ರಾಮಕುಂಜ: ಹಳೆನೇರೆಂಕಿ ಗ್ರಾಮದ ನೇರೆಂಕಿಗುತ್ತು ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವಸ್ಥಾನ ಮತ್ತು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ದೈವಗಳ ನೇಮೋತ್ಸವ ಮತ್ತು ಶ್ರೀ ಬ್ರಹ್ಮಬೈದರ್ಕಳ ಜಾತ್ರೋತ್ಸವ ಜ.12 ಮತ್ತು 13ರಂದು ನಡೆಯಲಿದೆ.
ಜ.12ರಂದು ಪೂರ್ವಾಹ್ನ 8 ರಿಂದ ಸ್ವಸ್ತಿ ಪುಣ್ಯಾಹವಾಚನ, ಗಣಪತಿಹೋಮ, ದುರ್ಗಾಹೋಮ, ಪಂಚವಿಂಶತಿ ಕಲಶ, ತಂಬಿಲ, ಪ್ರಸಾದ ವಿತರಣೆ ನಡೆಯಲಿದೆ. ಸಂಜೆ 6ರಿಂದ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ, ಪರಿವಾರ ದೈವಗಳ ಮತ್ತು ಶ್ರೀ ಬ್ರಹ್ಮಬೈದರ್ಕಳ ಭಂಡಾರ ತೆಗೆಯುವುದು, ರಾತ್ರಿ 7.30ರಿಂದ ಕಲ್ಲುರ್ಟಿ ದೈವದ ನೇಮ, ರಾತ್ರಿ 8ರಿಂದ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9ರಿಂದ ದೈಯೊಂಕ್ಲು, ಮೈಸಂದಾಯ ನೇಮ, ರಾತ್ರಿ 12ರಿಂದ ಧೂಮಾವತಿ, ಭಾವನ ದೈವದ ನೇಮ ನಡೆಯಲಿದೆ.
ಜ.13ರಂದು ಪೂರ್ವಾಹ್ನ 10ರಿಂದ ಶ್ರೀ ಚಕ್ರವರ್ತಿ ಕೊಡಮಣಿತ್ತಾಯ ದೈವದ ನೇಮ, ಮಧ್ಯಾಹ್ನ 12 ರಿಂದ ಬಟ್ಟಲು ಕಾಣಿಕೆ ಮತ್ತು ಕೈಕಾಣಿಕೆ, ಹರಕೆ, ಮಧ್ಯಾಹ್ನ 1 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 9ರಿಂದ ಶ್ರೀ ಬ್ರಹ್ಮಬೈದರ್ಕಳ ಗರಡಿ ಇಳಿಯುವುದು, ರಾತ್ರಿ 9.30ರಿಂದ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ 10.30ರಿಂದ ಬೈದೇರುಗಳು ಮೀಸೆ ಧರಿಸುವುದು, ಮಾಣಿ ಬಾಲೆ ಗರಡಿ ಇಳಿಯುವುದು, ಕೋಟೆ ಚೆನ್ನಯ ದರ್ಶನ ಪಾತ್ರಿಗಳ ಸೇಟ್, ಬೈದೇರುಗಳ ಸೇಟ್, ಕಂಚಿಕಲ್ಲಿಗೆ ಕಾಯಿ ಹೊಡೆಯುವ ಕಾರ್ಯಕ್ರಮ ನಡೆಯಲಿದೆ ಎಂದು ಆಡಳಿತ ಮೊಕ್ತೇಸರರಾದ ಪುತ್ತೂರು ಮಾಸ್ಟರ್ ಪ್ಲಾನರಿಯ ಎಸ್.ಕೆ.ಆನಂದ ಹಾಗೂ ಆಡಳಿತ ಸಮಿತಿ ಪ್ರಕಟಣೆ ತಿಳಿಸಿದೆ.
ಜ.13 ರಾತ್ರಿ ಧರ್ಮಜಾಗೃತಿ ಸಭೆ
ಜ.13ರಂದು ಸಂಜೆ ಡಿ.ಕೆ.ಆಚಾರ್ಯ ಮತ್ತು ಬಳಗ ಇವರಿಂದ ಯಕ್ಷ-ಗಾನ-ವೈಭವ (ಯಕ್ಷಗಾನದ ಹಾಡುಗಳು) ನಡೆಯಲಿದೆ. ರಾತ್ರಿ 8ರಿಂದ ಧರ್ಮ ಜಾಗೃತಿ ಸಭೆ ನಡೆಯಲಿದ್ದು ತುಳು ಸಂಶೋಧಕ ಡಾ| ಲಕ್ಷ್ಮೀ ಜಿ.ಪ್ರಸಾದ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯಶಿಕ್ಷಕ ನಾರಾಯಣ ಭಟ್ ಟಿ.,ಅಧ್ಯಕ್ಷತೆ ವಹಿಸಲಿದ್ದಾರೆ.
ಜ.12: ಹೊರೆಕಾಣಿಕೆ:
ಜ.12ರಂದು ಪೂರ್ವಾಹ್ನ 9.30ರಿಂದ ಹಳೆನೇರೆಂಕಿ ಪೇಟೆಯಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಸಮಿತಿ ಪ್ರಕಟಣೆ ತಿಳಿಸಿದೆ.