ಕ್ರಿಕೆಟ್-ಟೀಮ್ ಕೂಡಮರ(ಪ್ರ), ಬಿಲ್ಲವ ವಾರಿಯರ್ಸ್ ಕೆಯ್ಯೂರು(ದ್ವಿ)
ಹಗ್ಗ-ಜಗ್ಗಾಟ(ಮ)-ಬಿರ್ವೆರ ಕೂಟ ಆರ್ಯಾಪು(ಪ್ರ),ಬಿಲ್ಲವ ವಾರಿಯರ್ಸ್ ಕೆಯ್ಯೂರು(ದ್ವಿ)
ಹಗ್ಗ-ಜಗ್ಗಾಟ(ಪು)-ನಮ್ಮ ಗೆಜ್ಜೆಗಿರಿ ನಂದನ(ಪ್ರ),ಬಿಲ್ಲವ ವಾರಿಯರ್ಸ್ ಕೆಯ್ಯೂರು(ದ್ವಿ)
ತ್ರೋಬಾಲ್(ಮ)-ಬಿರುವೆರ್ ಬಂಡಾಡಿ(ಪ್ರ), ಬಿಲ್ಲವ ವಾರಿಯರ್ಸ್ ಕೆಯ್ಯೂರು(ದ್ವಿ)
ಪುತ್ತೂರು: ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವಾಕ್ಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೊಳಪಟ್ಟ ಸಮಾಜ ಬಾಂಧವರಿಗಾಗಿ ಅವಿಭಜಿತ ಪುತ್ತೂರು ತಾಲೂಕು ಮಟ್ಟದ `ಕೋಟಿ-ಚೆನ್ನಯ ಕ್ರೀಡಾಕೂಟ-2024′ ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಕ್ರೀಡಾಂಗಣದಲ್ಲಿ ಡಿ.8 ರಂದು ಜರಗಿದ್ದು ಯಶಸ್ವಿ ಸಮಾಪನ ಯಶಸ್ವಿಯಾಗಿ ಸಮಾಪನೆಗೊಂಡಿತು.
ಪುರುಷರ ಓವರ್‌ಆರ್ಮ್ ಕ್ರಿಕೆಟ್ ಪಂದ್ಯಾಟದಲ್ಲಿ ಟೀಮ್ ಕೂಡಮರ ಚಾಂಪಿಯನ್ ಎನಿಸಿದ್ದು, ಬಿಲ್ಲವ ವಾರಿಯರ್ಸ್ ಕೆಯ್ಯೂರು ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ನಮ್ಮ ಗೆಜ್ಜೆಗಿರಿ ನಂದನ ಹಾಗೂ ಬಿಲ್ಲವ ಗ್ರಾಮ ಸಮಿತಿ ಆನಡ್ಕ ಇವುಗಳು ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಬೆಸ್ಟ್ ಬ್ಯಾಟರ್ ಆಗಿ ಬಿಲ್ಲವ ಗ್ರಾಮ ಸಮಿತಿ ಆನಡ್ಕ ತಂಡದ ಆಕಾಶ್, ಬೆಸ್ಟ್ ಬೌಲರ್ ಆಗಿ ಟೀಮ್ ಕೂಡಮರ ತಂಡದ ಪ್ರಖ್ಯಾತ್ ನುಳಿಯಾಲು, ಸರಣಿಶ್ರೇಷ್ಟ ಆಟಗಾರನಾಗಿ ಬಿಲ್ಲವ ವಾರಿಯರ್ಸ್ ಕೆಯ್ಯೂರು ತಂಡದ ಅವಿಸ್‌ರವರು ಗುರುತಿಸಿಕೊಂಡಿದ್ದಾರೆ. ಒಟ್ಟು 20 ತಂಡಗಳು ಭಾಗವಹಿಸಿದ್ದವು.
ಮಹಿಳೆಯರ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ಬಿರ್ವೆರ ಕೂಟ ಆರ್ಯಾಪು ಚಾಂಪಿಯನ್, ಬಿಲ್ಲವ ವಾರಿಯರ್ಸ್ ಕೆಯ್ಯೂರು ರನ್ನರ್ಸ್, ಪುರುಷರ ಹಗ್ಗ-ಜಗ್ಗಾಟ ಸ್ಪರ್ಧೆಯಲ್ಲಿ ನಮ್ಮ ಗೆಜ್ಜೆಗಿರಿ ನಂದನ ಚಾಂಪಿಯನ್, ಬಿಲ್ಲವ ವಾರಿಯರ್ಸ್ ಕೆಯ್ಯೂರು ರನ್ನರ್ಸ್, ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಬಿರುವೆರ್ ಬಂಡಾಡಿ ಚಾಂಪಿಯನ್, ಬಿಲ್ಲವ ವಾರಿಯರ್ಸ್ ಕೆಯ್ಯೂರು ರನ್ನರ್ಸ್ ಪ್ರಶಸ್ತಿಯನ್ನು ಗಳಿಸಿದ್ದಾರೆ.
52 ಗ್ರಾಮ ಸಮಿತಿ ಭಾಗಿ:
ಬಿಲ್ಲವ ಸಂಘ ಪುತ್ತೂರು ಇದರ ಪುತ್ತೂರು ತಾಲೂಕು ವ್ಯಾಪ್ತಿಯ 52 ಗ್ರಾಮ ಸಮಿತಿಗಳಾದ ಪುತ್ತೂರು ನಗರ ಸಮಿತಿ, ಬಲ್ನಾಡು, ಬುಳೇರಿಕಟ್ಟೆ, ಕೊಡಿಪ್ಪಾಡಿ, ಕೆಮ್ಮಿಂಜೆ, ಪಡ್ನೂರು, ಚಿಕ್ಕಮುಡ್ನೂರು, ಬೆಳ್ಳಿಪ್ಪಾಡಿ, ಕೋಡಿಂಬಾಡಿ, ಕಬಕ, ಉಪ್ಪಿನಂಗಡಿ, ಹಿರೇಬಂಡಾಡಿ, ಬಜತ್ತೂರು, ಗೋಳಿತೊಟ್ಟು ಆಲಂತಾಯ, ಶಿರಾಡಿ, ಕೊಣಾಜೆ, ಸಿರಿಬಾಗಿಲು, ಇಚ್ಲಂಪಾಡಿ, ನೆಲ್ಯಾಡಿ, ಕೊಣಾಲು, ಕೌಕ್ರಾಡಿ, ಆರ್ಯಾಪು, ಕುರಿಯ, ಕುಂಜೂರುಪಂಜ, ಬೆಟ್ಟಂಪಾಡಿ, ಇರ್ದೆ, ಪಾಣಾಜೆ, ನಿಡ್ಪಳ್ಳಿ, ಒಳಮೊಗ್ರು, ಕೆಯ್ಯೂರು, ಕೆದಂಬಾಡಿ, ಕೊಳ್ತಿಗೆ, ಅರಿಯಡ್ಕ, ಪಾಲ್ತಾಡಿ, ಸುಳ್ಯಪದವು, ಪಡುವನ್ನೂರು, ನೆಟ್ಟಣಿಗೆ ಮುಡ್ನೂರು, ಬಡಗನ್ನೂರು, ಕಾವು, ನರಿಮೊಗರು, ಆನಡ್ಕ, ಶಾಂತಿಗೋಡು, ಸರ್ವೆ, ಮುಂಡೂರು, ಕಾಣಿಯೂರು, ಚಾರ್ವಾಕ, ಗೋಳ್ಪಾಡಿ, ಕುದ್ಮಾರು, ಬೆಳಂದೂರು, ಕಾÊಮಣ, ಸವಣೂರು, ಪುಣ್ಚಪ್ಪಾಡಿ, ಆಲಂಕಾರು, ಹಳೇನೇರಂಕಿ, ರಾಮಕುಂಜ, ಕೊಯಿಲ, ಪೆರಾಬೆ, ಕುಂತೂರು, ಬಲ್ಯ, ಕಡಬ, ಕುಟ್ರುಪ್ಪಾಡಿ, ಕೋಡಿಂಬಾಳ, ನೂಜಿಬಾಳ್ತಿಲ, ರೆಂಜಲಾಡಿ, ಐತೂರು, ಬಂಟ್ರ, 102 ನೆಕ್ಕಿಲಾಡಿ, ಕೊಂಬಾರು, ಬಿಳಿನೆಲೆ ಗ್ರಾಮ ಸಮಿತಿ ಕ್ರೀಡಾಕೂಟದಲ್ಲಿ ಭಾಗವಹಿಸಿತ್ತು.
ಸಮಾರೋಪ
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಯುವವಾಹಿನಿ ಪುತ್ತೂರು ಘಟಕದ ಅಧ್ಯಕ್ಷ ಜಯರಾಮ ಬಿ.ಎನ್‌ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ನಗರ ಶಾಖೆಯ ಮೆಸ್ಕಾಂ ಸಹಾಯಕ ಇಂಜಿನಿಯರ್ ರಾಜೇಶ್ ಕೆ, ಮಂಗಳೂರು ದಕ್ಷಿಣ ರೈಲ್ವೇ ವಿಭಾಗದ ರಾಷ್ಟ್ರೀಯ ಕ್ರೀಡಾಪಟು ಅಶ್ವಥ್ ಪೂಜಾರಿ ಕೆ.ಎಸ್, ಯುವವಾಹಿನಿ ಮಾಜಿ ಅಧ್ಯಕ್ಷರುಗಳು ಸಹಿತ ಹಲವರು ಉಪಸ್ಥಿತರಿದ್ದರು. ಕ್ರೀಡಾ ನಿರ್ದೇಶಕ ಲೋಹಿತ್ ಕೆ.ಕಲ್ಕಾರ್ ಸ್ವಾಗತಿಸಿ, ಕಾರ್ಯದರ್ಶಿ ಸಮಿತ್ ಪಿ ವಂದಿಸಿದರು. ನಿರ್ದೇಶಕರಾದ ಅವಿನಾಶ್ ಹಾರಾಡಿ ಹಾಗೂ ಪ್ರಿಯಾಶ್ರೀ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಕೋಟಿ-ಚೆನ್ನಯ ಲಕ್ಕಿಡಿಪ್ ಡ್ರಾ ನೆರವೇರಿತು.
ಸನ್ಮಾನ
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೊಳಪಟ್ಟ ಬಿಲ್ಲವ ಸಮಾಜದ ಕ್ರೀಡಾ ಸಾಧಕರನ್ನು ಈ ಸಂದರ್ಭದಲ್ಲಿ ಗುರುತಿಸಲಾಗುವುದು ಎಂದು ಘೋಷಿಸಲಾಗಿತ್ತು. ಈ ನಿಟ್ಟಿನಲ್ಲಿ ಇತ್ತೀಚೆಗೆ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಿವೃತ್ತ ಶಿಕ್ಷಕಿ ಎ.ವೇದಾವತಿ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಅಶೋಕ್‌ರವರನ್ನು ಅವರ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.