- ಬೆಳೆಯುತ್ತಿರುವ ಪುತ್ತೂರು ನಗರಕ್ಕೆ ಇಂತಹ ಮಳಿಗೆ ಅತ್ಯಾವಶ್ಯಕ-ಡಾ.ದೀಪಕ್ ರೈ
- ಕರ್ನಾಟಕದಲ್ಲಿಯೇ ನಂಬರ್ ವನ್ ಸಂಸ್ಥೆಯಾಗಿ ಬೆಳೆದಿದೆ-ಜಯಂತ ನಡುಬೈಲು
- ಪುತ್ತೂರು ಶ್ರೀಮಹಾಲಿಂಗೇಶ್ವರ ದೇವರ ಆಶೀರ್ವಾದ ಇರಲಿ-ಈಶ್ವರ್ ಬೆಡೇಕರ್
ಪುತ್ತೂರು: ಕರಾವಳಿ ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಹಾಗೂ ವೃತ್ತಿಪರ ಕುಕ್ಕುಟ ಉದ್ಯಮ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ ಪ್ರೈ.ಲಿ.ನ ಭಾರತ್ ಫ್ರೆಶ್ ಚಿಕನ್ 14ನೇ ಔಟ್‌ಲೆಟ್ ಪುತ್ತೂರು ಮುಖ್ಯರಸ್ತೆಯಲ್ಲಿರುವ ಮಹಾಲಸ ಆರ್ಕೇಡ್ ನಲ್ಲಿ ಶುಭಾರಂಭಗೊಂಡಿತು.
ಪುತ್ತೂರು ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ರಿಬ್ಬನ್ ಕಟ್ ಮಾಡಿ ಬಳಿಕ ದೀಪ ಪ್ರಜ್ವಲಿಸಿ ಔಟ್‌ಲೆಟ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಬೆಳೆಯುತ್ತಿರುವ ಪುತ್ತೂರು ನಗರದಲ್ಲಿ ಉನ್ನತವಾದ ಮಳಿಗೆಗಳು ಇದೆ. ಅದರಲ್ಲಿ ಇನ್ನೊಂದು ಉನ್ನತ ಮಳಿಗೆ ಸೇರಿಕೊಂಡಿದೆ. ಮೂಲತಃ ಪುತ್ತೂರಿನವರಾದ ಡಾ.ಅರುಣ್ ಕುಮಾರ್ ರೈ ಪುತ್ತೂರಿಗೆ ಕೊಡುಗೆ ನೀಡಿದ್ದಾರೆ. ಮೊಟ್ಟೆಯಿಂದ ಮಾಂಸದವರೆಗೆ ಹೈಜೆನಿಕ್ ಆಗಿ ಪ್ರೊಸೆಸ್ ಆಗುವ ಉದ್ಯಮವಾಗಿದೆ. ಈ ಸಂಸ್ಥೆ ಪ್ರಕೃತಿಗೆ ಪೂರಕವಾದ ಸಂಸ್ಥೆಯಾಗಿದೆ. ಇದರಿಂದ ಉಂಟಾಗುವ ತ್ಯಾಜ್ಯಗಳನ್ನು ಕೂಡ ಕೋಳಿಯ ಆಹಾರ ಉತ್ಪನ್ನವಾಗಿ ಮಾಡಲಾಗುತ್ತದೆ ಎಂದರು. ಈ ಔಟ್‌ಲೆಟ್‌ನಲ್ಲಿ ಚಿಕನ್‌ನಿಂದ ಬೇಕಾದ ರೀತಿಯ ಮಾಂಸದ ಐಟಂಗಳನ್ನು ಸಿದ್ಧಪಡಿಸಿಕೊಡಲಾಗುತ್ತದೆ. ಪುತ್ತೂರಿನಲ್ಲಿ ಇಂತಹ ಮಳಿಗೆ ಬೇಕು. ಮಾರುಕಟ್ಟೆಯಲ್ಲಿ ಯಾವಾಗಲೂ ಪೈಪೋಟಿ ಬೇಕು ಎಂದ ಅವರು ನನ್ನ ತಂದೆಯ ಶಿಷ್ಯರಾದ ಅರುಣ್ ಕುಮಾರ್ ರೈರವರು ಯಶಸ್ಸು ಪಡೆದ ಉದ್ಯಮಿಯಾಗಿದ್ದಾರೆ. ಅವರ ಮಳಿಗೆಗಳು ಇನ್ನಷ್ಟು ವಿಸ್ತಾರವಾಗಲಿ ಎಂದು ಹೇಳಿ ಶುಭಹಾರೈಸಿದರು.
ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕ ಜಯಂತ್ ನಡುಬೈಲು ಮಾತನಾಡಿ ಪುತ್ತೂರು ನಗರಕ್ಕೆ ಅಗತ್ಯವಿರುವ ಮಳಿಗೆ ಭಾರತ್ ಫ್ರೆಶ್ ಚಿಕನ್. ಅವರೊಂದಿಗೆ ಸುಮಾರು 25 ವರ್ಷಗಳಿಂದ ನಾನು ಕೂಡ ಇದ್ದೆ. ಬ್ರಾಯ್ಲರ್ ಕೋಳಿ ತಿಂದರೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಅಂಶ ಇವತ್ತು ಎಲ್ಲರಲ್ಲಿ ಇದೆ. ಅದನ್ನು ಹೋಗಲಾಡಿಸುವ ಕೆಲಸ ಈ ಸಂಸ್ಥೆಯಿಂದ ಆಗಿದೆ. ಕರ್ನಾಟಕದಲ್ಲಿಯೇ ನಂಬರ್ ವನ್ ಎಂಬ ಹೆಗ್ಗಳಿಕೆ ಪಡೆದ ಸಂಸ್ಥೆಯಾಗಿದೆ. ದೊಡ್ಡ ಉದ್ಯಮದ ಮೂಲಕ ಹಲವರಿಗೆ ಉದ್ಯೋಗ ಕೊಡುವ ವ್ಯವಸ್ಥೆ ಮಾಡಿದ್ದಾರೆ. ಪ್ರತಿಯೊಂದು ನಗರಗಳಲ್ಲಿ ಕೂಡ ಇದರ ಮಳಿಗೆ ಪ್ರಾರಂಭವಾಗಲಿ ಎಂದು ಹೇಳಿ ಶುಭಹಾರೈಸಿದರು.
ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ಈಶ್ವರ್ ಬೆಡೇಕರ್ ಮಾತನಾಡಿ ಪುತ್ತೂರಿನಲ್ಲಿ ಆರಂಭವಾದ ಸಂಸ್ಥೆಗೆ ಶ್ರೀಮಹಾಲಿಂಗೇಶ್ವರ ದೇವರ ಆಶೀರ್ವಾದ ಇರಲಿ. ಉದ್ಯಮ ಯಶಸ್ಸು ಹೊಂದಲಿ ಎಂದು ಶುಭಹಾರೈಸಿದರು.
ಅಶ್ವಿನಿ ಹೊಟೇಲ್ ಮಾಲಕ ಕರುಣಾಕರ್ ರೈ ದೇರ್ಲ, ಅಮ್ಮಣ್ಣ ರೈ ಪಾಪೆಮಜಲು, ಕಟ್ಟಡ ಮಾಲಕ ರವೀಶ್ ಪೈ, ನರೇಂದ್ರ ರೈ ದೇರ್ಲ, ನಿವೃತ್ತ ಶಿಕ್ಷಕರುಗಳಾದ ಜಗನ್ನಾಥ್ ರೈ, ರೂಪಕಲಾ ರೈ, ಅಶೋಕ್ ರೈ ದೇರ್ಲ, ಅಜಿತ್ ರೈ ದೇರ್ಲ, ನವಾಝ್ ಪರ್ಪುಂಜ, ಮಹೇಶ್ ರೈ ಅಂಕೊತ್ತಿಮಾರ್, ಡಾ.ಎ.ಕೆ.ರೈ, ಅಶ್ವಿನ್ ರೈ, ಶಿವಶ್ರೀರಂಜನ್ ರೈ ದೇರ್ಲ, ಫಿಲೋಮಿನಾ ಜೋಸೆಫ್, ಉಮೇಶ್ ಶೆಟ್ಟಿ ಆನೆಮಜಲು ಸೇರಿದಂತೆ ಹಲವು ಗಣ್ಯರು ಆಗಮಿಸಿ ಶುಭಹಾರೈಸಿದರು.
ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್‌ನ ಪಾಲುದಾರರಾದ ಡಾ.ಅರುಣ್ ಕುಮಾರ್ ರೈ ದೇರ್ಲ, ಅನಿಲ್ ಕುಮಾರ್ ರೈ ದೇರ್ಲ, ದಯಾನಂದ ರೈ ದೇರ್ಲ, ಅನುಷ್ ರೈರವರು ಅತಿಥಿಗಳನ್ನು ಸತ್ಕರಿಸಿ ಸ್ವಾಗತಿಸಿದರು. ಸಂಸ್ಥೆಯ ಜನರಲ್ ಮ್ಯಾನೇಜರ್ ದಿನೇಶ್ ರಾವ್, ರಿಟೈಲರ್ ಮ್ಯಾನೇಜರ್‌ಗಳಾದ ಶ್ರೀನಿವಾಸ್, ಪ್ರಜೇಶ್, ಹಾಗೂ ಸಿಬಂದಿ ವರ್ಗದವರು ಉಪಸ್ಥಿತರಿದ್ದರು. ಹರೀಶ್ ರೈ ಮುಗೇರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವೈಜ್ಞಾನಿಕ ರೀತಿಯಲ್ಲಿ ಆರೋಗ್ಯದಾಯಕವಾಗಿ ಚಿಕನ್ ಮಾಂಸದ ಪ್ರಾಸೆಸಿಂಗ್
ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ 2005ರಲ್ಲಿ ಆರಂಭಗೊಂಡಿತು. ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದ ಸಂಸ್ಥೆ ಇಂದು ದೊಡ್ಡ ಉದ್ಯಮವಾಗಿ ಬೆಳೆದಿದೆ. ಸುಮಾರು 600 ರಿಂದ 700ಮಂದಿ ಸಿಬ್ಬಂದಿಗಳು ಇದ್ದಾರೆ. ಅತ್ಯಂತ ವೈಜ್ಞಾನಿಕ ರೀತಿಯಲ್ಲಿ ಆರೋಗ್ಯದಾಯಕವಾಗಿ ಚಿಕನ್ ಮಾಂಸವನ್ನು ಪ್ರಾಸೆಸಿಂಗ್ ಮಾಡಲಾಗುತ್ತದೆ. ಚಿಕನ್ ಜನಸಾಮಾನ್ಯರಿಗೂ ಅತ್ಯಂತ ಕಡಿಮೆದ ದರದಲ್ಲಿ ಸಿಗುವ ಪ್ರೊಟೀನ್ ಆಗಿದೆ. ಗ್ರಾಹಕರಿಗೆ ಶುಚಿಯಾದ, ಆರೋಗ್ಯಪೂರ್ಣವಾದ ಮಾಂಸ ಕೊಡುವ ಉದ್ದೇಶದಿಂದ ಔಟ್‌ಲೆಟ್ ಆರಂಭ ಮಾಡುತ್ತಿದ್ದೇವೆ. ಪೌಲ್ಟ್ರಿ ಉದ್ಯಮದಿಂದ ಕೋಟ್ಯಾಂತರ ಉದ್ಯೋಗ ಸೃಷ್ಟಿಯಾಗಿದೆ. ದೇಶದ ಆರ್ಥಿಕತೆಗೆ ತುಂಬಾ ಕೊಡುಗೆ ಕೊಟ್ಟಿದೆ.
ಡಾ.ಅರುಣ್ ಕುಮಾರ್ ರೈ ದೇರ್ಲ, ಪಾಲುದಾರರು