ಉಪ್ಪಿನಂಗಡಿ: ಪೊಲೀಸ್ ಇಲಾಖೆಯ ತನಿಖಾ ಕಾರ್ಯದಲ್ಲಿ ವೈಜ್ಞಾನಿಕ ಕೌಶಲ್ಯತೆಯ ಸ್ಪರ್ಧೆಯಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ರವಿ ಬಿ.ಎಸ್.ರವರ ತಂಡ ಅತ್ಯುತ್ತಮ ನಿರ್ವಹಣೆ ತೋರಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ವಿವಿಧ ಅಪರಾಧ ಕೃತ್ಯಗಳು ಘಟಿಸಿದಾಗ ನಡೆಸಲಾಗುವ ತನಿಖಾ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ನೆಲೆಗಟ್ಟಿನ ಕ್ರಿಮಿನಲ್ ಲಾ, ಫಿಂಗರ್ ಪ್ರಿಂಟ್, ಫಾರೆನ್ಸಿಕ್ ಪೋಟೋ ಸಹಿತ ವಿವಿಧ 6 ಆಯಾಮಗಳಲ್ಲಿ ಕೌಶಲ್ಯತೆ ತೋರುವುದಕ್ಕೆ ಸಂಬಂಧಿಸಿ ಜಿಲ್ಲಾ ಮಟ್ಟ, ವಲಯ ಮಟ್ಟ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ತೋರಿದ ರವಿ ಬಿ.ಎಸ್.ರವರ ತಂಡ ಇದೀಗ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ. ಜಾರ್ಖಂಡ್ ರಾಜ್ಯದಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ. ಇವರೊಂದಿಗೆ ಪೊಲೀಸ್ ಉಪನಿರೀಕ್ಷಕರಾದ ಚಿತ್ರದುರ್ಗದ ಲೋಹಿತ್, ಕಾರವಾರದ ರಾಜ್ ಕುಮಾರ್ ತಂಡದಲ್ಲಿದ್ದಾರೆ.
ಪೊಲೀಸ್ ಇಲಾಖೆಯಲ್ಲಿ ಕುಶಾಗ್ರಮತಿ ಅಧಿಕಾರಿಯಾಗಿರುವ ರವಿ ಬಿ.ಎಸ್.ರವರು ಈಗಾಗಲೇ ಹಲವಾರು ಪ್ರಕರಣಗಳನ್ನು ಭೇದಿಸುವಲ್ಲಿ ತನಿಖಾ ಕೌಶಲ್ಯತೆಯನ್ನು ಮೆರೆದಿದ್ದು, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
Home ಅಧಿಕಾರಿಗಳ ಕಾರ್ಯಕ್ರಮ ಪೊಲೀಸ್ ತನಿಖೆಯಲ್ಲಿ ವೈಜ್ಞಾನಿಕ ಕೌಶಲ್ಯತೆ ಬಳಕೆ-ವೃತ್ತ ನಿರೀಕ್ಷಕ ರವಿ ಬಿ.ಎಸ್. ರಾಷ್ಟ್ರೀಯ ಮಟ್ಟಕ್ಕೆ