ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಪುತ್ತೂರು ತಾಲೂಕು ಮಟ್ಟದ ಮಟ್ಟದ ಜ್ಞಾನವರ್ಷಿಣಿ/ ಜ್ಞಾನದರ್ಶಿನಿ ಎಂಬ ನೈತಿಕ ಮೌಲ್ಯಾಧಾರಿತ ಪುಸ್ತಕದ ಅಧ್ಯಯನ ಆಧಾರಿತ ವಿವಿಧ ಸ್ಪರ್ಧೆಗಳು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ನ.5ರಂದು ನಡೆಯಿತು. ಇದರಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.
ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠದಲ್ಲಿ 6ನೇ ತರಗತಿಯ ಶ್ರೀಸುಮತಿ (ಶ್ರೀರಾಮ ಶರ್ಮ ಹಾಗು ಸವಿತಾ) ದ್ವಿತೀಯ ಸ್ಥಾನ ಹಾಗೂ ಪೌಢ ಶಾಲಾ ವಿಭಾಗದ ಚಿತ್ರಕಲೆ ಸ್ಪರ್ಧೆಯಲ್ಲಿ 9ನೇ ತರಗತಿಯ ನಿಲಿಷ್ಕ.ಕೆ (ದಿನೇಶ್ ನಾಯ್ಕ ಕೆ ಜಿ ಹಾಗೂ ಸ್ಮಿತಾ ಶ್ರೀ ಬಿ) ಪ್ರಥಮ ಸ್ಥಾನ, ಭಾಷಣ ಸ್ಪರ್ಧೆಯಲ್ಲಿ 9ನೇ ತರಗತಿಯ ಜಿ.ವೈಷ್ಣವಿ.ಪೈ (ಜಿ.ನಾಗೇಶ ಪೈ ಹಾಗು ಸಹನಾ ಪೈ) ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.