ಪುತ್ತೂರು: ಕೆರೆಗೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಅರಿಯಡ್ಕದಲ್ಲಿ ನ.7ರಂದು ನಡೆದಿದೆ. ಅರಿಯಡ್ಕ ಗ್ರಾಮದ ಜಾರತ್ತಾರು ನಿವಾಸಿ ದಿನೇಶ್ ರೈ (45ವ)ರವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ದಿನೇಶ್ ರೈಯವರು ತನ್ನ ಮನೆಯಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿರುವ ಅರಿಯಡ್ಕ ಲಕ್ಷ್ಮೀನಾರಾಯಣ ಶೆಟ್ಟಿ ಎಂಬವರಿಗೆ ಸೇರಿದ ಗುಡ್ಡದಲ್ಲಿರುವ ಟಾರ್ಪಲ್ ಹಾಸಿದ ಕೆರೆಗೆ ಬಿದ್ದು ಮೃತಪಟ್ಟಿದ್ದಾರೆ. ದಿನೇಶ್ ರೈಯವರು ಸ್ಕೂಟರ್ನಲ್ಲಿ ತೆರಳಿದ್ದು ಇವರ ಸ್ಕೂಟರ್ ಕೆರೆಯ ಪಕ್ಕದಲ್ಲಿತ್ತು. ಪುತ್ತೂರು ಅಗ್ನಿಶಾಮಕ ದಳದವರು ಮೃತದೇಹವನ್ನು ಕೆರೆಯಿಂದ ಮೇಲಕ್ಕೆತ್ತಿದ್ದಾರೆ. ಮೃತರು ಪತ್ನಿ ಅಕ್ಷತಾ, ಪುತ್ರಿ ಸ್ತುತಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸ್ಥಳಕ್ಕೆ ಸಂಪ್ಯ ಪೊಲೀಸರು ಆಗಮಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.