ಡಿಸೆಂಬರ್ 1 ರಂದು ಉಚಿತ ಶಿಕ್ಷಣಕ್ಕಾಗಿ ಪ್ರವೇಶ ಪರೀಕ್ಷೆ
ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ 5 ವಿವಿಧ ಪರೀಕ್ಷಾಕೇಂದ್ರದಲ್ಲಿಏಕಕಾಲದಲ್ಲಿ ಪರೀಕ್ಷೆ
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ವಿಜ್ಞಾನ, ವಾಣಿಜ್ಯ, ಕಲಾ ವಿಭಾಗ ಸೇರಲು ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ
ಪುತ್ತೂರು: ವಿವೇಕಾನಂದ ವಿದ್ಯಾವರ್ಧಕ ಸಂಘದ ಮೊದಲ ಸಂಸ್ಥೆ, ಸುಮಾರು ಆರು ದಶಕಗಳ ಸಮೃದ್ಧ ಶೈಕ್ಷಣಿಕ ಪರಂಪರೆಯುಳ್ಳ ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ಕಾಲೇಜು ಕೇವಲ ನಗರ ಪ್ರದೇಶ ಮಾತ್ರವಲ್ಲದೇ ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿವಿಧ ಶೈಕ್ಷಣಿಕ ಸೌಲಭ್ಯವನ್ನು ಒದಗಿಸುತ್ತಾ ಬಂದಿರುವ ಈ ಸಂಸ್ಥೆಯು ಮುಂದಿನ ಶೈಕ್ಷಣಿಕ ವರ್ಷದಿಂದ ಮೇಧಾ -2025 ಎಂಬ ಶೀರ್ಷಿಕೆಯೊಂದಿಗೆ ಉಚಿತ ಶಿಕ್ಷಣ ಯೋಜನೆಯನ್ನು ಪರಿಚಯಿಸುತ್ತಿದ್ದು, ಪರೀಕ್ಷೆಯೊಂದನ್ನು ನಡೆಸಿ ಅದರಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಶೇ.100 ವಿದ್ಯಾರ್ಥಿವೇತನ ಅರ್ಥಾತ್ ಉಚಿತ ಶಿಕ್ಷಣ ದೊರೆಯಲಿದೆ.
ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ನಡೆಯಲಿದ್ದು,9 ಹಾಗೂ 10ನೇ ತರಗತಿಗೆ ಸಂಬಂಧಪಟ್ಟ ಗಣಿತ, ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನದ ಆಧಾರದ ಮೇಲೆ 120 ನಿಮಿಷಗಳ ಪರೀಕ್ಷೆ ನಡೆಯಲಿದ್ದು, ಕಲಾ ವಿಭಾಗ, ವಿಜ್ಞಾನ ವಿಭಾಗ ಹಾಗೂ ವಾಣಿಜ್ಯ ವಿಭಾಗಗಳಿಗೆ ಸೇರಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದಾಗಿದೆ.2024ರ ಡಿಸೆಂಬರ್ 1ರಂದು ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಯ 5 ವಿವಿಧ ಕೇಂದ್ರಗಳಲ್ಲಿ ಬೆಳಗ್ಗೆ 10 ಗಂಟೆಗೆ ಸರಿಯಾಗಿ ಈ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ನೋಂದಾಯಿಸಲು ನವೆಂಬರ್ 27 ಕೊನೆಯ ದಿನಾಂಕವಾಗಿದೆ.
ನೆಹರು ನಗರದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಪದವಿ ಪೂರ್ವ ಕಾಲೇಜು, ತೆಂಕಿಲದ ವಿವೇಕಾನಂದ ಆವರಣದಲ್ಲಿರುವ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ, ಕಡಬದ ಆಲಂಕಾರಿನಲ್ಲಿರುವ ಶ್ರೀ ಭಾರತಿ ಪ್ರೌಢಶಾಲೆ, ಸುಳ್ಯದ ಜಾಲ್ಸೂರಿನಲ್ಲಿರುವ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿರುವ ಶ್ರೀ ಭಾರತಿ ವಿದ್ಯಾಪೀಠ ಪರೀಕ್ಷಾ ಕೇಂದ್ರಗಳಾಗಿರಲಿವೆ. ವಿದ್ಯಾರ್ಥಿಗಳು ಈ ನೋಂದಣಿ ಲಿಂಕ್- https://vivekanandapuc.com/medha-academic-scholarship-examination/ ನಲ್ಲಿ ನೋಂದಾಯಿಸುವ ಮೂಲಕ ಅಥವಾ ಕಾಲೇಜಿನ ಜಾಲತಾಣ www.vivekanandapuc.com ಇದರಲ್ಲಿ ನೋಂದಾಯಿಸುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ 9480936010, 8971924424, 8073700468, 8105072386 ಸಂಪರ್ಕ ಸಂಖ್ಯೆಗಳನ್ನು ಸಂಪರ್ಕಿಸಬಹುದು.