ನೆಲ್ಯಾಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಕಡಬ ತಾಲೂಕು ಗೋಳಿತ್ತೊಟ್ಟು ವಲಯದ ಜ್ಞಾನವಿಕಾಸ ಮಹಿಳಾ ಕೇಂದ್ರ ಹಳೇನೇರೆಂಕಿ, ಲಯನ್ಸ್ ಕ್ಲಬ್ ದುರ್ಗಾಂಬ ಆಲಂಕಾರು, ಹಿರಿಯ ವಿದ್ಯಾರ್ಥಿ ಸಂಘ ಸರಕಾರಿ ಉ.ಹಿ.ಪ್ರಾ.ಶಾಲೆ ಹಳೇನೇರೆಂಕಿ ಮತ್ತು ಗ್ರಾಮ ವಿಕಾಸ ಸಮಿತಿ ಹಳೇನೇರೆಂಕಿ ಇದರ ಆಶ್ರಯದಲ್ಲಿ ಕೆವಿಜಿ ಮಹಾವಿದ್ಯಾಲಯ ಆಸ್ಪತ್ರೆ ಸುಳ್ಯ ಇವರ ನೇತೃತ್ವದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಹಳೆನೇರೆಂಕಿ ಸರಕಾರಿ ಉ.ಹಿ.ಪ್ರಾ.ಶಾಲಾ ವಠಾರದಲ್ಲಿ ನಡೆಯಿತು.
ಹಳೆನೇರೆಂಕಿ ಶಾಲಾ ಮುಖ್ಯಶಿಕ್ಷಕ ಶಾಂತಪ್ಪ ಗೌಡ ಉದ್ಘಾಟಿಸಿ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಆಲಂಕಾರು ಲಯನ್ಸ್ ಕ್ಲಬ್‌ನ ಕಾರ್ಯದರ್ಶಿ ನಿತ್ಯಾನಂದ ಶೆಟ್ಟಿ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಚೇತನ, ಹಳೆನೇರೆಂಕಿ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಜನಾರ್ದನ ಕದ್ರ, ಎಸ್‌ಡಿಎಂಸಿ ಅಧ್ಯಕ್ಷ ಹೊನ್ನಪ್ಪ ಗೌಡ, ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪುರುಷೋತ್ತಮ, ಸುಳ್ಯ ಕೆವಿಜಿ ಆಸ್ಪತ್ರೆಯ ವೈದ್ಯ ತುಫೈಲ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸವಿತಾ ಶುಭಹಾರೈಸಿದರು.
ಕೆವಿಜಿ ಆಸ್ಪತ್ರೆಯ ಜಯಂತ್‌ರವರು ಶಿಬಿರದ ಉದ್ದೇಶ ಮತ್ತು ಶಿಬಿರದಿಂದ ಸಿಗುವಂತಹ ಪ್ರಯೋಜನಗಳು, ಆಸ್ಪತ್ರೆಯ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ಹಳೆನೇರೆಂಕಿ ಶಾಲಾ ಹಿರಿಯ ವಿದ್ಯಾರ್ಥಿ ಮಹೇಶ್ ಸ್ವಾಗತಿಸಿದರು. ಗೋಳಿತ್ತೊಟ್ಟು ವಲಯದ ನಿಕಟಪೂರ್ವ ವಲಯ ಅಧ್ಯಕ್ಷ ವೀರೇಂದ್ರ ವಂದಿಸಿದರು. ವಲಯ ಮೇಲ್ವಿಚಾರಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಹಳೆನೇರೆಂಕಿ ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿ ಜಯಶ್ರೀ ಕಾರ್ಯಕ್ರಮ ಆಯೋಜಿಸಿದರು. ವಲಯದ ಸೇವಾಪ್ರತಿನಿಧಿಗಳಾದ ಹೇಮಲತಾ, ಪ್ರತಿಮಾ, ಪ್ರೇಮಲತಾ, ಸುಮಲತಾ, ವಿಶಾಲಾಕ್ಷಿ ಮತ್ತು ಜ್ಞಾನವಿಕಾಸ ಕೇಂದ್ರದ ಸದಸ್ಯರು, ಒಕ್ಕೂಟದ ಸದಸ್ಯರು ಸಹಕರಿಸಿದರು. ಸುಮಾರು 150 ಮಂದಿ ಶಿಬಿರದ ಪ್ರಯೋಜನ ಪಡೆದುಕೊಂಡರು.
ದಾಖಲಾತಿ ಹಸ್ತಾಂತರ:
ಹೊಸದಾಗಿ ರಚನೆಯಾಗಿರುವ ಜ್ಞಾನವಿಕಾಸ ಕೇಂದ್ರದ ದಾಖಲಾತಿಯನ್ನು ನಿಕಟಪೂರ್ವ ವಲಯಧ್ಯಕ್ಷ ವೀರೇಂದ್ರರವರು ತಂಡದ ಸಂಯೋಜಕಿ ಪುಷ್ಪಲತಾರವರಿಗೆ ಹಸ್ತಾಂತರಿಸಿದರು.