ಫಿಲೋಮಿನಾ ಸ್ನಾತಕೋತ್ತರ ಸಮಾಜಕಾರ‍್ಯ ವಿಭಾಗ ವಿದ್ಯಾರ್ಥಿಗಳಿಂದ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮ

0

ಪುತ್ತೂರು: ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ಕೇಂದ್ರ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ದ.ಕ (ನ್ಯಾಕ್ ಮಾನ್ಯತೆ ಎ) ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಬೆಳ್ಳಿಪ್ಪಾಡಿ ಇದರ ಆಶ್ರಯದಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಕಾರ್ಯಕ್ರಮವು ಬೆಳ್ಳಿಪ್ಪಾಡಿ ಶಾಲೆಯಲ್ಲಿ ಡಿ.17ರಂದು ನಡೆಯಿತು.


ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಚಂದ್ರ ಪೂಜಾರಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ’ಇಂತಹ ಒಂದು ಕಾರ್ಯಕ್ರಮವು ಈಗಿನ ಯುವ ಪೀಳಿಗೆಗೆ ತುಂಬಾ ಅನುಕೂಲಕರವಾದದ್ದು ಹಾಗೂ ಪರಿಸರವು ಹೇಗೆಲ್ಲ ನಾಶವಾಗಿ ಹೋಗುತ್ತಿದೆ ಎಂಬುದರ ಕುರಿತು ಮಾತನಾಡಿದರು.

ಕಾರ್ಯಕ್ರಮಕ್ಕೆ ಸಂಪನ್ಮೂಲ ಯಕ್ತಿಯಾಗಿ ಆಗಮಿಸಿದ ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಉಪನ್ಯಾಸಕಿ ಶಶಿಪ್ರಭಾರವರು ವಿದ್ಯಾರ್ಥಿಗಳಿಗೆ ನಮ್ಮ ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬಹುದು. ಈಗಿನ ಜನತೆಯು ಪ್ಲಾಸ್ಟಿಕ್ ವಿಷಯದ ಕುರಿತು ತೋರುತ್ತಿರುವ ಅಸಡ್ಡೆ ಹಾಗೂ ಈಗ ನಾವು ಬಳಸುವ ಪ್ಲಾಸ್ಟಿಕ್ ನೀರಿನ ಬಾಟಲ್‌ನಿಂದ ಆಗುವ ಅಪಾಯಗಳು, ಅಲ್ಲದೆ ಇನ್ನಿತರ ಮಹತ್ವವಾದ ವಿಷಯಗಳನ್ನು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ವಿವರಿಸಿದರು. ಮುಖ್ಯೋಪಾಧ್ಯಾಯಿನಿ ಯಶೋಧ ಎನ್ ಎಂ ರವರು ಕಾರ್ಯಕ್ರಮವನ್ನು ತಮ್ಮ ಶಾಲೆಯಲ್ಲಿ ನಡೆಸಿದ್ದಕ್ಕೆ ಕಾಲೇಜು ವೃಂದಕ್ಕೆ ಧನ್ಯವಾದ ಸಲ್ಲಿಸಿ, ತಮ್ಮ ಮಕ್ಕಳ ಪರಿಸರ ಕಾಳಜಿಗೆ ಮಾಡಿದ ಎಲ್ಲಾ ಜಾಗೃತಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಬೆಳ್ಳಿಪ್ಪಾಡಿ ಸ.ಉ.ಹಿ.ಪ್ರಾ ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವಾಸುದೇವ ಪೂಜಾರಿ, ಕೋಡಿಂಬಾಡಿ ಗ್ರಾ.ಪಂ ಸದಸ್ಯ ರಾಮಚಂದ್ರ ಪೂಜಾರಿ, ಸಂಪನ್ಮೂಲ ವ್ಯಕ್ತಿಯಾಗಿ ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕಿ ಶಶಿಪ್ರಭಾ, ಸಮಾಜ ಕಾರ್ಯ ವಿಭಾಗದ ಉಪನ್ಯಾಸಕಿ ಶ್ರೀಮಣಿ, ಬೆಳ್ಳಿಪ್ಪಾಡಿ ಶಾಲಾ ಮುಖ್ಯಗುರು ಯಶೋಧ ಎನ್.ಎಂ, ಬೆಳ್ಳಿಪ್ಪಾಡಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರಾದ ನಿಶ್ಮಿತಾ, ವೈಶಾಲಿ, ನಯನ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಸಂತ ಫಿಲೋಮಿನಾ ಕಾಲೇಜು (ಸ್ವಾಯತ್ತ) ಪುತ್ತೂರು ಸಮಾಜ ಕಾರ್ಯ ವಿಭಾಗದ ವೈಷ್ಣವಿ ನಿರೂಪಿಸಿ, ತೇಜಸ್ವಿನಿ ಬಿ.ಎಲ್ ಸ್ವಾಗತಿಸಿ, ಮಹಮ್ಮದ್ ಆಶೀರ್ ವಂದಿಸಿದರು.

LEAVE A REPLY

Please enter your comment!
Please enter your name here