ಅರಿಯಡ್ಕ ಪ್ರಾಥಾಮಿಕ ಶಾಲೆಯ ನೂತನ ಶೌಚಾಲಯದ ಕೀ ಹಸ್ತಾಂತರ ಕಾರ್ಯಕ್ರಮ

0

ಅರಿಯಡ್ಕ: ದ.ಕ.ಜಿ.ಪಂ ಹಿರಿಯ ಪ್ರಾಥಮಿಕ ಶಾಲೆ ಅರಿಯಡ್ಕ ಇಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ಮತ್ತು ಅರಿಯಡ್ಕ ಗ್ರಾಮ ಪಂಚಾಯತ್ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅಂದಾಜು ರೂ 5.20 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯದ ಕೀ‌ ,ಹಸ್ತಾಂತರ ಕಾರ್ಯಕ್ರಮ ಡಿ.9 ರಂದು ನಡೆಯಿತು.

ಶಾಲಾ ವಿದ್ಯಾರ್ಥಿಗಳು ರಿಬ್ಬನ್ ತುಂಡರಿಸಿ‌ ಶೌಚಾಲಯ ಉದ್ಘಾಟಿಸಿದರು.ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರು ಸಂಸ್ಥೆಯ ಎಸ್ ಡಿ ಎಂ ಸಿ ಅಧ್ಯಕ್ಷ ಹನೀಫ್ ಪಟ್ಲಕಾನ ರವರಿಗೆ,ಕೀ ಹಸ್ತಾಂತರ ಮಾಡಿ ಮಾತನಾಡಿ, ಬಹು ದಿನಗಳ ಬೇಡಿಕೆ ಈಡೇರಿದೆ.ಮೂಲಭೂತ ಸೌಕರ್ಯ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿ.ಎನ್.ಆರ್.ಜಿ ಯಿಂದ 90 ಸಾವಿರ ಮತ್ತು ಶಿಕ್ಷಣ ಇಲಾಖೆಯಿಂದ ರೂ 3,26,668-00 ಖರ್ಚು ಮಾಡಲಾಗಿದೆ.ಶೌಚಾಲಯ‌ದ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದರು. ಪಂಚಾಯತ್ ಸದಸ್ಯ ಹರೀಶ್ ರೈ ಜಾರತ್ತಾರು ಮಾತನಾಡಿ, ಶೌಚಾಲಯದ ಕಾಮಗಾರಿ ಬಹು ಬೇಗನೆ ನಡೆದರೂ,ಅದರ ಪ್ರಯೋಜನ ಮಕ್ಕಳಿಗೆ ಸಿಗುವಾಗ ಸ್ವಲ್ಪ ಸಮಯ ಹಿಡಿಯಿತು.ಪ್ರಾರಂಭದಲ್ಲಿ‌ ಉದ್ಯೋಗ ಚೀಟಿ ಪಡೆಯಲು ಸ್ವಲ್ಪ ಕಷ್ಟ ವಾದರೂ , ಉತ್ತಮ ರೀತಿಯ ಶೌಚಾಲಯ ನಿರ್ಮಾಣವಾಗಿದೆ ಎಂದರು.


ಎಸ್.ಡಿ.ಎಂ.ಸಿ.ಅಧ್ಯಕ್ಷ ಹನೀಫ್ ಪಟ್ಲಕಾನ ಮಾತನಾಡಿ, ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಸಹಕರಿಸಿದ ,ಶಿಕ್ಷಣ ಇಲಾಖೆ ಮತ್ತು ಪಂಚಾಯತ್ ಗೆ ಅಭಿನಂದನೆ ಸಲ್ಲಿಸಿದರು.

ಗೌರವಾರ್ಪಣೆ
ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಉದ್ಯೋಗ ಚೀಟಿ ನೀಡಿದ‌ ಸುಲೈಮಾನ್ ಎಂ.ಆರ್, ನಾರಾಯಣ ಗೌಡ ಪಟ್ಲಕಾನ, ಹರೀಶ್ ರೈ ಜಾರತ್ತಾರು, ಶೈನಿ ರೈ, ಚಂದ್ರಾವತಿ ರೈ, ಕವಿತಾ ರೈ, ರೇವತಿ ಜೆ ರೈ,ಅಕ್ಷತ್ ಕುಮಾರ್,ಅರುಣಾಕ್ಷಿ , ಮತ್ತು ಸುನೀತಾ ರವರನ್ನು ಶಾಲು ಹಾಕಿ ಗೌರವಿಸಲಾಯಿತು.


ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿ,ಪಂಚಾಯತ್ ಉಪಾಧ್ಯಕ್ಷೆ ಮೀನಾಕ್ಷಿ ಪಾಪೆ ಮಜಲು, ಸದಸ್ಯರಾದ ಹರೀಶ್ ರೈ ಜಾರತ್ತಾರು,ರಾಜೇಶ್ ಮಣಿಯಾಣಿ ತ್ಯಾಗ ರಾಜೆ,ನಾರಾಯಣ ನಾಯ್ಕ ಚಾಕೋಟೆ, ಸದಾನಂದ ಮಣಿಯಾಣಿ ಕೊಪ್ಪಳ,ರೇಣುಕಾ ಸತೀಶ್ ಮಡ್ಯಂಗಳ, ಪುಷ್ಪಲತಾ ಮರತ್ತಮೂಲೆ, ಮುಖ್ಯೋಪಾಧ್ಯಾಯಿನಿ ಜಯಂತಿ ಎನ್, ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಹನೀಫ್ ಪಟ್ಲಕಾನ,ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರು, ಖಜಾಂಚಿ ಎ.ಆರ್.ಇಬ್ರಾಹಿಂ ಶೇಖಮಲೆ, ನಾರಾಯಣ ಗೌಡ ಪಟ್ಲಕಾನ, ಪ್ರವೀಣ್ ರೈ ಪನೆಕ್ಕಳ, ಶರತ್ ಗೌಡ ಮಡ್ಯಂಗಳ, ಸೀತಾರಾಮ ಶೇಖಮಲೆ, ಚಂದ್ರ ಶೇಖರ ಪೆಲತ್ತಡಿ,ಹುಕ್ರಪ್ಪ ಮಡ್ಯಂಗಳ, ನಾರಾಯಣ ಗೌಡ ಎರ್ಕ, ಸತೀಶ್ ಕರ್ಕೆರ ಮಡ್ಯಂಗಳ, ಯತೀಂದ್ರ ಬೊಳ್ಳಾಡಿ, ಗಣೇಶ್ ಶೇಖಮಲೆ, ರೀಮಾ ಶೇಖ ಮಲೆ, ಶಿಕ್ಷಕರಾದ, ಕಮಲಾಕ್ಷಿ, ರೆಜಿನಾ ಡಿಸೋಜ, ಜ್ಯೋತಿ ರೆಬೆಲ್ಲೊ, ಮಾಲತಿ ಕೆ ಪ್ರೇಮ ಲತಾ, ವಿದ್ಯಾರ್ಥಿಗಳು ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಉಪಸ್ಥಿತರಿದ್ದರು.‌ಪಂಚಾಯತ್ ಕಾರ್ಯ ದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ, ಸಿಬ್ಬಂದಿ ಪ್ರಭಾಕರ ವಂದಿಸಿದರು.

LEAVE A REPLY

Please enter your comment!
Please enter your name here