ಕೊಣಾಲು: ಅನಾರೋಗ್ಯ ಪೀಡಿತ ಮಹಿಳೆ ಆತ್ಮಹತ್ಯೆ

0

ನೆಲ್ಯಾಡಿ: ಅನಾರೋಗ್ಯ ಪೀಡಿತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಲು ಗ್ರಾಮದ ಚಾಮೆತ್ತಮೂಲೆ ಎಂಬಲ್ಲಿ ಅ.31ರಂದು ನಡೆದಿದೆ.


ಚಾಮೆತ್ತಮೂಲೆ ನಿವಾಸಿ ಅಂಬೇಡ್ಕರ್ ಯಾನೆ ಅಣ್ಣು ಎಂಬವರ ಪತ್ನಿ ಸೀತಾ(47ವ.)ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಇವರು ಅನಾರೋಗ್ಯದಿಂದ ಬಳಲುತ್ತಿದ್ದು ನಿರಂತರ ಚಿಕಿತ್ಸೆ ಪಡೆದರೂ ಗುಣಮುಖರಾಗದೆ ಇದ್ದ ಹಿನ್ನೆಲೆಯಲ್ಲಿ ಮನನೊಂದು ಮನೆಯ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಮೃತರು ಪತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here