puttur: ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಛೇರಿ (ಆಡಳಿತ) ಚಿಕ್ಕಮಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಕಡೂರು ಹಾಗೂ ಕೇಂಬ್ರಿಡ್ಜ್ ಪಬ್ಲಿಕ್ ಸ್ಕೂಲ್ ಪುರ, ಕಡೂರು ಇಲ್ಲಿ ನಡೆದ 17ರ ವಯೋಮಾನದ ಬಾಲಕರ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ (S.G.F.I) ಗೆ ಆಯ್ಕೆಯಾಗಿದೆ.
ಶಾಲೆಯ ಪುನೀತ್ (ಶ್ರೀಧರ ಮತ್ತು ನಳಿನಿ ದಂಪತಿಗಳ ಪುತ್ರ), ಧನ್ವಿತ್ (ನೀಲಪ್ಪ ಗೌಡ ಮತ್ತು ಶಶಿಕಲಾ ದಂಪತಿಗಳ ಪುತ್ರ), ಜಿ ಶೇಖರ (ಗದ್ದೆ ಫಕೀರಪ್ಪ ಮತ್ತು ಹಂಪಮ್ಮ ದಂಪತಿಗಳ ಪುತ್ರ), ನರಸಪ್ಪ ತಳವಾರ್ (ಅಪ್ಪಸಾಬ ತಳವಾರ್ ಮತ್ತು ಗೌರವ್ವ ತಳವಾರ್), ಚೈತನ್ ನಲವಾಡೆ(ಗೋರಕ್ ನಲವಾಡೆ ಮತ್ತು ಲಲಿತ ನಲವಾಡೆ ದಂಪತಿಗಳ ಪುತ್ರ), ಪ್ರೀತಮ್ ಮಳಿ (ಶಿವಪ್ಪ ಮಳಿ ಮತ್ತು ಕಲಾವತಿ ಮಳಿ ದಂಪತಿಗಳ ಪುತ್ರ), ಅಬೀಬ್ ವುಲ್ಲಾ (ಕಲೀಮ್ ವುಲ್ಲಾ ಮತ್ತು ಫರ್ಜಾನ ದಂಪತಿಗಳ ಪುತ್ರ) ತಂಡದಲ್ಲಿದ್ದರು. ಇವರಿಗೆ ಸತ್ಯನ್ ಗುತ್ತಿಗಾರು ತರಬೇತುದಾರರಾಗಿ ಮತ್ತು ಶಾಲಾ ದೈಹಿಕ ಶಿಕ್ಷಣ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು.
ವಿದ್ಯಾಭಾರತಿ ವತಿಯಿಂದ ಮಧ್ಯಪ್ರದೇಶದ ಆದ್ರಾದಲ್ಲಿ ನಡೆದ 17ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲಕಿಯರ ತಂಡ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರಮಟ್ಟ (S.G.F.I)ದಲ್ಲಿ ತೃತೀಯ ಸ್ಥಾನ ಪಡೆದಿರುತ್ತದೆ.
ತಂಡದಲ್ಲಿದ್ದ ಶಾಲಾ ವಿದ್ಯಾರ್ಥಿನಿಯರು ದೀಕ್ಷಿತಾ (ದೇವಪ್ಪ ಗೌಡ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಬಿಂದುಶ್ರೀ (ಜನಾರ್ಧನ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ವಿನ್ಯಾ ರೈ (ಕೃಷ್ಣಪ್ರಸಾದ್ ರೈ ಮತ್ತು ರಾಜೀವಿ ರೈ ದಂಪತಿಗಳ ಪುತ್ರಿ), ಸುಶಾ ಎಂ ( ಕೃಷ್ಣಪ್ಪ ಎಂ ಮತ್ತು ಗೀತಾ ದಂಪತಿಗಳ ಪುತ್ರಿ), ಲೋಚನಾ (ಸುಂದರ ಗೌಡ ಮತ್ತು ಉಷಾ ದಂಪತಿಗಳ ಪುತ್ರಿ), ಅಂಕಿತಾ( ರೇಗಪ್ಪಗೌಡ ಮತ್ತು ರೇಶ್ಮಾ ದಂಪತಿಗಳ ಪುತ್ರಿ), ಅರ್ಚನಾ (ಲಿಂಗಪ್ಪ ಮತ್ತು ಕುಸುಮಾವತಿ ದಂಪತಿಗಳ ಪುತ್ರಿ), ತನುಜಾ (ಅಪ್ಪಸಾಬಾ ಮತ್ತು ಗೌರಮ್ಮ ದಂಪತಿಗಳ ಪುತ್ರಿ) ಗೋದಾವರಿ ( ಸುನೀಲ್ ಮತ್ತು ಚಂದ್ರಿಮಾ ದಂಪತಿಗಳ ಪುತ್ರಿ ) ಇವರಿಗೆ ಶ್ರೀ ಮನೋಹರ್ ತರಬೇತುದಾರರಾಗಿ ಮತ್ತು ಶಾಲಾ ದೈಹಿಕ ಶಿಕ್ಷಕರು ಮಾರ್ಗದರ್ಶನ ನೀಡಿದ್ದರು.