ವಿಟ್ಲ: ಮಿತ್ತೂರು ಹಿ.ಪ್ರಾ. ಶಾಲಾ ನೂತನ ಶಾಲಾ ಅಭಿವೃದ್ಧಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಎಂ.ಸುಧೀರ್ ಕುಮಾರ್ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಶಶಿಪ್ರಭಾರವರು ಆಯ್ಕೆಯಾದರು.
ಸದಸ್ಯರಾಗಿ ರೇವತಿ, ಯಶೋಧಾ, ಸೌಮ್ಯ, ಮಿಲ್ಕಿ ಡಿಸೋಜ, ಜೈನಾಬಿ, ಫಾತಿಮಾ, ರಫೀಕ್, ಶರೀಫ್, ದಿವ್ಯಾ, ಸವಿತಾ, ಸುಮತಿ, ಚಂದ್ರಹಾಸ, ದಾಮೋದರ, ರಮೇಶ್ ಆಚಾರ್ಯ, ಪೌಝಿಯಾ, ಕಲಂದರ್ ಷಾ, ಪದನಿಮಿತ್ತ ಸದಸ್ಯರಾಗಿ ಸರೋಜಾ, ಭವಾನಿ, ಸೆಲ್ವಿ, ನಾಮನಿರ್ದೇಶಿತ ಸದಸ್ಯರಾಗಿ ಸಂಜೀವ ಪೂಜಾರಿ , ಜುಲಿಯಾನ ಮೇವಿಸ್ ಡಿಸೋಜ, ಸುಜನಾರವರನ್ನು ಆಯ್ಕೆ ಮಾಡಲಾಯಿತು. ಇಡ್ಕಿದು ಗ್ರಾ.ಪಂ.ನ ನಾಗರಿಕ ಸೌಲಭ್ಯ ಸಮಿತಿ ಸದಸ್ಯರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮ ಹಾಗೂ ಪುತ್ತೂರಿನ ಪ್ರತಿಷ್ಠಿತ ಚಿನ್ಮಾಭರಣ ಮಳಿಗೆ ಜೋಸ್ ಅಲುಕ್ಕಾಸ್ ಸಂಸ್ಥೆಯ ಸಿ.ಎಸ್.ಆರ್. ಫಂಡ್ ನಿಂದ ನೀಡಿದ ಸ್ಮಾರ್ಟ್ ಟಿ.ವಿ ಯನ್ನು ಇದೇ ಸಂದರ್ಭಸಲ್ಲಿ ಹಸ್ತಾಂತರ ಮಾಡಲಾಯಿತು. ಜೋಸ್ ಆಲುಕ್ಕಾಸ್ ಸಂಸ್ಥೆಯ ಶಾಖಾ ವ್ಯವಸ್ಥಾಪಕರಾದ ರತೀಶ್ ಸಿ.ಪಿ., ಇಡ್ಕಿದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪದ್ಮನಾಭ ಸಫಲ್ಯ, ನಿಕಟಪೂರ್ವ ಅಧ್ಯಕ್ಷರಾದ ಆದಂ ಎಂ.ಎಂ.ಎಸ್, ಮೊದಲಾದವರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸರೋಜಾ ರವರು ಸ್ವಾಗತಿಸಿ, ಶಿಕ್ಷಕರಾದ ಸಂಜೀವ ಎನ್. ರವರು ಕಾರ್ಯಕ್ರಮ ನಿರೂಪಿಸಿದರು.