ಪುತ್ತೂರು: ತುಮಕೂರಿನಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಪದವಿ ಪೂರ್ವ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಎಡಪದವು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣಾಧಿಕಾರಿ ಕಾವು ಪ್ರೇಮನಾಥ್ ಶೆಟ್ಟಿ ಅವರನ್ನು ಗೌರವಿಸಲಾಯಿತು.
ಕರ್ನಾಟಕ ಘನ ಸರಕಾರದ ಗೃಹ ಸಚಿ ಡಾ. ಜಿ ಪರಮೇಶ್ವರ್ ಅವರ ಉಪಸ್ಥಿತಿಯಲ್ಲಿ, ಇತರ ಗಣ್ಯರ ಸಮ್ಮುಖದಲ್ಲಿ ಈ ಸನ್ಮಾನ ಕಾರ್ಯಕ್ರಮ ನಡೆಯಿತು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತು ಪಕ್ಕದ ಇತರೇ ಜಿಲ್ಲೆ ಯಾವುದೇ ಕ್ರೀಡಾಕೂಟ ಆಯೋಜನೆ ಮಾಡುವುದಿದ್ದರೂ ಇವರ ಮಾರ್ಗದರ್ಶನ ಪಡೆಯುತ್ತಾರೆ. ಇತ್ತೀಚೆಗೆ ಪುತ್ತೂರಿನಲ್ಲಿ ಕಾವು ಹೇಮನಾಥ್ ಶೆಟ್ಟಿಯವರ ನೇತೃತ್ವದಲ್ಲಿ ನಡೆದ ರಾಜ್ಯಮಟ್ಟದ ಕ್ರೀಡಾಕೂಟವು ರಾಷ್ಟ್ರೀಯ ಮಟ್ಟದ ಕ್ರೀಡಾಕೂಟವನ್ನೂ ಮೀರಿಸುವಂತೆ ಆಯೋಜನೆ ಮಾಡಿ ಎಲ್ಲಾ ಕ್ರೀಡಾಳುಗಳ ಪ್ರಶಂಸೆಗೆ ಪಾತ್ರವಾಗಲು ಪ್ರೇಮನಾಥ್ ಶೆಟ್ಟಿಯವರು ಕಾರಣರಾಗಿದ್ದಾರೆ.