ಪುತ್ತೂರು:ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ಗಳಲ್ಲಿ ತೆರವಾದ ಸ್ಥಾನಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಸಮಾಲೋಚನಾ ಸಭೆಯು ಅ.26ರಂದು ಸಂಜೆ ನಡೆಯಲಿದೆ.
ಕೆದಂಬಾಡಿ ಗ್ರಾ.ಪಂಗೆ ಸಂಬಂಧಿಸಿದಂತೆ ಸಭೆಯು ಸಂಜೆ 4.30 ಕುಂಬ್ರದ ನಿಶ್ಮಿತಾ ಕಾಂಪ್ಲೆಕ್ಸ್ ಹಾಗೂ ಅರಿಯಡ್ಕ ಗ್ರಾ.ಪಂಗೆ ಸಂಬಂಧಿಸಿದಂತೆ ಸಂಜೆ 5.30 ಕೆ.ಕೆ ಇಬ್ರಾಹಿಂರವರ ಮನೆಯಲ್ಲಿ ಸಭೆಯು ನಡೆಯಲಿದೆ.
ಈ ಸಭೆಯಲ್ಲಿ ಶಾಸಕರಾದ ಆಶೋಕ್ ಕುಮಾರ್ ರೈ ಮತ್ತು ಪಕ್ಷದ ಮುಖಂಡರು ಭಾಗವಹಿಸಲಿದ್ದಾರೆ. ಪಕ್ಷದ ಪದಾಧಿಕಾರಿಗಳು, ವಿವಿಧ ಘಟಕಗಳ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.