ವಿಟ್ಲ ಮೂಡ್ನೂರು ಗ್ರಾಮದ 50 ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ
ವಿಟ್ಲಮುಡ್ನೂರು: ಒಕ್ಕಲಿಗ ಸ್ವಸಹಾಯ ಟ್ರಸ್ಟ್ (ರಿ) ಪುತ್ತೂರು ದಶಮಾನೋತ್ಸವ ಸಮಿತಿಯ ಸಹಯೋಗದೊಂದಿಗೆ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟ ಯುವ ಘಟಕ, ಮಹಿಳಾ ಘಟಕ, ಗ್ರಾಮ ಸಮಿತಿಯ ಸಹಕಾರದೊಂದಿಗೆ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವ ಸಂಭ್ರಮದ ಅಂಗವಾಗಿ ಸ್ವ ಸಹಾಯ ಸಂಘಗಳಿರುವ ಎಲ್ಲಾ ಗ್ರಾಮಗಳಲ್ಲಿ ದಾಂಪತ್ಯ ಜೀವನದ 50 ವರ್ಷ ಪೂರೈಸಿದ ಮಾದರಿ ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ವಿಟ್ಲ ಮೂಡ್ನೂರು ಗ್ರಾಮದ ಕುಂಡಡ್ಕ ಗುಣಶ್ರೀ ಶಾಲೆಯಲ್ಲಿ ಮಾಂಕು ಗೌಡ ಹಾಗೂ ರತ್ನಾವತಿ ಹಡೀಲು ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮವು ನ.24 ರಂದು ನಡೆಯಿತು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ವಲಯ ಅಧ್ಯಕ್ಷರು ಹಾಗೂ ಒಕ್ಕೂಟದ ಅಧ್ಯಕ್ಷರಾದ ನಾರಾಯಣಗೌಡ ಓಟೆ, ದಶಮಾನೋತ್ಸವ ಸಮಿತಿಯ ಜೊತೆ ಕಾರ್ಯದರ್ಶಿ ಪೂವಪ್ಪ ಗೌಡ,ಒಕ್ಕಲಿಗ ಯಾನೆ ಗೌಡ ಸಂಘ ಬಂಟ್ವಾಳ ಇದರ ಗೌರವಾಧ್ಯಕ್ಷರಾದ ಚಿದಾನಂದ ಕುಳ, ಒಕ್ಕೂಟದ ಉಪಾಧ್ಯಕ್ಷರಾದ ಚಂದ್ರಶೇಖರ ಗೌಡ,ಯುವ ಘಟಕದ ಅಧ್ಯಕ್ಷ ಪ್ರವೀಣ್, ಕೋಶಾಧಿಕಾರಿ ಪ್ರಶಾಂತ್,ಕಾರ್ಯದರ್ಶಿ ಶಿಲ್ಪ,ಜೊತೆ ಕಾರ್ಯದರ್ಶಿ ಸುಷ್ಮಾ, ವಲಯ ಮೇಲ್ವಿಚಾರಕರು ಸುಮಲತಾ,ಪ್ರೇರಕಿ ಶ್ರುತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸ್ವಾಗತವನ್ನು ಸುಷ್ಮಾ ಹಡೀಲು ನೆರವೇರಿಸಿದರು. ಚಿಂತನವನ್ನು ದಿವ್ಯ ಹಡೀಲು ವಾಚಿಸಿದರು. ವಿಶಾಲಾಕ್ಷಿ ಧನ್ಯವಾದ ಸಮರ್ಪಿಸಿದರು.