ಚಾವಣಿ, ಸ್ನಾನದ ಮನೆ, ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಟ್ಟ ಟ್ರಸ್ಟ್
ಪುತ್ತೂರು: ನಂದಗೋಕುಲ ಟ್ರಸ್ಟ್ ಫಂಡ್ ವತಿಯಿಂದ ಕಳೆದ ಮೂರು ವರ್ಷಗಳಿಂದ ತೀರಾ ಬಡತನದಲ್ಲಿರುವ ಕುಟುಂಬಗಳಿಗೆ ಸಹಾಯಹಸ್ತವನ್ನು ಮಾಡಿಕೊಂಡು ಬಂದಿದ್ದು, ಕಡಬ ತಾಲ್ಲೂಕಿನ ಕುಂತೂರು ಗ್ರಾಮದ ಎರ್ಮಾಳ ಎಂಬಲ್ಲಿ ತೀರಾ ಅನಾರೋಗ್ಯದಲ್ಲಿರುವ ಬಡ ಕುಟುಂಬವಾದ ಕುಶಾಲಪ್ಪ ಮತ್ತು ಲೀಲಾವತಿ ಎಂಬವರಿಗೆ ಸುಮಾರು ರೂ 61,155 ಮೌಲ್ಯದ ಚಾವಣಿ ವ್ಯವಸ್ಥೆ, ಸ್ನಾನದ ಮನೆ, ಶೌಚಾಲಯದ ವ್ಯವಸ್ಥೆಯನ್ನು ಮಾಡಿಕೊಡಲಾಗಿದ್ದು, ಹಸ್ತಾಂತರಿಸಲಾಯಿತು. ಅಲ್ಲದೇ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ನಂದಗೋಕುಲ ಟ್ರಸ್ಟ್ ಫಂಡ್ ನ ಸದಸ್ಯರಾದ, ಮೋಹನ್ ಕೆ ಪಿ, ನಾಗೇಶ್, ರವಿರಾಜ್, ನವೀನ್ ಕೆ ಪಿ, ಪ್ರಮೋದ್,ಪವನ್, ಮೋಹನ್, ಪ್ರಸಾದ್ ಅರುಣ್, ನಿತಿನ್, ಅಮೃತ್,ಕಾರ್ತಿಕ್ ಎಂ, ಹರಿಪ್ರಸಾದ್, ಸೃಜನ್ ,ಶೃತಿ, ಕಾವ್ಯ, ಲಿಖಿತಾ, ರಕ್ಷಾ, ರೂಪ, ಸೌಮ್ಯ, ಪ್ರಮೀಳಾ ಹಾಗೂ ಅತಿಥಿಗಳಾಗಿ ವಾಗ್ಮಿ ಸುರೇಶ್ ಪಡಿಪಂಡರವರು ಉಪಸ್ಥಿತರಿದ್ದರು.