ವರ್ಷದ ಮೊದಲ ಜಾತ್ರೆ-ಬೆಟ್ಟಂಪಾಡಿ ಜಾತ್ರೋತ್ಸವ- ನಾಳೆಯಿಂದ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ವರ್ಷಾವಧಿ ಉತ್ಸವ

0

ನ.15 ಕಟ್ಟೆಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ
ನ.16 ದರ್ಶನಬಲಿ, ಬಟ್ಟಲುಕಾಣಿಕೆ, ಜಠಧಾರಿ ಮಹಿಮೆ
ನ.17 ಧೂಮಾವತಿ ದೈವ, ಹುಲಿಭೂತ ನೇಮೋತ್ಸವ

ಪುತ್ತೂರು: ವರ್ಷದ ಮೊದಲನೇ ಜಾತ್ರೆ ಎಂದೇ ಪ್ರಸಿದ್ಧಿಯಾಗಿರುವ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವ ನ.14ರಿಂದ 17ರವರೆಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆಯಲಿದೆ. ನ.14ರಂದು ಬೆಳಿಗ್ಗೆ 9ರಿಂದ ಬಲಿವಾಡು ಶೇಖರಣೆ, ರಾತ್ರಿ ಶ್ರೀಮಹಾಗಣಪತಿ ಪೂಜೆ, ನ.15ರಂದು ಬೆಳಿಗ್ಗೆ ನವಕ ಕಲಶಾಭಿಷೇಕ, ತುಲಾಭಾರ ಸೇವೆ, ಮಹಾಪೂಜೆ, ದೇವರ ಬಲಿ, ಪ್ರಸಾದ ವಿತರಣೆ, ಬ್ರಹ್ಮಸಮಾರಾಧನೆ ನಡೆಯಲಿದೆ. ರಾತ್ರಿ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ.

ಕಟ್ಟೆಪೂಜೆ, ಬಿಲ್ವಗಿರಿ ಪ್ರವೇಶ, ಕೆರೆ ಉತ್ಸವ: ನ.15ರಂದು ರಾತ್ರಿ 9ರಿಂದ ಮಹಾಪೂಜೆ, ಉತ್ಸವ, ದೇವರ ಭೂತಬಲಿ, ಶ್ರೀದೇವರ ಬಲಿ ಹೊರಟು ಕಟ್ಟೆಪೂಜೆ, ಬಿಲ್ವಗಿರಿ ಪ್ರವೇಶ, ಬೆಡಿ ಪ್ರದರ್ಶನ, ಕೆರೆ ಉತ್ಸವ, ದೇವರು ಒಳಗಾಗಿ ಮಂಗಳಾರತಿ ನಡೆಯಲಿದೆ.

ದರ್ಶನ ಬಲಿ, ಬಟ್ಟಲುಕಾಣಿಕೆ: ನ.16ರಂದು ಬೆಳಿಗ್ಗೆ 1೦ರಿಂದ ಶ್ರೀದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಮಹಾಪ್ರಸಾದ ವಿತರಣೆ, ಮಂತ್ರಾಕ್ಷತೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

ಜಠಾಧಾರಿ ಮಹಿಮೆ, ಧೂಮಾವತಿ, ಹುಲಿಭೂತ ನೇಮ: ನ.16ರಂದು ರಾತ್ರಿ 9ರಿಂದ ದೇವರ ಮಹಾಪೂಜೆ, ಶ್ರೀಜಠಾಧಾರಿ ದೈವದ ಭಂಡಾರ ತೆಗೆದು ರಾತ್ರಿ 1 ರಿಂದ ಜಟಾಧಾರಿ ದೈವದ ಮಹಿಮೆ ನಡೆಯಲಿದೆ. ನ.17ರಂದು ಬೆಳಿಗ್ಗೆ 8 ರಿಂದ ಧೂಮಾವತಿ ದೈವದ ನೇಮ, ಅಪರಾಹ್ನ ಹುಲಿಭೂತ ನೇಮೋತ್ಸವ ನಡೆಯಲಿದೆ.

ಸಂಕಲ್ಪ ಸಹಿತ ಅನ್ನದಾನ ಸೇವೆ: ಜಾತ್ರೋತ್ಸವದ ಪ್ರಯುಕ್ತ ಪ್ರತೀದಿನ ಅನ್ನದಾನ ಸೇವೆ ನಡೆಯಲಿದೆ. ಸಂಕಲ್ಪ ಸಹಿತ “ಅನ್ನದಾನ ಸೇವೆ” ಮಾಡಿಸುವ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ.

ನ.15ರಂದು ರಾತ್ರಿ 7ರಿಂದ 9ರ ತನಕ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ, ನ.16ರಂದು ರಾತ್ರಿ ೯ರಿಂದ ಶ್ರೀಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಮೊಕ್ತೇಸರ ವಿನೋದ್ ಕುಮಾರ್ ರೈ ಗುತ್ತು ತಿಳಿಸಿದ್ದಾರೆ.

ಬೆಟ್ಟಂಪಾಡಿ ಬೆಡಿ
ನ.15ರಂದು ರಾತ್ರಿ ದೇವರ ಕಟ್ಟೆಪೂಜೆ ನಡೆದು ಬಿಲ್ವಗಿರಿ ಪ್ರವೇಶ ಸಂದರ್ಭದಲ್ಲಿ ಶ್ರೀಮಹಾಲಿಂಗೇಶ್ವರ ಸೇವಾ ಸಮಿತಿ ನೇತೃತ್ವದಲ್ಲಿ ಬಿಲ್ವಗಿರಿಯಲ್ಲಿ “ಬೆಟ್ಟಂಪಾಡಿ ಬೆಡಿ” ಪ್ರದರ್ಶನ ನಡೆಯಲಿದೆ.

ಸುದ್ದಿ ಯೂಟ್ಯೂಬ್ ಲೈವ್‌ನಲ್ಲಿ ನೇರಪ್ರಸಾರ
ಊರ ಹಾಗೂ ಪರವೂರಿನಲ್ಲಿರುವ ಭಕ್ತರು ಜಾತ್ರೋತ್ಸವವನ್ನು ಕಣ್ತುಂಬಿಕೊಳ್ಳಲು “ಸುದ್ದಿ ನ್ಯೂಸ್ ಪುತ್ತೂರು” ಯೂಟ್ಯೂಬ್ ಚಾನೆಲ್‌ನಲ್ಲಿ ನ.15ರಂದು ರಾತ್ರಿ ಹಾಗೂ ನ.16ರಂದು ಮಧ್ಯಾಹ್ನದವರೆಗೆ ನೇರಪ್ರಸಾರ ನಡೆಯಲಿದೆ. ಅಲ್ಲದೆ ದೇವಳದಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ ಕಲ್ಪಿಸಲಾಗಿದೆ.

LEAVE A REPLY

Please enter your comment!
Please enter your name here