ಪುತ್ತೂರು: 33ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ದ್ವಿ ಪಥ ಮಾರ್ಗವನ್ನಾಗಿ ಬದಲಾಯಿಸುವ ಕಾಮಗಾರಿ ಹಾಗೂ 33 ಕೆ.ವಿ ಕುಂಬ್ರ ವಿದ್ಯುತ್ ಉಪಕೇಂದ್ರದಲ್ಲಿ ಹಾಲಿ ಇರುವ 5 ಎಂ.ವಿ.ಎ ಶಕ್ತಿ ಪರಿವರ್ತಕವನ್ನು 10 ಎಂ.ವಿ.ಎ ಶಕ್ತಿ ಪರಿವರ್ತಕದಿಂದ ಬದಲಾಯಿಸುವ ಕಾಮಗಾರಿಯ ಸಲುವಾಗಿ ಜ.3ರಂದು ಪೂರ್ವಾಹ್ನ 9:30 ರಿಂದ ಸಂಜೆ 5:00 ರವರೆಗೆ 33/11ಕೆವಿ ಕುಂಬ್ರ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ದೇರ್ಲ, ಮದ್ಲ, ತಿಂಗಳಾಡಿ, ಇರ್ದೆ, ಪಾಣಾಜೆ ಮತ್ತು ಸುಳ್ಯಪದವು ಹಾಗೂ 110/33/11 ಕೆವಿ ಮಾಡಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ಕೈಕಂಬ, ಹಾಗೂ 33/11 ಕೆವಿ ಕಾವು ವಿದ್ಯುತ್ ಉಪಕೇಂದ್ರದಿಂದ ಹೊರಡುವ ಈಶ್ವರಮಂಗಲ ಟೌನ್, ಕರ್ನೂರು ಹಾಗೂ ಕನಕಮಜಲು ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.