ಪುತ್ತೂರು: ಸವಣೂರು ಕೃಷಿ ಪತ್ತಿನ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ, ಸಹಕಾರಿ ಧುರಿಣ ದಿ.ನಾರಾಯಣ ರೈ ಸಾರಕರೆಬೀಡುರವರ 25ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನ. 24ರಂದು ಅವರ ಸೃಗೃಹ ಸಾರಕರೆಬೀಡಿನಲ್ಲಿ ನಡೆಯಲಿದೆ.
ಪುಣ್ಯಸ್ಮರಣೆ ಪ್ರಯುಕ್ತ ಶ್ರೀ ಸತ್ಯನಾರಾಯಣ ಪೂಜೆ, ನಾರಾಯಣ ರೈಯವರ ಸಂಸ್ಮರಣೆ ನಡೆಯಲಿದೆ. ಸಮಾರಂಭದಲ್ಲಿ ರಾಜಕೀಯ, ಸಾಮಾಜಿಕ, ಧಾರ್ಮಿಕ, ಸಹಕಾರ ಕ್ಷೇತ್ರದ ಮುಖಂಡರು ಭಾಗವಹಿಸಲಿದ್ದಾರೆ ಎಂದು ನಾರಾಯಣ ರೈಯವರ ಅಳಿಯ, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡರವರು ತಿಳಿಸಿದ್ದಾರೆ.