ರಾಮಕುಂಜ: ಜೀರ್ಣೋದ್ದಾರಗೊಂಡಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಬರೆಮೇಲು ಶ್ರೀ ಶಿರಾಡಿ ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಶ್ರೀ ಶಿರಾಡಿ, ಪಂಜುರ್ಲಿ ಮತ್ತು ಮೊಗೇರ ದೈವಗಳ ನೇಮೋತ್ಸವ ಜ.8 ಮತ್ತು 9ರಂದು ನಡೆಯಿತು.
ಪುನರ್ನಿರ್ಮಾಣಗೊಂಡಿರುವ ದೈವಸ್ಥಾನದಲ್ಲಿ ಜ.8ರಂದು ಬೆಳಿಗ್ಗೆ ರಾಜನ್ದೈವ ಶ್ರೀ ಶಿರಾಡಿ, ಪಂಜುರ್ಲಿ ಹಾಗೂ ಮೊಗೇರ ದೈವಗಳ ಪ್ರತಿಷ್ಠೆ ನಡೆಯಿತು. ಸಂಜೆ ಶ್ರೀ ಶಿರಾಡಿ, ಪಂಜುರ್ಲಿ ಹಾಗೂ ಮೊಗೇರ ದೈವಗಳ ಭಂಡಾರ ತೆಗೆಯಲಾಯಿತು. ರಾತ್ರಿ ಅನ್ನಸಂತರ್ಪಣೆ ಬಳಿಕ ಪಂಜುರ್ಲಿ, ಮೊಗೇರ ದೈವಗಳ ನೇಮೋತ್ಸವ ನಡೆಯಿತು.
ಜ.9ರಂದು ಬೆಳಿಗ್ಗೆ ಶ್ರೀ ಶಿರಾಡಿ ದೈವದ ನೇಮೋತ್ಸವ ನಡೆದು ಬಟ್ಟಲು ಕಾಣಿಕೆ ನಡೆಯಿತು. ಮಧ್ಯಾಹ್ನ ಅನ್ನಸಂತರ್ಪಣೆ, ಬಿಂದಾರ್ಪಣೆ ನಡೆಯಿತು. ಸಂಜೆ ಶ್ರೀ ಗುಳಿಗ ದೈವದ ನುಡಿಕಟ್ಟು ಆಗಿ ವಳಕಡಮದ ಕುಮಾರಧಾರಾ ನದಿ ತಟದ ತನಕ ಊರ ಮಾರಿ ಅಟ್ಟುವ ಕಾರ್ಯಕ್ರಮ ನಡೆಯಿತು. ಜ.10ರಂದು ಬೆಳಿಗ್ಗೆ ಶುದ್ಧ ತಂಬಿಲ ನಡೆಯಿತು.
ದೈವಸ್ಥಾನದ ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಕೆ.ಶ್ರೀನಿವಾಸ ರಾವ್, ವೀರಪ್ಪ ದಾಸಯ್ಯ ಪಾಣಿಗ, ಅಧ್ಯಕ್ಷರಾದ ಶೀನಪ್ಪ ಗೌಡ ವಳಕಡಮ, ಕಾರ್ಯದರ್ಶಿ ವಿನಯಕುಮಾರ್ ರೈ ಕೊಲಪಟ್ಟೆ, ಜೊತೆ ಕಾರ್ಯದರ್ಶಿ ಉಮೇಶ ನೂಜಿಮಾರು, ಉಪಾಧ್ಯಕ್ಷರಾದ ಕುಶಾಲಪ್ಪ ಬರೆಮೇಲು, ಕೋಶಾಧಿಕಾರಿ ಚೇತನ್ ಆನೆಗುಂಡಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಯತೀಶ್ ಪುತ್ಯೆ, ಶಿವರಾಮ ಭಟ್ ಕೊಲತೋಟ, ಬೆಳಿಯಪ್ಪ ಮುಂಡೈಮಾರ್, ದಿನೇಶ ಊರಾಜೆ, ವಿಶ್ವನಾಥ ಪೆರ್ಲ, ಸೀತಾರಾಮ ವಳಕಡಮ, ರಮೇಶ ಪೆರ್ಲ, ಜಗನ್ನಾಥ ಶೆಟ್ಟಿ ಕಾರೆಗುಡ್ಡೆ, ಸುಂದರ ಮರುವದಗುರಿ, ಬಾಲಕೃಷ್ಣ ಬೇಂಗದಪಡ್ಪು, ಕೇಶವ ಪುತ್ಯೆ, ದಯಾನಂದ ದಾಸ್ ಪಾಣಿಗ, ಕುಂಞಣ್ಣ ಗೌಡ ಪುಣಿಕ್ಕೆತ್ತಡಿ, ಲಕ್ಷ್ಮಣ ಆನೆಗುಂಡಿ, ತಾರಾನಾಥ ನಡುಗುಡ್ಡೆ, ನೇಮೋತ್ಸವ ನಿರ್ವಹಣೆ ಸಮಿತಿ ಸಂಚಾಲಕ ಯದುಶ್ರೀ ಆನೆಗುಂಡಿ, ಸಹ ಸಂಚಾಲಕ ರಮೇಶ್ ಕೊನೆಮಜಲು, ಕಾರ್ಯಾಲಯ ಸಮಿತಿ ಸಂಚಾಲಕ ಶಾಂತರಾಮ ಬೇಂಗದಪಡ್ಪು, ಸಹ ಸಂಚಾಲಕ ಸುರೇಶ್ ಪುತ್ಯೆ, ಹೊರೆಕಾಣಿಕೆ ಸಮಿತಿ ಸಂಚಾಲಕ ಶಶಿ ಪುತ್ಯೆ, ಸಹಸಂಚಾಲಕ ಕೊರಗಪ್ಪ ಮುಂಡ್ಯೆಮಾರ್ ಸಹಿತ ವಿವಿಧ ಉಪಸಮಿತಿಗಳ ಸಂಚಾಲಕರು, ಸಹಸಂಚಾಲಕರು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.