ಯಾದವ ಜಿಲ್ಲಾ ಸಮಾವೇಶ, ಜಿಲ್ಲಾ ಕ್ರೀಡಾಕೂಟದ ಪೂರ್ವಭಾವಿ ಸಭೆ

0

ಪುತ್ತೂರು: ಯಾದವ ಸಭಾ ಕರ್ನಾಟಕ ಕೇಂದ್ರ ಸಮಿತಿ ಮಂಗಳೂರು ವತಿಯಿಂದ ಸುಳ್ಯ, ಮಂಗಳೂರು, ಬಂಟ್ವಾಳ ಯಾದವ ತಾಲೂಕು ಸಮಿತಿ ಸಹಯೋಗದೊಂದಿಗೆ ಪುತ್ತೂರು ತಾಲೂಕು ಯಾದವ ಸಭಾದ ಆಶ್ರಯದಲ್ಲಿ ಯಾದವ ಜಿಲ್ಲಾ ಸಮಾವೇಶ ಹಾಗೂ ಜಿಲ್ಲಾ ಕ್ರೀಡಾಕೂಟ ಇದರ ಪೂರ್ವಭಾವಿ ಸಭೆಯು ಪಾಣಾಜೆಯ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಂಗಣ ಆರ್ಲಪದವು ಇಲ್ಲಿ ನಡೆಯಿತು.

ಏ.06 ಆದಿತ್ಯವಾರ ಜಿಲ್ಲಾ ಮಟ್ಟದ ಯಾದವ ಕ್ರೀಡಾಕೂಟ ಹಾಗೂ ಏ.20 ನೇ ಆದಿತ್ಯವಾರ ಯಾದವ ಜಿಲ್ಲಾ ಸಮಾವೇಶ ನಡೆಸುವುದೆಂದು ಸಭೆಯಲ್ಲಿ ತಿರ್ಮಾನಿಸಲಾಯಿತು. ಪುತ್ತೂರು ತಾ. ಯಾದವ ಸಭಾದ ಆಶ್ರಯದಲ್ಲಿ ನಡೆಯುವ ಯಾದವ ಜಿಲ್ಲಾ ಸಮಾವೇಶ ಹಾಗೂ ಕ್ರೀಡಾಕೂಟ ಪಾಣಾಜೆಯಲ್ಲಿ ನಡೆಯಲಿದೆ.


ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಅಧ್ಯಕ್ಷ ಎ ಕೆ ಮಣಿಯಾಣಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸದಾನಂದ ಕಾವೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಚಂದ್ರಶೇಖರ್, ಯಾದವ ಸಭಾ ತಾಲೂಕು ಸಮಿತಿ ಮಂಗಳೂರು ಅಧ್ಯಕ್ಷ ಕೃಷ್ಣ ಬಿ ಪಡೀಲ್, ಯಾದವ ಸಭಾ ತಾಲೂಕು ಸಮಿತಿ ಬಂಟ್ವಾಳ ಅಧ್ಯಕ್ಷ ಅಶೋಕ್ ಕುಮಾರ್ ಅಮೈ, ಯಾದವ ಸಭಾ ಕೇಂದ್ರ ಸಮಿತಿ ಮಂಗಳೂರು ಕಾರ್ಯದರ್ಶಿ ರಾಮಚಂದ್ರ, ಯಾದವ ಸಭಾ ಪ್ರಾದೇಶಿಕ ಸಮಿತಿ ಪಾಣಾಜೆ ಅಧ್ಯಕ್ಷ ಧನಂಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಾದವ ಸಭಾ ತಾಲೂಕು ಸಮಿತಿ ಪುತ್ತೂರು ಅಧ್ಯಕ್ಷ ಪ್ರಸಾದ್ ಪಾಣಾಜೆ ಸ್ವಾಗತಿಸಿದರು.

LEAVE A REPLY

Please enter your comment!
Please enter your name here