಮತ್ತು ಕಲಾ ಪ್ರೋತ್ಸಾಹಕರಿಂದ ಧನ ಸಂಗ್ರಹ ನಡೆಸಿದ್ದಾರೆ. ಬಳಿಕ ಒಟ್ಟಾದ ಸುಮಾರು 45,020 ರೂಪಾಯಿಗಳನ್ನು ಸಾಯಿ ಸುದರ್ಶನ್ ಎಂಬ ಯುವಕನ ಚಿಕಿತ್ಸೆಗೆ ಹಾಗೂ ವಿದ್ಯಾಭ್ಯಾಸಕ್ಕೆ ಸಹಾಯವಾಗುವಂತೆ ಉಪಯೋಗಿಸಿಕೊಳ್ಳಲು ನೀಡಲಾಯಿತು.


ಇನ್ನೊಂದು ವಿಶೇಷವೆಂದರೆ, ಈ ಯುವಕರು ತಾವು ನೇರವಾಗಿ ಮತ್ತು ಗೂಗಲ್ ಪೇ ಮೂಲಕ ಸಂಗ್ರಹಿಸಿ ಸಂಪೂರ್ಣ ಮೊತ್ತದ ವಿವರವನ್ನು ಬಹಿರಂಗಪಡಿಸುವ ಮೂಲಕ ಪಾರದರ್ಶಕತೆಯನ್ನು ಮೆರೆದಿದ್ದಾರೆ. ಈ ಮೊತ್ತವನ್ನು ಸಂಗ್ರಹಿಸಲು ಈ ತಂಡದೊಂದಿಗೆ ಸಹಕರಿಸಿದ ಸುಬ್ರಹ್ಮಣ್ಯದ ಜನತೆಗೆ ಕುಕ್ಕೆ ಸರ್ಕಲ್ ಫ್ರೆಂಡ್ಸ್ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಸಿಂಹ ವೇಷದ ತಿರುಗಾಟದಲ್ಲಿ ಸಂಗ್ರಹಗೊಂಡ ಹಣದ ವಿವರ:
ಪೆಟ್ಟಿಗೆಯಲ್ಲಿ ಸಂಗ್ರಹವಾದ ಹಣ :- 41,505
ಗೂಗಲ್ ಪೇನಲ್ಲಿ ಸಂಗ್ರಹವಾದ ಹಣ:- 3,515
ಒಟ್ಟು ಸಂಗ್ರಹವಾದ ಹಣ :- 45,020

LEAVE A REPLY

Please enter your comment!
Please enter your name here