ಪುತ್ತೂರು: ಮಹಾತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಗದ್ದೆಯಲ್ಲಿ ಡಿ.28 ಮತ್ತು 29ರಂದು ಶ್ರೀನಿವಾಸ ಕಲ್ಯಾಣೋತ್ಸವ ನಡೆಯಲಿದೆ. 2023ರಲ್ಲಿ ವೈಭವದಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆದಿತ್ತು.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವತಿಯಿಂದ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವದ ಪೂರ್ವಭಾವಿ ಸಭೆಯು ಇತ್ತೀಚೆಗೆ ಮುಕ್ರಂಪಾಡಿಯ ಸುಭದ್ರಾ ಕಲ್ಯಾಣ ಮಂಟಪದ ಸಭಾಭವನದಲ್ಲಿ ನಡೆಯಿತು. ಸಭೆಯಲ್ಲಿ ಶ್ರೀನಿವಾಸ ಕಲ್ಯಾಣೋತ್ಸವದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಚಾಲಕರಾಗಿ ಅರುಣ್ ಕುಮಾರ್ ಪುತ್ತಿಲ, ಗೌರವಾಧ್ಯಕ್ಷರಾಗಿ ಡಾ. ಸುರೇಶ್ ಪುತ್ತೂರಾಯ, ಚಂದಪ್ಪ ಮೂಲ್ಯ, ಶಶಾಂಕ್ ಕೋಟೇಚಾ, ಗೋಪಾಲಕೃಷ್ಣ ಭಟ್, ಬೂಡಿಯಾರ್ ರಾಧಾಕೃಷ್ಣ ರೈಯವರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಶಿವಪ್ರಸಾದ್ ಇಜ್ಜಾವು, ಕಾರ್ಯಾಧ್ಯಕ್ಷರಾಗಿ ಉಮೇಶ್ ಕೋಡಿಬೈಲು, ಪ್ರಧಾನ ಕಾರ್ಯದರ್ಶಿಯಾಗಿ ರವಿಕುಮಾರ್ ರೈ, ಜೊತೆ ಕಾರ್ಯದರ್ಶಿಗಳಾಗಿ ಹರೀಶ್ ಮರುವಾಳ, ಸಂತೋಷ್ ಮುಕ್ರಂಪಾಡಿ, ಕೋಶಾಧಿಕಾರಿಯಾಗಿ ಉದಯ ಕುಮಾರ್ ರೈಯವರನ್ನು ಆಯ್ಕೆ ಮಾಡಲಾಯಿತು. ಸ್ವಾಗತ ಸಮಿತಿ ಅಧ್ಯಕ್ಷರಾಗಿ ರಾಜು ಶೆಟ್ಟಿ, ಕಾರ್ಯದರ್ಶಿಗಳಾಗಿ ಗಣೇಶ್ಚಂದ್ರ ಭಟ್ ಮಕರಂದ, ಪ್ರವೀಣ್ ಶೆಟ್ಟಿ ತಿಂಗಳಾಡಿ, ಸಂಚಾಲಕರಾಗಿ ಪ್ರಸನ್ನ ಕುಮಾರ್ ಮಾರ್ತ, ಅನಿಲ್ ತೆಂಕಿಲ ಆಯ್ಕೆಯಾದರು. ಆಹಾರ ಸಮಿತಿ ಸಂಚಾಲಕರಾಗಿ ರಾಜೇಶ್ ಅನಂತಾಡಿ, ಅಲಂಕಾರ ಸಮಿತಿ ಸಂಚಾಲಕರಾಗಿ ಗಿರೀಶ್ ಕೂಡುರಸ್ತೆ, ಆಮಂತ್ರಣ ಸಮಿತಿ ಸಂಚಾಲಕರಾಗಿ ಉಮೇಶ್ ಎಸ್.ಕೆ. ಆರ್ಥಿಕ ಸಮಿತಿ ಸಂಚಾಲಕರಾಗಿ ಭೀಮಯ್ಯ ಭಟ್, ಹೊರೆಕಾಣಿಕೆ ಸಮಿತಿ ಸಂಚಾಲಕರಾಗಿ ಕೃಷ್ಣ ಪ್ರಸಾದ್ ಶೆಟ್ಟಿ, ಮಹಿಳಾ ಸಮಿತಿ ಸಂಚಾಲಕರಾಗಿ ರಜತಾ ಭಟ್, ಪ್ರಚಾರ ಮತ್ತು ಮಾಧ್ಯಮ ಸಂಚಾಲಕರಾಗಿ ನವೀನ್ ಪಂಜಳ, ಸ್ವಯಂ ಸೇವಕ ಸಮಿತಿ ಸಂಚಾಲಕರಾಗಿ ಸುಜಿತ್ ಕಜೆ ಬೆಟ್ಟಂಪಾಡಿ, ವೈದಿಕ ಸಮಿತಿ ಸಂಚಾಲಕರಾಗಿ ಪ್ರದೀಪ್ ಶಾಂತಿಗೋಡು ಆಯ್ಕೆಯಾದರು.
ಕಾರ್ಯಕ್ರಮದ ರೂಪುರೇಷಗಳನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಹಾಗೂ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಸಂಚಾಲಕರಾಗಿರುವ ಅರುಣ್ ಕುಮಾರ್ ಪುತ್ತಿಲ ವಿವರಿಸಿದರು. ಪ್ರಸನ್ನ ಕುಮಾರ್ ಮಾರ್ತರವರು ನೂತನ ಪದಾಧಿಕಾರಿಗಳ ಪಟ್ಟಿಯನ್ನು ಅನಾವರಣಗೊಳಿಸಿದರು. ಅನಿಲ್ ತೆಂಕಿಲ ಸ್ವಾಗತಿಸಿ ವಂದಿಸಿದರು. ಪುತ್ತಿಲ ಪರಿವಾರ ಸೇವಾ ಟ್ರಸ್ಟಿನ ನೂತನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ರೈ ವಂದಿಸಿದರು.