ಡಿ.6 ರಿಂದ ಮೂರು ದಿನ ತೆಂಕಿಲ ವಿವೇಕಾನಂದದಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ

0

ಪುತ್ತೂರು: ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್ ಸಂಸ್ಥೆಯ 42ನೇ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯು ಡಿ.6 ರಿಂದ ಮೂರು ದಿನ ತೆಂಕಿಲ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಯಾದವಶ್ರೀ ಸಭಾಂಗಣದಲ್ಲಿ ಜರುಗಲಿದೆ ಎಂದು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಆಂಡ್ ಎಲೈಡ್ ಆರ್ಟ್ಸ್ ಪುತ್ತೂರು ಇದರ ಮುಖ್ಯ ತರಬೇತುದಾರ ಎಂ ಸುರೇಶ್ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.


1978 ರಲ್ಲಿ ಸ್ಥಾಪನೆಗೊಂಡ ಇನ್ಸ್‌ಟಿಟ್ಯೂಟ್ ಆಫ್ ಕರಾಟೆ ಆಂಡ್ ಆಲೈಡ್ ಆರ್ಟ್ಸ್‌ನ ಪುತ್ತೂರು ಶಾಖೆಯ ಆತಿಥ್ಯದಲ್ಲಿ ಕರಾಟೆ ಸ್ಪರ್ಧೆಯು ನಡೆಯಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಸುಮಾರು 2ಸಾವಿರಕ್ಕೂ ಮಿಕ್ಕಿ ಕರಾಟೆ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ ಎಂದ ಅವರು ಡಿ. 6ರಂದು ಸಂಜೆ ಗಂಟೆ 4ಕ್ಕೆ ಕರಾಟೆ ಸ್ಪರ್ಧೆಯನ್ನು ಶಾಸಕ ಅಶೋಕ್ ಕುಮಾರ್ ರೈ ಉದ್ಘಾಟಿಸಲಿದ್ದಾರೆ.

ಕರಾಟೆ ಬುಡೋಕಾನ್ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ.ಎಂ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಅಧ್ಯಕ್ಷ ಡಾ. ಶಿವಪ್ರಕಾಶ್ ಎಂ, ಪುತ್ತೂರು ಕರಾಟೆ ಸಂಸ್ಥೆಯ ಸ್ಥಾಪಕ ಜನಾರ್ದನ ಭಟ್ ಸೇಡಿಯಾಪು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಡಿ.8 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಮುಳಿಯ ಜ್ಯುವೆಲ್ಸ್‌ನ ಸಭಾಪತಿ ಹಾಗೂ ಆಡಳಿತ ನಿರ್ದೇಶಕ ಕೇಶವಪ್ರಸಾದ್ ಮುಳಿಯ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಸಂಚಾಲಕ ರವಿನಾರಾಯಣ ಎಂ, ಶಾಲಾ ಮುಖ್ಯಗುರು ಸತೀಶ್ ಕುಮಾರ್, ರಾಧಾಕೃಷ್ಣ ಮಂದಿರದ ಕಾರ್ಯದರ್ಶಿ ದಿನೇಶ್ ಪಾಂಗಾಳರವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅವರ ಮಾಹಿತಿ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಕರಾಟೆಯ ಹಿರಿಯ ಶಿಕ್ಷಕರಾದ ಗೋಪಾಲ್ ವಿ, ಉಮೇಶ್ ಆಚಾರ್ಯ, ನವೀನ್ ಕುಮಾರ್, ಸುಖೇಶ್, ಅತುಲ್ ಭಟ್, ಭುವನ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here