ನೇರಳಕಟ್ಟೆಯಲ್ಲಿ ʼದಿ ಸಫೈರ್ʼ ವಸತಿ, ವಾಣಿಜ್ಯ ಸಂಕೀರ್ಣ ಉದ್ಘಾಟನೆ

0

ವಿಟ್ಲ: ಮಾಣಿ ಸಮೀಪದ ನೇರಳಕಟ್ಟೆಯಲ್ಲಿ ಕೊಡಾಜೆ ಆಫ್ನಾನ್ ಗ್ರೂಪ್ ನ ಅಬ್ದುಲ್ ರಹಿಮಾನ್ ಹಾಜಿಯವರ ಪುತ್ರ ಶಾಕೀರ್ ಕೊಡಾಜೆ ಮಾಲಕತ್ವದ ದಿ ಸಫೈರ್ ವಸತಿ ಮತ್ತು ವಾಣಿಜ್ಯ ಸಂಕೀರ್ಣವನ್ನುರಾಜ್ಯ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ರವರು ನೆರವೇರಿಸಿದರು.
ಬಳಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ಪೀಕರ್ ಯು.ಟಿ.ಖಾದರ್ ರವರು ಶಾಕೀರ್ ರವರ ಈ ವಸತಿ ಮತ್ತು ವಾಣಿಜ್ಯ ಸಂಕೀರ್ಣ ನೇರಳಕಟ್ಟೆ ಅಭಿವೃದ್ಧಿಗೆ ಬಲುದೊಡ್ಡ ಕೊಡುಗೆಯಾಗಿದ್ದು ಶಾಕೀರ್ ರವರು ದುಬೈನಲ್ಲಿ ನೆಲೆಸಿದ್ದರೂ ದೊಡ್ಡ ಪೇಟೆಗಳಲ್ಲಿ ನಿರ್ಮಿಸಬಹುದಾಗಿದ್ದ ಸುಸಜ್ಜಿತವಾದ ಈ ಕಟ್ಟಡವನ್ನು ಹುಟ್ಟೂರಿನಲ್ಲಿ ನಿರ್ಮಿಸಿ ಮಾದರಿ ಉದ್ಯಮಿಯಾಗಿದ್ದಾರೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿದ್ದ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ಹನೀಫ್ ಖಾನ್ ಕೊಡಾಜೆ, ಪತ್ರಕರ್ತ ಲತೀಫ್ ನೇರಳಕಟ್ಟೆ, ಬರಿಮಾರು ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಮಚಂದ್ರರವರು ಶುಭ ಹಾರೈಸಿದರು.
ಈ ಸಂದರ್ಭ ಕಟ್ಟಡ ನಿರ್ಮಾಣದಲ್ಲಿ ಪಾಲ್ಗೊಂಡಿದ್ದ ಎಲ್ಲಾ ವಿಭಾಗದ ಕೆಲಸಗಾರರಿಗೆ ಕೊಡುಗೆಗಳನ್ನು ನೀಡಲಾಯಿತು ಮತ್ತು ಇಂಜಿನಿಯರ್ ಲತೀಫ್ ಕೊಡಾಜೆ ರವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ರಫೀಕ್ ಅಂಬ್ಲಮೊಗೆರು, ಅಹಮದ್ ಹಾಜಿ ಉನೈನ್, ಹಾಜಿ ಉಮರ್ ಫೈರೋಜ್, ಅಶ್ರಫ್ ವಿ.ಎಚ್. ಉಪಸ್ಥಿತರಿದ್ದರು. ಸಫ್ವಾನ್ ಪಿಲಿಕಲ್ ರವರು ಸ್ವಾಗತಿಸಿ, ಜ್ಯಿನುಲ್ ಅಕ್ಬರ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here