-ಅಧ್ಯಕ್ಷ ರಘುರಾಮ ಪಾಟಾಳಿ, ಕಾರ್ಯದರ್ಶಿ ತಾರಾನಾಥ ಮಡಿವಾಳ
ಪುತ್ತೂರು:ದರ್ಬೆ ಗೂಡ್ಸ್ ವಾಹನ ಚಾಲಕ ಮ್ಹಾಲಕರ ಸಂಘದ 2024&26ನೇ ಸಾಲಿನ ಅಧ್ಯಕ್ಷರಾಗಿ ರಘುರಾಮ ಪಾಟಾಳಿ ಅರಂತನಡ್ಕ ಕಾರ್ಯದರ್ಶಿಯಾಗಿ ತಾರಾನಾಥ ಮಡಿವಾಳ ಕಾವು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪುರುಷೋತ್ತಮ ಗೌಡ, ಖಜಾಂಚಿಯಾಗಿ ಎ. ಮೋಹನ ನಾಯ್ಕ, ಪದಾಧಿಕಾರಿಗಳಾಗಿ ಅಬ್ದುಲ್ ಕರೀಂ ಹಾಗೂ ಕೆ. ಮಾಧವ ಸಾಲಿಯಾನ್ ಆಯ್ಕೆಯಾಗಿದ್ದಾರೆ. ಡಿ.1ರಂದು ಸಂಘದ ಕಚೇರಿಯಲ್ಲಿ ಮಾಜಿ ಅಧ್ಯಕ್ಷ ದಿನೇಶ್ ನಾಕ್‌ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ವಾರ್ಷಿಕ ಲೆಕ್ಕಪತ್ರ ಮಂಡಸಿ ಅನುಮೋದನೆ ಪಡೆಯಲಾಯಿತು. ತಾರಾನಾಥ ಮಡಿವಾಳ ವರದಿ ವಾಚಿಸಿದರು. ಖಲಂದರ್ ಶಾಫಿ ಸಹಕರಿಸಿದರು. ಮನೋಹರ್ ಪಾಟಾಳಿ ನೈತ್ತಾಡಿ ಲಘು ಉಪಹಾರವನ್ನು ನೀಡಿ ಸಹಕರಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.