ನೆಲ್ಯಾಡಿ: ಶಬರೀಶ ಯಕ್ಷಗಾನ ಕಲಾಕೇಂದ್ರ ನೆಲ್ಯಾಡಿ ಇದರ 7ನೇ ವಾರ್ಷಿಕೋತ್ಸವ ನ.17ರಂದು ಸಂಜೆ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ.
ಸಂಜೆ 5.30ರಿಂದ ಶ್ರೀ ಅಯ್ಯಪ್ಪ ಸ್ವಾಮಿ ದೇವರಿಗೆ ರಂಗಪೂಜೆ ನಡೆಯಲಿದೆ. 6 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು ಕಟೀಲು ದೇವಸ್ಥಾನದ ಅನುವಂಶಿಕ ಅರ್ಚಕರಾದ ಕಮಲಾದೇವಿ ಪ್ರಸಾದ್ ಅಸ್ರಣ್ಣ ಅವರು ಆಶೀರ್ವಚನ ನೀಡಲಿದ್ದಾರೆ. ಸೌತಡ್ಕ ದೇವಸ್ಥಾನದ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ, ಯಕ್ಷಕಲಾ ಪೋಷಕರಾದ ಆರ್.ಕೆ.ಭಟ್ ಬೆಂಗಳೂರು, ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಡಾ.ಸದಾನಂದ ಕುಂದರ್, ಉಪತಹಶೀಲ್ದಾರ್ ಗೋಪಾಲ ಕೆ., ಕಡಬ ಶ್ರೀದೇವಿ ಗೋಲ್ಡ್ ಪ್ಯಾಲೇಸ್ನ ದಿನೇಶ್ ಆಚಾರ್ಯ, ಕಡಬ ಶ್ರೀ ದೇವಿ ಯಕ್ಷಗಾನ ಕಲಾಕೇಂದ್ರದ ಅಧ್ಯಕ್ಷ ಪಿ.ಕೆ.ಕಿಶನ್ ಕುಮಾರ್ ರೈ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಯಾನಂದ ಬಂಟ್ರಿಯಾಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ದೇವರಾಜ ಆಚಾರ್ಯ ಐಕಳ, ವಿಶ್ವನಾಥ ಶೆಣೈ ಪಳ್ಳಿ, ಕೇಶವ ನಾಯಕ್, ಪದ್ಮನಾಭ ಮುಚ್ಚಿಂತಾಯ ಸುಬ್ರಹ್ಮಣ್ಯ ಅವರಿಗೆ ಅಭಿನಂದನೆ ನಡೆಯಲಿದೆ. ಯಕ್ಷಬೊಳ್ಳಿ ದಿನೇಶ್ ರೈ ಕಡಬ ನಿರೂಪಿಸಲಿದ್ದಾರೆ.
ಯಕ್ಷಗಾನ:
ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರು ಪ್ರಶಾಂತ್ ಶೆಟ್ಟಿಯವರ ಶಬರೀಶ ಕಲಾಕೇಂದ್ರದ ಶಿಷ್ಯ ವೃಂದದವರಿಂದ ’ಮದನಾಕ್ಷಿ ತಾರಾವಳಿ, ವೀರಮಣಿ ಕಾಳಗ’ ಯಕ್ಷಗಾನ ನಡೆಯಲಿದೆ. ಬಳಿಕ ಜಿಲ್ಲೆಯ ಸುಪ್ರಸಿದ್ಧ ಅತಿಥಿ ಕಲಾವಿದರ ಕೂಡುವಿಕೆಯಿಂದ ’ಚೂಡಾಮಣಿ ಮತ್ತು ಅಗ್ರಪೂಜೆ’ ಯಕ್ಷಗಾನ ನಡೆಯಲಿದೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆಯು ನಡೆಯಲಿದೆ ಎಂದು ಶಬರೀಶ ಕಲಾಕೇಂದ್ರದ ಅಧ್ಯಕ್ಷರಾದ ಜಯಾನಂದ ಬಂಟ್ರಿಯಾಲ್, ಕಾರ್ಯದರ್ಶಿ ಶ್ರೀಧರ ನೂಜಿನ್ನಾಯ, ಕೋಶಾಧಿಕಾರಿ ಗಣೇಶ ಕೆ.,ಯಕ್ಷಗುರು ಪ್ರಶಾಂತ್ ಶೆಟ್ಟಿ ನೆಲ್ಯಾಡಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.